ಪದಗಳ ಆಯ್ಕೆ ಜಾಣ್ಮೆಯಿಂದ ಕೂಡಿರಬೇಕು: ವರ್ಮಾಗೆ ಸನ್ನಿ ತಿರುಗೇಟು

Posted By:
Subscribe to Oneindia Kannada

ಮುಂಬೈ, ಮಾರ್ಚ್ 10: ವಿಶ್ವ ಮಹಿಳಾ ದಿನಾಚರಣೆಯಂದು, ಮಹಿಳೆಯರನ್ನು ಸನ್ನಿ ಲಿಯೋನ್ ಹೋಲಿಸುವುದರ ಮೂಲಕ ವಿವಾದವನ್ನು ಮೈಮೇಲೆಳೆದುಕೊಂಡಿದ್ದ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಸನ್ನಿ ಲಿಯೋನ್ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ತಾವೇ ಖುದ್ದಾಗಿ ಮಾತನಾಡಿರುವ ವೀಡಿಯೊ ತುಣುಕೊಂದನ್ನು ಟ್ವಿಟರ್ ನಲ್ಲಿ ಹರಿಯಬಿಟ್ಟಿರುವ ಅವರು, ''ಭಾರತೀಯರು ತಮ್ಮ ಮನಸ್ಥಿತಿಗಳನ್ನು ಬದಲಾಯಿಸಿಕೊಳ್ಳಬೇಕು'' ಎಂದಿದ್ದಾರೆ.[ಮಹಿಳೆಯರನ್ನು ಸನ್ನಿಲಿಯೋನ್ ಗೆ ಹೋಲಿಸಿದ್ದ ಆರ್ ಜಿವಿ ವಿರುದ್ಧ ದೂರು][ಗ್ಯಾಲರಿ ಸನ್ನಿ ಲಿಯೋನ್]

ಅಲ್ಲದೆ, ''ಯಾವ ಸಂದರ್ಭದಲ್ಲಿ ಯಾವ ಮಾತುಗಳನ್ನಾಡಬೇಕೋ ಅಂಥದ್ದೇ ಮಾತುಗಳನ್ನಾಡಬೇಕು. ಪದಗಳನ್ನು ಪ್ರಯೋಗಿಸುವಾಗ ಜಾಣ್ಮೆ ತೋರಬೇಕು'' ಎಂದು ನಯವಾಗಿ ಝಾಡಿಸಿದ್ದಾರೆ.[ವಿಡಿಯೋ: ಸನ್ನಿ ಲಿಯೋನ್ ರ ವಿವಾದಿತ ಕಾಂಡೋಮ್ ಜಾಹೀರಾತು!]

ಮಹಿಳಾ ದಿನದಂದು ಭುಗಿಲೆದ್ದ ಆಕ್ರೋಶ

ವಿಶ್ವ ಮಹಿಳಾ ದಿನಾಚರಣೆ ಆಚರಣೆ ದಿನದಂದು (ಮಾ. 8) ಎಲ್ಲಾ ಮಹಿಳೆಯರೂ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರಂತೆ ಪುರುಷರನ್ನು ಖುಷಿಪಡಿಸಬೇಕು ಎಂದು ಟ್ವೀಟ್ ಮಾಡಿದ್ದ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿವಾದಕ್ಕೆ ಸಿಲುಕಿದ್ದರು.

ಯಾವುದಕ್ಕೂ ಜಗ್ಗಲಿಲ್ಲ

ಯಾವುದಕ್ಕೂ ಜಗ್ಗಲಿಲ್ಲ

ಅವರ ಟ್ವೀಟ್ ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದರೂ ತಮ್ಮ ಹೇಳಿಕೆಯನ್ನು ವರ್ಮಾ ಹಿಂಪಡೆಯಲಿಲ್ಲ ಅಥವಾ ಕ್ಷಮೆ ಯಾಚಿಸಲಿಲ್ಲ. ಅವರ ಟ್ವೀಟ್ ವಿರುದ್ಧ ಗೋವಾದಲ್ಲಿ ದೂರು ದಾಖಲಾಯಿತು.[ಕ್ಷಮೆ ಕೇಳದಿದ್ರೆ ಬೂಟುಗಳಲ್ಲಿ ಹೊಡೀತಿವಿ: ಆರ್ ಜಿವಿಗೆ ಎನ್ ಸಿಪಿ ಬೆದರಿಕೆ]

