ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಬೇಸಿಗೆಯ ಸೆಕೆ ಕೊರೊನಾವನ್ನು ಕೊಲ್ಲುವುದೇ?:ಸಂಶೋಧನೆ ಏನು ಹೇಳುತ್ತೆ?

|
Google Oneindia Kannada News

ನವದೆಹಲಿ, ಏಪ್ರಿಲ್ 17: ಇಡೀ ಜಗತ್ತನ್ನೇ ಮೃತಕೂಪಕ್ಕೆ ದೂಡಿರುವ ಕೊರೊನಾ ವೈರಸ್‌ನ್ನು ಕೊಲ್ಲಲು 92 ಡಿಗ್ರಿ ಸೆಲ್ಸಿಯಸ್ ತೀವ್ರ ಉಷ್ಣಾಂಶದಿಂದ ಮಾತ್ರ ಸಾಧ್ಯ ಎಂಬುದು ಸಂಶೋಧನೆಯೊಂದರಿಂದ ಸಾಬೀತಾಗಿದೆ.

Recommended Video

B.S.Yediyurappa order to close pub, mall, cinema hall from March 14, 2020 all over the state | Bandh

ಹಾಗಾಗಿ ಭಾರತದ ಬೇಸಿಗೆಯ ಸೆಕೆಯಿಂದ ಕೊರೊನಾವನ್ನು ಕೊಲ್ಲಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾದಂತಾಗಿದೆ. ಭಾರತದಲ್ಲಿ ಬೇಸಿಗೆಯ ಬಿಸಿ ಕೊವಿಡ್ 19 ರೋಗವನ್ನು ನಿಯಂತ್ರಿಸುತ್ತದೆ ಎನ್ನುವ ಊಹಾಪೂಹಗಳಿಗೆ ಸಂಶೋಧನೆಯು ತೆರೆ ಎಳೆದಿದೆ.

ವಿದೇಶದಲ್ಲಿರುವ 25 ಭಾರತೀಯರು ಕೊರೊನಾದಿಂದ ಸಾವುವಿದೇಶದಲ್ಲಿರುವ 25 ಭಾರತೀಯರು ಕೊರೊನಾದಿಂದ ಸಾವು

ನೀರು ಕುದಿಯಲು 100 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಅಗತ್ಯವಾಗಿದ್ದು, ಅದಕ್ಕಿಂತ ಕೇವಲ ಎಂಟು ಡಿಗ್ರಿ ಸೆಲ್ಸಿಯಷ್ ಉಷ್ಣದವರೆಗೂ ಈ ಮಾರಕ ವೈರಾಣು ಉಳಿಯಬಲ್ಲದಾಗಿದೆ. ಫ್ರಾನ್ಸ್‌ನ ಎಕ್ಸ್-ಮಾರ್ಸೆಲ್ ವಿಶ್ವವಿದ್ಯಾಲಯ ಈ ಅಧ್ಯಯನ ವರದಿಯನ್ನು ಪ್ರಕಟಿಸಿದೆ.

Summer Heat Not Enough To Kill Coronavirus

ಶಂಕಿತ ಕೊರೊನಾ ಪಾಸಿಟಿವ್ ರೋಗಿಗಳನ್ನು ನಿರ್ವಹಿಸುವ ಆರೋಗ್ಯ ಸಿಬ್ಬಂದಿಯ ಸುರಕ್ಷತಾ ಅಂಶಗಳ ಮೇಲೆ ಅಧ್ಯಯನ ನಡೆಸಿದ ವಿಜ್ಞಾನಿಗಳು ಗಮನ ಕೇಂದ್ರೀಕರಿಸಿದ್ದರು.

60 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಒಂದು ಗಂಟೆ ಕಾಲ ವೈರಸ್‌ ಅನ್ನು ಬಿಸಿ ಮಾಡಿದರೂ ಅದರ ಮರುಸೃಷ್ಟಿ ಸಾಮರ್ಥ್ಯ ನಾಶವಾಗುವುದಿಲ್ಲ ಎಂದು ರೇಮಿ ಚಾರೆಲ್ ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ. ಹಾಗೆಯೇ 92 ಡಿಗ್ರಿ ಸೆಲ್ಸಿಯಸ್ ನಲ್ಲಿ 15 ನಿಮಿಷ ಕಾಯಿಸಿದಾಗಷ್ಟೇ ವೈರಸ್ ನಾಶವಾಗಿತ್ತು.

ಮಾದರಿಗಳ ಮೇಲೆ ನಡೆಸುವ ಪರೀಕ್ಷೆಗಳು ದೃಢಪಡುವ ಮುನ್ನ ವೈರಸ್ ನಿಷ್ಕ್ರಿಯವಾಗುವುದನ್ನು ಖಾತರಿಪಡಿಸಲು ಅಗತ್ಯವಾದ ಕ್ರಮಗಳ ಬಗ್ಗೆ ಆಲೋಚನೆ ನಡೆಸಿದ್ದಾರೆ.

English summary
Latest research into the Novel Coronavirus SARS CoV-2 has discovered and established that the virus that is responsible for the fast-spreading Covid-19 disease, can survive up to a sizzling 92º Celsius of heat, just eight (8) degrees shy of 100-degree Celsius temperature required to boil water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X