ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುನಂದಾ ಹತ್ಯೆ ಪ್ರಕರಣ: ಅಮರ್ ಸಿಂಗ್ ಗೆ ಸಮನ್ಸ್

By Mahesh
|
Google Oneindia Kannada News

ನವದೆಹಲಿ, ಜ.28: ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ ಅವರಿಗೆ ವಿಶೇಷ ತನಿಖಾ ತಂಡ ಸಮನ್ಸ್ ಬುಧವಾರ ಜಾರಿಗೊಳಿಸಿದೆ.

ಸುನಂದಾ ಪುಷ್ಕರ್ ಕೊಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ದೆಹಲಿಯ ವಿಶೇಷಾ ತನಿಖಾ ಅಧಿಕಾರಿಗಳು, ಅಮರ್ ಸಿಂಗ್ ಅವರನ್ನು ವಿಚಾರಣೆಗೊಳಪಡಿಸಿ ಹೆಚ್ಚಿನ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ಸುನಂದಾ ಸಾವು, ಐಪಿಎಲ್ ತಂಡಗಳು, ಹಗರಣದ ಬಗ್ಗೆ ಅಮರ್ ಸಿಂಗ್ ಬಳಿ ಹೆಚ್ಚಿನ ಮಾಹಿತಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ. [ಶಶಿ ತರೂರ್‌ಗೆ ಸಿಟ್ ಕೇಳಿದ 6 ಪ್ರಮುಖ ಪ್ರಶ್ನೆಗಳು]

Sunanda Pushkar case: Amar Singh summoned for questioning

ಐಪಿಎಲ್ ವಿವಾದ: ಇತ್ತೀಚೆಗೆ ಶಶಿ ತರೂರ್ ಅವರನ್ನು ಎಸ್ ಐಟಿ ವಿಚಾರಣೆಗೊಳಪಡಿಸಿತ್ತು. ನಂತರಹಿರಿಯ ಪತ್ರಕರ್ತೆ ನಳಿನಿ ಸಿಂಗ್ ಅವರನ್ನು ವಿಚಾರಣೆಗೊಳಪಡಿಸಲು ಎಸ್ ಐಟಿ ಸಜ್ಜಾಯಿತು. ಇದೆಲ್ಲವೂ ಸುನಂದಾ ಕೊಲೆ ಹಾಗೂ ಐಪಿಎಲ್ ಸುತ್ತಾ ಹುಟ್ಟಿಕೊಂಡಿರುವ ಅನುಮಾನದ ಹುತ್ತವನ್ನು ತುಂಡರಿಸುವುದೇ ಆಗಿದೆ. [ಪತ್ರಕರ್ತೆ ನಳಿನಿ ಸಿಂಗ್ ವಿಚಾರಣೆ]

ಪಾಕಿಸ್ತಾನಿ ಪತ್ರಕರ್ತೆ ತರಾರ್ ಹಾಗೂ ಶಶಿ ತರೂರ್ ನಡುವೆ ನಡೆದಿದೆ ಎನ್ನಲಾದ ಪ್ರಣಯ ಸಂದೇಶ ವಿನಿಮಯದ ಬಗ್ಗೆ ಸುನಂದಾ ಅವರು ನಳಿನಿ ಬಳಿ ಹೇಳಿಕೊಂಡಿದ್ದರು ಎಂದು ನಳಿನಿ ಸಿಂಗ್ ಹೇಳಿಕೆ ನೀಡಿದ ಬೆನ್ನಲ್ಲೇ ವಿಚಾರಣೆ ಎದುರಿಸಬೇಕಾಯಿತು.

ಅದೇ ರೀತಿ ಅಮರ್ ಸಿಂಗ್ ಕೂಡಾ ಸುನಂದಾ ಬಗ್ಗೆ ಮಾತನಾಡುತ್ತಾ, ಆಕೆ ಒಮ್ಮೆ ನನ್ನ ಮುಂದೆ ಗೊಳೋ ಎಂದು ಅತ್ತುಬಿಟ್ಟಳು, ಐಪಿಎಲ್ ಹಗರಣದಿಂದ ಹೊರಬಂದರೆ ಸಾಕು ಎಂದಿದ್ದಳು ಎಂದು ಹೇಳಿದ್ದರು. ಅಮರ್ ಸಿಂಗ್ ಹಾಗೂ ಸುನಂದಾ ಕುಟುಂಬಕ್ಕೆ ನಿಕಟ ನಂಟಿರುವುದು ಎಲ್ಲರಿಗೂ ಗೊತ್ತೇ ಇದೆ. ಅದರೆ, ಅಮರ್ ಸಿಂಗ್ ಅವರ ಬಳಿ ಸುನಂದಾ ನಿಜಕ್ಕೂ ಐಪಿಎಲ್ ವಿಷಯಕ್ಕಾಗಿ ಕಣ್ಣೀರಿಟ್ಟರೇ ಎಂಬುದನ್ನು ಪತ್ತೆ ಹಚ್ಚಲು ಎಸ್ ಐಟಿ ಈಗ ಮುಂದಾಗಿದೆ.

English summary
Former Samajwadi Party leader, Amar Singh who had made sensational claims about the Sunanda Pushkar murder case has been summoned by the Special Investigating Team of the Delhi police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X