ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಪುಟಾಣಿಯ ಚಿಕಿತ್ಸೆಗೆ 'ಹೃದಯ'ವಂತರ ಸಹಾಯ ಬೇಕಿದೆ

Google Oneindia Kannada News

ಈ ಜಗತ್ತೇನೆಂದೇ ಅರಿಯದ ಪುಟ್ಟ ಪುಟಾಣಿಗಳು ಅನಾರೋಗ್ಯಕ್ಕೀಡಾದರೆ ಕರುಳು ಕಿತ್ತುಬಂದಂತಾಗುತ್ತದೆ. ಅದರಲ್ಲೂ ಬಡತನದ ಬೇಗೆಯಲ್ಲಿ ಬೇಯುತ್ತಿರುವ ಪೋಷಕರ ಮಕ್ಕಳಿಗೆ ಇಂಥ ಪರಿಸ್ಥಿತಿ ಬರಲೇಬಾರದು. ಆದರೆ, ದೈವದ ಚಿತ್ತ ಏನಿದೆಯೆಂದು ಬಲ್ಲವರು ಯಾರು? ತಾನೊಂದು ಬಗೆದರೆ ಮಾನವ, ಬೇರೊಂದು ಬಗೆವುದು ದೈವ!

ತನ್ನ ಪಿಳಿಪಿಳಿ ಕಣ್ಣುಗಳನ್ನು ಬಿಟ್ಟು ಜಗತ್ತನ್ನು ನೋಡಲು ಇನ್ನೂ ಯತ್ನಿಸುತ್ತಿರುವ 6 ತಿಂಗಳ ಪುಟಾಣಿಯ ಹೆಸರು ಅಬು ಬೇಕರ್. ಈ ಆರು ತಿಂಗಳ ಮಗು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದೆ. ಈಗಾಗಲೇ ಒಂದು ತಿಂಗಳಕಾಲ ದೆಹಲಿಯ ಅಪೊಲೊ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಚಿಕಿತ್ಸೆಯನ್ನು ಪಡೆದಿದೆ.

ಹುಟ್ಟಿದಾಗಿನಿಂದಲೇ ಈ ಮಗು ಹೃದಯ ಸಂಬಂಧಿ ಕಾಯಿಲೆಯಿಂದ ಸಮಸ್ಯೆಯಿಂದ ಬಳಲುತ್ತಿದೆ. ಮಗು ಬದುಕುಳಿಯಬೇಕಾಗಿದ್ದರೆ ಮೂರು ತೆರೆದ ಹೃದಯ ಚಿಕಿತ್ಸೆ ಮಾಡಲೇಬೇಕಿದೆ. ಇದರ ನಡುವೆ ದೀರ್ಘಕಾಲದ ಜ್ವರ ಮತ್ತು ನ್ಯುಮೋನಿಯಾ ರೋಗಲಕ್ಷಣದಿಂದಲೂ ಮಗು ಬಳಲುತ್ತಿರುವುದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತಾಗಿದೆ. ಸೂಕ್ತ ರೀತಿಯಲ್ಲಿ ಉಸಿರಾಡಲು, ತಾಯಿಯ ಎದೆ ಹಾಲನ್ನು ಕುಡಿಯಲು ಸಹ ಅಬುವಿಗೆ ಸಾಧ್ಯವಾಗುತ್ತಿಲ್ಲ.

