ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುನಂದಾ ಪುಷ್ಕರ್‌ ಸಾವಿನ ಹಿಂದೆ ವಿದೇಶಿಗನ ಕೈವಾಡ?

|
Google Oneindia Kannada News

ನವದೆಹಲಿ, ನ. 14: ಸುನಂದಾ ಪುಷ್ಕರ್‌ ಸಾವಿನ ಹಿಂದೆ ವಿದೇಶಿಗನೊಬ್ಬನ ಕೈವಾಡವಿದೆಯೆ? ಪಾಕಿಸ್ತಾನ ಅಥವಾ ದುಬೈ ಪ್ರಜೆಯೊಬ್ಬನು ಭಾಗಿಯಾಗಿದ್ದಾನೆಯೇ? ಹೀಗೊಂದು ಅನುಮಾನದ ಎಳೆ ಸಿಬಿಐ ಪೊಲೀಸರನ್ನು ಕಾಡತೊಡಗಿದೆ.

ಜನವರಿ 17 ರಂದು ನಿಗೂಢ ಸಾವನ್ನಪ್ಪಿದ ಕೇಂದ್ರದ ಮಾಜಿ ಸಚಿವ ಶಶಿ ತರೂರ್‌ ಪತ್ನಿ ಸುನಂದಾ ಪುಷ್ಕರ್‌ ಸಾವು ಪ್ರತಿದಿನ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪ್ರಕರಣದ ಮೂಲ ಬೇರುಗಳು ಪಾಕಿಸ್ತಾನ ಅಥವಾ ದುಬೈನಲ್ಲಿ ಇರಬಹುದು ಎಂದು ಸಿಬಿಐ ಶಂಕೆ ವ್ಯಕ್ತಪಡಿಸಿದೆ.[ಸುನಂದಾ ದೇಹದಲ್ಲಿತ್ತು ವಿಷದ ಅಂಶ]

sunanda

ಹಿರಿಯ ಅಧಿಕಾರಿಗಳು ಹೇಳುವಂತೆ ಸಾವಿನಲ್ಲಿ ವಿದೇಶಿಗನೊಬ್ಬ ಪಾಲ್ಗೊಂಡಿದ್ದಾನೆ. ಆತ ಪಾಕಿಸ್ತಾನ ಅಥವಾ ದುಬೈನಿಂದ ಬಂದಿಳಿದಿರಬಹುದು. ಈ ಹಿನ್ನೆಲೆಯಲ್ಲಿ ಜನವರಿ 17 ಮತ್ತು ಹಿಂದಿನ ಒಂದೆರಡು ದಿನ ವಿಮಾನ ಪ್ರಯಾಣ ಮಾಡಿದವರ ಪಟ್ಟಿ ಸಿದ್ಧಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ಭಾರತದ ಗುಪ್ತಚರ ದಳ ಮತ್ತು ವಿಮಾನ ಯಾನ ಖಾತೆಯ ನೆರವು ಪಡೆಯಲಾಗುವುದು ಎಂದು ತಿಳಿಸಿದ್ದಾರೆ.[ಸುನಂದಾಗೆ ರಷ್ಯನ್ ವಿಷ, ಮೈತುಂಬಾ ಗಾಯ!]

ಸುನಂದಾ ದೇಹದ ಭಾಗಗಳನ್ನು ಪರಿಶೀಲಿಸಿದಾಗ ಅನೇಕ ಅಂಶಗಳು ಬೆಳಕಿಗೆ ಬಂದಿವೆ, ಆಕೆಯ ಗುಪ್ತಾಂಗದಲ್ಲಿ ವಿಷದ ಅಂಶ ಇತ್ತು ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಅಲ್ಲದೇ ಇತ್ತೀಚೆಗೆ ಸುನಂದಾ ಉಳಿದುಕೊಂಡಿದ್ದ ಕೋಣೆಯಲ್ಲಿ ಗಾಜಿನ ಚೂರುಗಳು ಕಂಡು ಬಂದಿವೆ. ಆಕೆಯ ಚಪ್ಪಲಿ ಮತ್ತು ಕೆಲ ಬಟ್ಟೆಗಳನ್ನು ಕಳ್ಳತನ ಮಾಡಲಾಗಿದೆ ಎಂದೂ ವರದಿಯಾಗಿತ್ತು. ಒಟ್ಟಿನಲ್ಲಿ ಪ್ರಕರಣ ಮತ್ತಷ್ಟು ಕಗ್ಗಂಟಾಗುತ್ತಿದ್ದು ಸಿಬಿಐ ಮುಂದೆ ಪ್ರಕರಣದ ಸತ್ಯಾಸತ್ಯತೆ ಬಯಲಿಗೆಳೆಯುವ ಸವಾಲಿದೆ.

English summary
The Sunanda Pushkar probe has taken a new twist with Delhi Police reportedly seeking the list of passengers who travelled from Dubai and Pakistan to Delhi, and vice versa, on January 17 - the day the wife of former UPA minister Shashi Tharoor was found dead in a five star hotel in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X