ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Super Vasuki: ಭಾರತೀಯ ರೈಲ್ವೇಯ ಅತ್ಯಂತ ಉದ್ದವಾದ ಮತ್ತು ಭಾರವಾದ ಸರಕು ಸಾಗಣೆ ರೈಲು

|
Google Oneindia Kannada News

ಛತ್ತೀಸ್‌ಗಢ ಆಗಸ್ಟ್ 17: 'ಸೂಪರ್ ವಾಸುಕಿ' ಎಂಬ ಹೆಸರಿನ ಭಾರತದ ಅತಿ ಉದ್ದದ (3.5 ಕಿಮೀ) ಮತ್ತು ಭಾರವಾದ ಸರಕು ಸಾಗಣೆ ರೈಲನ್ನು ಆಗಸ್ಟ್ 15 ರಂದು ಭಾರತೀಯ ರೈಲ್ವೆ ಇಲಾಖೆ ಪ್ರಾರಂಭಿಸಿದೆ. 295 ಲೋಡ್ ವ್ಯಾಗನ್‌ಗಳು 27,000 ಟನ್ ಕಲ್ಲಿದ್ದಲನ್ನು ಛತ್ತೀಸ್‌ಗಢದ ಕೊರ್ಬಾ ಮತ್ತು ನಾಗಪುರದ ರಾಜನಂದಗಾವೊ ನಡುವೆ ಆಗಸ್ಟ್ 15 ರಂದು ಸಾಗಿಸಿತು. ಇದು 5 ಲೊಕೊಗಳ ಎಂಜಿನ್ ಸಾಮರ್ಥ್ಯ ಹೊಂದಿದೆ. 5 ರೇಕ್‌ಗಳ ಗೂಡ್ಸ್ ರೈಲುಗಳನ್ನು ಒಂದು ಘಟಕವಾಗಿ ಸಂಯೋಜಿಸಿ ರೈಲನ್ನು ರಚಿಸಲಾಗಿದೆ. ಭಾರತೀಯ ರೈಲ್ವೆ ಇಲಾಖೆ ಪ್ರಕಾರ, ಇದುವರೆಗೆ ಓಡಿದ ಅತ್ಯಂತ ಉದ್ದವಾದ ಮತ್ತು ಭಾರವಾದ ಸರಕು ಸಾಗಣೆ ರೈಲು ಇದಾಗಿದೆ.

"ಎಸ್ಇಸಿಆರ್ ಸೂಪರ್ ವಾಸುಕಿಯನ್ನು ರಚಿಸಿತು. ಇದನ್ನು ಓಡಿಸಲು ಪ್ರಾರಂಭಿಸಲಾಗಿದೆ. ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಭಾಗವಾಗಿ 15 ಆಗಸ್ಟ್ 2022 ರಂದು ಇದನ್ನು ಪ್ರಾರಂಭಿಸಲಾಯಿತು" ಎಂದು ಸೌತ್ ವೆಸ್ಟರ್ನ್ ರೈಲ್ವೇ ಅಧಿಕೃತ ಹೇಳಿಕೆ ತಿಳಿಸಿದೆ.

 Super Vasuki: Indian Railways longest and heaviest freight train

Breaking: ಛತ್ತೀಸ್‌ಗಢ; ಮನೆ ಗೋಡೆ ಕುಸಿದು ಒಂದೇ ಕುಟುಂಬದ ಐವರು ಸಾವುBreaking: ಛತ್ತೀಸ್‌ಗಢ; ಮನೆ ಗೋಡೆ ಕುಸಿದು ಒಂದೇ ಕುಟುಂಬದ ಐವರು ಸಾವು

ಸೂಪರ್ ವಾಸುಕಿ ಬಗ್ಗೆ

3.5 ಕಿಮೀ ಉದ್ದದ 295 ಲೋಡ್ ವ್ಯಾಗನ್‌ಗಳೊಂದಿಗೆ ಮತ್ತು ಇದು 5 ಲೊಕೊಗಳ ಎಂಜಿನ್ ಸಾಮರ್ಥ್ಯ ಹೊಂದಿದೆ. ಸುಮಾರು 27,000 ಟನ್ ಕಲ್ಲಿದ್ದಲನ್ನು ಹೊತ್ತೊಯುತ್ತದೆ. ಇದು ಭಾರತೀಯ ರೈಲ್ವೇ ಒಂದೇ ರೈಲು ವ್ಯವಸ್ಥೆಯಲ್ಲಿ ಸಾಗಿಸಿದ ಅತ್ಯಧಿಕ ಇಂಧನ ಸಾಗಣೆಯಾಗಿದೆ. ರೈಲ್ವೆ ಇಲಾಖೆಯು ಮುಂಬರುವ ದಿನಗಳಲ್ಲಿ ಈ ರೀತಿಯ ರೈಲುಗಳನ್ನು ಹೆಚ್ಚಾಗಿ ಬಳಸಲು ಯೋಜಿಸಿದೆ. ವಿಶೇಷವಾಗಿ ವಿದ್ಯುತ್ ಕೇಂದ್ರಗಳ ಇಂಧನ ಕೊರತೆಯನ್ನು ತಡೆಗಟ್ಟಲು ಗರಿಷ್ಠ ಬೇಡಿಕೆಯ ಋತುವಿನಲ್ಲಿ ಕಲ್ಲಿದ್ದಲು ಸಾಗಿಸಲು ಈ ರೈಲು ಬಳಕೆಗೆ ನಿರ್ಧರಿಸಲಾಗಿದೆ.

 Super Vasuki: Indian Railways longest and heaviest freight train

ವರದಿಗಳ ಪ್ರಕಾರ, ಈ ರೈಲಿನಲ್ಲಿ ಸಾಗಿಸುವ ಒಟ್ಟು ಕಲ್ಲಿದ್ದಲು ಒಂದು ಪೂರ್ಣ ದಿನಕ್ಕೆ 3000 ಮೆಗಾವ್ಯಾಟ್ ವಿದ್ಯುತ್ ಸ್ಥಾವರವನ್ನು ಉರಿಸಲು ಬಳಸಲಾಗುತ್ತದೆ. ಇದು ಒಂದು ಪ್ರಯಾಣದಲ್ಲಿ ಸುಮಾರು 9,000 ಟನ್ ಕಲ್ಲಿದ್ದಲನ್ನು ಸಾಗಿಸುವ ಅಸ್ತಿತ್ವದಲ್ಲಿರುವ ರೈಲ್ವೆಯ ಸಾಮರ್ಥ್ಯಕ್ಕಿಂತ ಮೂರು ಪಟ್ಟು ಹೆಚ್ಚು ಆಗಿದೆ.

English summary
India's longest (3.5 km) and heaviest freight train named 'Super Vasuki' was launched on 15th August.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X