ಅಬುವಿನ ತಂದೆ ಮೊಹಮ್ಮದ್ ಇಮ್ರಾನ್ ಸಣ್ಣ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಇದೀಗ ಮಗುವಿನ ಚಿಕಿತ್ಸೆಗಾಗಿ ಪತ್ನಿಯ ಜೊತೆಗೆ ದೆಹಲಿಗೆ ಹೋಗಿದ್ದಾರೆ. ಸಂಸಾರ ನಿರ್ವಹಣೆ ಇವರೊಬ್ಬರ ದುಡಿತದಿಂದಲೇ ಸಾಗುತ್ತಿದೆ. 10,000 ರುಪಾಯಿ ತಿಂಗಳ ಆದಾಯ ಹೊಂದಿರುವ ಇವರಿಗೆ ಕುಟುಂಬದ ನಿರ್ವಹಣೆ, ಬಾಡಿಗೆ ಮತ್ತು ಆಹಾರಕ್ಕಷ್ಟೇ ಸಾಲುತ್ತದೆ. ಇವರ ದುಡಿತದಲ್ಲಿ ಯಾವುದೇ ರೀತಿಯಲ್ಲೂ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ. ಮಗುವಿನ ಈ ಅನಾರೋಗ್ಯ ಸ್ಥಿತಿಗೆ ದುಬಾರಿ ವೆಚ್ಚದ ಚಿಕಿತ್ಸೆ ಮಾಡಿಸಬೇಕಾಗಿರುವುದು ಚಿಂತನೀಯ ವಿಚಾರವಾಗಿದೆ.

ಈಗಾಗಲೇ ಸ್ನೇಹಿತರು ಮತ್ತು ಸಂಬಂಧಿಕರ ಸಹಾಯದಿಂದ 3.5 ಲಕ್ಷ ರುಪಾಯಿ ಸಹಾಯ ಪಡೆದು ಮೊದಲ ಹಂತದ ಚಿಕಿತ್ಸೆಯನ್ನು ಮಾಡಿಸಿದ್ದಾರೆ. ಮುಂದಿನ ಎರಡು ಹಂತದ ಚಿಕಿತ್ಸೆ ಮಾಡಿಸಲು ಇವರಲ್ಲಿ ಹಣವಿಲ್ಲವಾಗಿದೆ. ಹಾಗಾಗಿ ಇಮ್ರಾನ್ ಮಗುವಿನ ಚಿಕಿತ್ಸೆಗಾಗಿ ಜನರಿಂದ ಹೆಚ್ಚಿನ ಸಹಾಯ ಬೇಡದೆ ಬೇರೆ ದಾರಿಯೇ ಇಲ್ಲ. ಮಗುವಿನ ಮುಂದಿನ ಚಿಕಿತ್ಸೆ ಹಾಗೂ ತಪಾಸಣೆಗೆ 3.5 ಲಕ್ಷ ರೂಪಾಯಿ ಬೇಕಿದೆ. ಈ ಹಿನ್ನೆಲೆಯಲ್ಲಿ ಇಮ್ರಾನ್ ಇಮ್‌ಪ್ಯಾಕ್ಟ್‌ ಗುರು ಡಾಟ್ ಕಾಮ್ ವೆಬ್‌ಸೈಟ್ ಮೂಲಕ ಹೃದಯವಂತರಿಂದ ಧನ ಸಹಾಯ ಕೇಳುತ್ತಿದ್ದಾರೆ.

"ನನ್ನ ಮಗುವಿನ ಆರೋಗ್ಯ ಸುಧಾರಣೆಗಾಗಿ ನನಗೆ ಪರಿಚಯವಿರುವ ಎಲ್ಲರಲ್ಲೂ ಈಗಾಗಲೇ ಸಹಾಯ ಬೇಡಿದ್ದೇನೆ. ಇನ್ನು ನನಗೆ ಉಳಿದ ದಾರಿಯೆಂದರೆ ಅಪರಿಚಿತರಿಂದಲೂ ಸಹಾಯ ಪಡೆದುಕೊಳ್ಳುವುದು. ಹಾಗಾಗಿಯೇ ನಾನು ತೆರೆದ ಹೃದಯ ಚಿಕಿತ್ಸೆಗಾಗಿ ವೆಬ್‌ಸೈಟ್ ಮೊರೆ ಹೋಗಿದ್ದೇನೆ. ನನ್ನ ಮಗುವಿನ ಅನಾರೋಗ್ಯ ಸುಧಾರಣೆಗೆ ಸಹಾಯ ಮಾಡಲು ಬಯಸುವವರು ImpactGuru.com ವೆಬ್ ಸೈಟ್‌ನ ಮೂಲಕ ಧನಸಹಾಯ ಮಾಡಬಹುದು" ಎಂದು ಇಮ್ರಾನ್ ಕೇಳಿಕೊಂಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X