ಡೋಂಟ್ ಕೇರ್ ಅಂದ ವರ್ಮಾ

ಕೆಲವರಂತೂ ವರ್ಮಾಗೆ ಕಾನೂನು ಕೈಗೆ ತೆಗೆದುಕೊಳ್ಳುವ ಬೆದರಿಕೆಯನ್ನೂ ಹಾಕಿದ್ದರು. ಇದಕ್ಕೆ ವರ್ಮಾ ಕೂಡ ಉತ್ತರಿಸಿ ತಮ್ಮ ಕಚೇರಿ ವಿಳಾಸ ನೀಡಿದ್ದರು. ಅಲ್ಲದೆ, ಸನ್ನಿ ಲಿಯೋನ್ ಬಗ್ಗೆ ಹೇಳಿದ್ದಕ್ಕೆ ಕಿಡಿಕಾರುತ್ತಿರುವವರು ಬೂಟಾಟಿಕೆ ಜನ ಎಂದೂ ಕಿಚಾಯಿಸಿದ್ದರು.

ಪಕ್ಷದಿಂದಲೂ ಬೆದರಿಕೆ

ಪಕ್ಷದಿಂದಲೂ ಬೆದರಿಕೆ

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವು (ಎನ್ ಸಿಪಿ), ವರ್ಮಾ ಕ್ಷಮೆ ಕೇಳದಿದ್ದರೆ ಬೂಟುಗಳಲ್ಲಿ ಹೊಡೆಯುವುದಾಗಿ ಕಿಡಿಕಾರಿತ್ತು. ಗುರುವಾರ (ಮಾ. 9) ಸಂಜೆ ವೇಳೆಗೆ ಭಾರತೀಯ ಮಜ್ದೂರ್ ಸಂಘಟನೆಯೂ ಕೂಡ ವರ್ಮಾ ವಿರುದ್ಧ ಹರಿಹಾಯ್ದು, ಕ್ಷಮೆಗೆ ಆಗ್ರಹಿಸಿತ್ತಲ್ಲದೆ, ವರ್ಮಾ ಕ್ಷಮೆ ಕೇಳದಿದ್ದರೆ ಅವರ ಚಿತ್ರಗಳನ್ನು ನಿಷೇಧಿಸುವ ಎಚ್ಚರಿಕೆಯನ್ನೂ ನೀಡಿತ್ತು.

ವರ್ಮಾಗೆ ಸನ್ನಿ ಪರೋಕ್ಷ ಬುದ್ಧಿವಾದ

ವರ್ಮಾಗೆ ಸನ್ನಿ ಪರೋಕ್ಷ ಬುದ್ಧಿವಾದ

ಯಾವುದೇ ಬೆದರಿಕೆಗಳಿಗೂ ವರ್ಮಾ ಜಗ್ಗಿರಲಿಲ್ಲ. ಆದರೆ, ಶುಕ್ರವಾರ ಅವರು ಕ್ಷಮೆ ಯಾಚಿಸಿದ್ದರು. ಆದರೆ, ಇದಕ್ಕೆ ಖುದ್ದು ಉತ್ತರ ನೀಡಿರುವ ಸನ್ನಿ ಲಿಯೋನ್ ಈ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರಲ್ಲದೆ, ವರ್ಮಾಗೆ ಪರೋಕ್ಷವಾಗಿ ಬುದ್ಧವಾದ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sunny Leone posted a video on Twitter in which she asks all to change mindset. While she doesn’t take names, it is evident she is talking in the context of Ram Gopal Varma’s apology on his tweet on March 8.
Please Wait while comments are loading...