ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾರೆ ಕೆಲಸದವನ 1 ವರ್ಷದ ಮಗು ಉಳಿಸಲು ಸಹಾಯ ಮಾಡಿ

Google Oneindia Kannada News

"ನನ್ನ ಮಗನನ್ನು ಈ ಜಗತ್ತಿಗೆ ಸ್ವಾಗತಿಸಿದ ದಿನವನ್ನು ನಾನೆಂದಿಗೂ ಮರೆಯುವುದಿಲ್ಲ. ನನ್ನ ಹೆಂಡತಿ ಮಗನನ್ನು ಕೈಯಲ್ಲಿ ಎತ್ತಿ ತನ್ನ ಎದೆಗೆ ಒತ್ತಿಕೊಂಡು ಮುದ್ದಾಡುತ್ತಿದ್ದಿದ್ದು, ಆ ಪುಟ್ಟ ಕಂದನ ಎರಡು ಕಣ್ಣುಗಳು ನಮ್ಮನ್ನು ನೋಡುತ್ತಿದ್ದಿದ್ದು ಎಲ್ಲವೂ ಕಣ್ಣಿಗೆ ಕಟ್ಟಿದ್ದಂತಿದೆ. ಆ ಸವಿ ನೆನಪುಗಳು ನನ್ನ ಜೀವನದ ಅತ್ಯಂತ ಸಂತೋಷದ ದಿನವಾಗಿತ್ತು. ಜೊತೆಗೆ ಈ ಜಗತ್ತಿನಲ್ಲಿ ಅತ್ಯಂತ ಸಂತೋಷವನ್ನು ಅನುಭವಿಸಿದ ವ್ಯಕ್ತಿ ಎಂದುಕೊಂಡಿದ್ದೆ" ಎಂದು ಸಾಮ್ರಾಟ್‍ನ ತಂದೆ ನೆನೆಪಿಸಿಕೊಳ್ಳುತ್ತಾರೆ.

ಇಂದು ಮನೋಜ್ ತನ್ನ ಮಗನನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಮನೆಗೆ ಹೊಸ ಅತಿಥಿಯಾಗಿ ಬಂದ ಸಾಮ್ರಾಟ್ ತನ್ನ ತಂದೆ-ತಾಯಿಗೆ ಹೊಸ ಜೀವನದ ಅಧ್ಯಾಯವನ್ನು ಪ್ರಾರಂಭಿಸಿದ್ದ. ಸಂತೋಷದ ಜೀವನವನ್ನು ನಡೆಸುತ್ತಿದ್ದ ಇವರ ಬದುಕಿನಲ್ಲಿ ಒಂದು ದುಃಖದ ಸಂಗತಿ ಎದುರಾಗಿತ್ತು.
ಸಾಮ್ರಾಟ್‍ಗೆ 1 ವರ್ಷ ಆಗುತ್ತಿದ್ದಂತೆ ಆರೋಗ್ಯ ಸಮಸ್ಯೆ ಕಾಡಲು ಪ್ರಾರಂಭಿಸಿತು. ಆಗಾಗ ಜ್ವರ ಮತ್ತು ಶೀತವು ಕಾಡುತ್ತಿತ್ತು. ಆರೋಗ್ಯ ತಪಾಸಣೆ ನಡೆಸಿದಾಗ ಅವನು ಸ್ವಲ್ಪ ಮಟ್ಟಿಗೆ ನ್ಯುಮೋನಿಯಾದಿಂದ ಬಳಲುತ್ತಿದ್ದಾನೆ ಎಂದು ವೈದ್ಯರು ಬಹಿರಂಗ ಪಡಿಸಿದರು.

