ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್‌ಗೆ ಬೆಂಗಾವಲಾಗಿದ್ದ ಯುದ್ಧ ವಿಮಾನಗಳ ಬಗ್ಗೆ ಗೊತ್ತಾ?

|
Google Oneindia Kannada News

ಬೆಂಗಳೂರು, ಜುಲೈ 30: ಕಳೆದ ಮೂರು ದಿನಗಳಿಂದ ಇಡೀ ದೇಶದಲ್ಲಿ ರಫೇಲ್ ಯುದ್ಧ ವಿಮಾನಗಳದ್ದೇ ಚರ್ಚೆ. ಫ್ರಾನ್ಸ್‌ನಿಂದ ಹೊರಟಿದ್ದ ಐದು ಫೈಟರ್‌ ಜೆಟ್‌ಗಳು ನಿನ್ನೆ ಭಾರತೀಯ ವಾಯು ಸೇನೆಯನ್ನು ಸೇರಿವೆ. ಆ ಮೂಲಕ ನಮ್ಮ ವಾಯು ಸೇನೆಗೆ ಆನೆ ಬಲ ಬಂದಂತಾಗಿದೆ. ರಫೇಲ್ ಯುದ್ಧ ವಿಮಾನಗಳ ಕುರಿತು ಚರ್ಚೆಗಳೇನೆ ನಡೆದಿರಲಿ, ರಕ್ಷಣಾ ವಿಚಾರದಲ್ಲಿ ಯಾರೂ ರಾಜಿಯಾಗುವುದು ಸಾಧ್ಯವಿಲ್ಲ.

ಆದರೆ ಹಿಂದೆ ನಮ್ಮಲ್ಲಿ ಯುದ್ಧ ವಿಮಾನಗಳು ಇರಲಿಲ್ಲವಾ? ಖಂಡಿತವಾಗಿಯೂ ಸಾಕಷ್ಟು ಬಗೆಯ ಯುದ್ಧ ವಿಮಾನಗಳು ನಮ್ಮ ವಾಯು ಸೇನೆಯಲ್ಲಿವೆ. ಆದರೆ ಅವೆಲ್ಲವುಗಳಿಗಿಂತ ಅತ್ಯಂತ ಸುಧಾರಿತ ತಂತ್ರಜ್ಞಾನವನ್ನು ರಫೇಲ್ ವಿಮಾನಗಳು ಹೊಂದಿವೆ ಎಂಬುದು ರಕ್ಷಣಾ ತಜ್ಞರ ಅಭಿಪ್ರಾಯ. ಆದರೆ ಈ ರಫೇಲ್ ಯುದ್ಧ ವಿಮಾನಗಳಿಗೆ ಬೆಂಗಾವಲಾಗಿ ಕರೆತಂದಿರುವ ವಿಮಾನಗಳು ನಮ್ಮದೇ ವಾಯುಸೇನೆಯಲ್ಲಿ ಕಳೆದ 24 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಫೈಟರ್ ಜೆಟ್‌ಗಳು. ಅವು ಯಾವ ಫೈಟರ್ ಜೆಟ್‌ಗಳು, ಯಾವಾಗ ಅವುಗಳನ್ನು ಖರೀದಿಸಲಾಗಿದೆ? ಈ ಎಲ್ಲ ಕುತೂಹಲಗಳಿಗೆ ವಿವರಗಳು ಇಲ್ಲಿವೆ!

ಯುದ್ಧ ವಿಮಾನ ವಿಶೇಷ: ಫ್ರಾನ್ಸಿನಿಂದ ಬಂದ ಜೆಟ್ ರಫೇಲ್ಯುದ್ಧ ವಿಮಾನ ವಿಶೇಷ: ಫ್ರಾನ್ಸಿನಿಂದ ಬಂದ ಜೆಟ್ ರಫೇಲ್

ಫ್ರಾನ್ಸ್‌ನಿಂದ ಅಂಬಾಲಾಕ್ಕೆ

ಫ್ರಾನ್ಸ್‌ನಿಂದ ಅಂಬಾಲಾಕ್ಕೆ

ರಫೇಲ್‌ ಯುದ್ಧ ವಿಮಾನಗಳು ಫ್ರಾನ್ಸ್‌ನಿಂದ ಭಾರತ ತಲುಪುವವರೆಗೆ ನಡೆದ ಚರ್ಚೆಗಳು ಕಡಿಮೆ ಏನಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ನಡೆದ ಆರೋಪ ಪ್ರತ್ಯಾರೋಪಗಳಿಗೆ ಇಡೀ ದೇಶವೇ ವೇದಿಕೆಯಂತಾಗಿತ್ತು. ಇಷ್ಟೆಲ್ಲ ಚರ್ಚೆಗಳ ಬಳಿಕವೂ ರಕ್ಷಣೆಯ ವಿಚಾರಕ್ಕೆ ಬಂದರೆ ಎರಡೂ ರಾಷ್ಟ್ರೀಯ ಪಕ್ಷಗಳು ದೇಶದ ರಕ್ಷಣೆಗೆ ಮೊದಲ ಪ್ರಾಶಸ್ತ್ಯ ಎಂಬ ಒಂದೇ ಅಭಿಮತವನ್ನು ಹೊಂದಿವೆ.