ಈ ಹಿನ್ನೆಲೆಯಲ್ಲಿಯೇ ಸುಮಾರು 8 ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಗಾಗಿ ದಾಖಲು ಮಾಡಲಾಯಿತು. ಆರೋಗ್ಯದಲ್ಲಿ ಚೇತರಿಕೆ ಆದ ಬಳಿಕ ಮನೆಗೆ ಕರೆದುಕೊಂಡು ಬಂದರು.
ಆದರೆ, ಸಮಸ್ಯೆ ಇಲ್ಲಿಗೇ ಮುಗಿದಿರಲಿಲ್ಲ.

ಮತ್ತೆ-ಮತ್ತೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಅದಕ್ಕಾಗಿ ದಂಪತಿಗಳು ಮಗನ ಆರೋಗ್ಯ ತಪಾಸಣೆಗಾಗಿ ಹಲವಾರು ಪರೀಕ್ಷೆಗಳನ್ನು ಮಾಡಿಸಿದರು. ಕೊನೆಗೆ ಸಾಮ್ರಾಟನ ಹೃದಯದಲ್ಲಿ ರಂಧ್ರವಿದೆ ಎನ್ನುವುದು ತಿಳಿದು ಬಂದಿತು.

ಈ ವಿಷಯ ತಿಳಿದ ತಕ್ಷಣ ಸಾಮ್ರಾಟ್ ತಂದೆ ತನ್ನ ಪತ್ನಿಗೆ ತಿಳಿಸಿದರು. ವಿಷಯವನ್ನು ತಿಳಿದ ತಕ್ಷಣ ಆಕೆ ನೆಲಕ್ಕೆ ಕುಸಿದು ಬಿದ್ದಳು. ಮಗನ ಚಿಕಿತ್ಸೆಗೆ ಹಾಗೂ ಆರೋಗ್ಯ ಸಮಸ್ಯೆಗಾಗಿ ಏನು ಮಾಡುವುದು? ಎಂದು ಚಿಂತೆಗೆ ಒಳಗಾದರು.

ಮಗನ ಆರೋಗ್ಯ ಸುಧಾರಿಸಲು ತುರ್ತು ಹೃದಯ ಚಿಕಿತ್ಸೆ ನಡೆಸಬೇಕಿದೆ. ಇದಕ್ಕೆ 3 ಲಕ್ಷ ರೂಪಾಯಿ ಖರ್ಚಾಗುವುದು ಎಂದು ವೈದ್ಯರು ಹೇಳಿದ್ದಾರೆ. ಆದರೆ, ನನ್ನ ಆದಾಯ ಅಷ್ಟು ಹಣವನ್ನು ಸಂಗ್ರಹಿಸುವಷ್ಟಿಲ್ಲ. ಗಾರೆ ಕೆಲಸವನ್ನು ಮಾಡುವ ನನಗೆ ದಿನ ಕೂಲಿ 300 ರೂಪಾಯಿ. ಇದೀಗ ಮಗನ ಚಿಕಿತ್ಸೆ ಓಡಾಟ ಎನ್ನುವ ಕಾರಣದಿಂದ ಕೆಲಸವನ್ನು ಹೊಂದಿಲ್ಲ. ನನ್ನ ಹೆಂಡತಿಯು ಗೃಹಿಣಿಯಾಗಿರುವುದರಿಂದ ಯಾವುದೇ ಉತ್ಪನ್ನಗಳಿಲ್ಲ. ಈಗಾಗಲೇ ಮಗನ ಚಿಕಿತ್ಸೆಗಾಗಿ 2 ಲಕ್ಷ ರೂಪಾಯಿಯನ್ನು ಎರವಲು ಪಡೆದಿದ್ದೇನೆ. ಇದೀಗ ಮೂರು ಲಕ್ಷ ರೂಪಾಯಿ ಚಿಕಿತ್ಸೆಗೆ ಬೇಕಾಗಿದೆ. ಈ ಹಣವನ್ನು ಹೇಗೆ ಬರಿಸಬೇಕು ಎನ್ನುವುದು ತಿಳಿಯದಾಗಿದೆ ಎಂದು ಸಂಕಟ ವ್ಯಕ್ತ ಪಡಿಸುತ್ತಿದ್ದಾರೆ.

ಹಣವಿಲ್ಲದ ಕಾರಣ ಮಗನನ್ನು ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿಲ್ಲ. ಅವನನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದೇವೆ. ವೈದ್ಯರು ಹೇಳಿರುವ ಔಷಧವನ್ನು ನೀಡುತ್ತಿದ್ದೇವೆ ಅಷ್ಟೆ. ಆದರೆ ನನ್ನ ಮಗ ದಿನದಿಂದ ದಿನಕ್ಕೆ ದುರ್ಬಲನಾಗುತ್ತಿದ್ದಾನೆ. ಹಾಸಿಗೆಯಲ್ಲಿ ಎದ್ದೇಳಲು ಸಾಧ್ಯವಾಗುತ್ತಿಲ್ಲ. ಉಸಿರಾಡಲು ಸಹ ಪ್ರಯಾಸ ಪಡುತ್ತಿದ್ದಾನೆ. ಆದಷ್ಟು ಬೇಗ ಚಿಕಿತ್ಸೆಯನ್ನು ಕೊಡಿಸಬೇಕಿದೆ ಎಂದು ಸಾಮ್ರಾಟ್ ತಂದೆ ಅಸಾಹಯಕತೆ ಇಂದ ಹೇಳುತ್ತಾರೆ.

ಇದೀಗ ಇವರ ಕುಟುಂಬ ನಿಧಿ ಸಂಗ್ರಹವನ್ನು ಪ್ರಾರಂಭಿಸಿದೆ. ನಿಮಗೆ ಇವರ ಕುಟುಂಬಕ್ಕೆ ಸಹಾಯ ಮಾಡಬೇಕು ಅಥವಾ ಸಾಮ್ರಾಟ್‍ನ ಚಿಕಿತ್ಸೆಗೆ ಸಹಾಯ ಮಾಡಬೇಕು ಎಂಬ ಮನಸ್ಸಿದ್ದರೆ ನಿಧಿ ಸಂಗ್ರಹಕ್ಕೆ ಸಹಾಯ ಮಾಡಬಹುದು.

ಓದುಗರಿಗೆ ನನ್ನ ವಿನಮ್ರವಾದ ಮನವಿ...
ಪ್ರತಿಯೊಬ್ಬರ ಜೀವನದ ಭರವಸೆ ನಿಂತಿರುವುದು ಅವರ ಕುಟುಂಬದ ಪ್ರೀತಿ ಹಾಗೂ ಮಕ್ಕಳ ಭವಿಷ್ಯದ ಮೇಲೆ. ಇಂದು ನನ್ನ ಪ್ರಪಂಚ ಎಂದುಕೊಂಡ ನನ್ನ ಮಗನು ಹೃದಯ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಅವನ ಈ ಆರೋಗ್ಯ ಸಮಸ್ಯೆಗೆ ಸೂಕ್ತ ಆರೈಕೆ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನನ್ನದಾಗಿದೆ.

ನನ್ನ ಅಸಹಾಯಕತೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನೀವು ಈ ಬಡ ತಂದೆಗೆ ಸಹಾಯ ಮಾಡಿದರೆ ನನ್ನ ಮಗನ ಆರೋಗ್ಯ ಕಾಪಾಡಿದಂತಾಗುವುದು. ಅವನಿಗೆ ಹೊಸ ಜೀವನ ಕಲ್ಪಿಸಿದ ಪುಣ್ಯ ನಿಮ್ಮದಾಗುವುದು. ನಾನು ನಿಮ್ಮಲ್ಲಿ ಸಹನೀಯವಾಗಿ ಕೇಳಿಕೊಳ್ಳುವುದು ಎಂದರೆ ನನ್ನ ಮಗನ ಚಿಕಿತ್ಸೆಗೆ ನಿಮ್ಮ ಕೈಲಾದ ಹಣ ಸಹಾಯ ಮಾಡಿ ಎಂದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X