ಫ್ರಾನ್ಸ್‌ನಿಂದ ಹಾರಿದ್ದ ರಫೇಲ್ ವಿಮಾನಗಳು ಭಾರತದ ಹರ್ಯಾಣಾದ ಅಂಬಾಲಾ ವಾಯುನೆಲೆಯಲ್ಲಿ ಭಾರತೀಯ ಸೇನೆಯನ್ನು ಸೇರಿವೆ. ಆದರೆ ಈ ಐದೂ ರಫೇಲ್ ಯುದ್ಧ ವಿಮಾನಗಳನ್ನು ಬೆಂಗಾವಲಾಗಿ ಕರೆತಂದಿದ್ದು ನಮ್ಮ ದೇಶದಲ್ಲಿರುವ ಫೈಟರ್ ಜೆಟ್‌ಗಳು. ಆ ಫೈಟರ್ ಜೆಟ್‌ಗಳು 24 ವರ್ಷಗಳಿಂದ ಭಾರತೀಯ ವಾಯುಸೇನೆಯಲ್ಲಿ ಅತ್ಯಂತ ಕರಾರುವಾಕ್ ದಾಳಿಗೆ ಹೆಸರಾಗಿವೆ.

ಬೆಂಗಾವಲು ಫೈಟರ್ ಜೆಟ್

ಬೆಂಗಾವಲು ಫೈಟರ್ ಜೆಟ್

ಭಾರತದ ವಾಯು ವಿಭಾಗಕ್ಕೆ 5 ರಫೇಲ್ ಯುದ್ಧ ವಿಮಾನ ಸೇರಿರುವುದು ಖುಷಿ ಹಾಗೂ ಹೆಮ್ಮೆಯ ವಿಚಾರ. ಆದರೆ ಸ್ವಲ್ಪ ಆಲೋಚಿಸಿ ತಿಳಿಯಬೇಕಾದದ್ದು ಇನ್ನೂ ಇದೆ. ಆ ಐದು ಯುದ್ಧ ವಿಮಾನಗಳ ಬೆಂಗಾವಲಿಗೆ ಹೋಗಿದ್ದು ಎರಡು ಸುಖೋಯ್-30 ಯುದ್ಧ ವಿಮಾನಗಳು. ಈ ಸಂಖ್ಯೆಯೇ ಸಾಕು ಸುಖೋಯ್ ಶಕ್ತಿ, ಸಾಮರ್ಥ್ಯ ಅಳೆಯಲು.

ಐದು ಅತ್ಯಾಧುನಿಕ ರಫೇಲ್ ಯುದ್ಧ ವಿಮಾನಗಳನ್ನು ತರಲು ಎರಡು ಸುಖೋಯ್-30 ವಿಮಾನಗಳ ಬೆಂಗಾವಲು ಸಾಕು ಎಂದರೆ ರಫೇಲ್‌ಗಿಂತ ಹೆಚ್ಚಿನ ಸಾಮರ್ಥ್ಯ ಸುಖೋಯ್ ಯುದ್ಧ ವಿಮಾನಗಳಿಗಿದೆ ಎಂದರ್ಥ. ಅಂತಹ ಸುಖೋಯ್ ಯುದ್ಧ ವಿಮಾನಗಳ ಮೂಲ ಹುಡುಕುತ್ತ ಹೋದಾಗ ಸಿಕ್ಕಿರುವ ಮಾಹಿತಿ ಕನ್ನಡಿಗರು ಮಾತ್ರವಲ್ಲ ಇಡೀ ದೇಶದ ಜನರು ಹೆಮ್ಮೆ ಪಡುವಂಥದ್ದಾಗಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಮಾಧ್ಯಮ ಕಾರ್ಯದರ್ಶಿ ಕೆ. ಗುರುಪ್ರಸಾದ್ ಮಾಹಿತಿ ಹಂಚಿಕೊಂಡಿದ್ದಾರೆ.

ಸುಖೋಯ್ ಖರೀದಿ

ಸುಖೋಯ್ ಖರೀದಿ

ರಫೇಲ್ ಗಳನ್ನು ಬೆಂಗಾವಲಾಗಿ ಕರೆತಂದ ಸುಖೋಯ್-30 ಎಂಬ ಸಶಕ್ತ ಹಾಗೂ ಅತ್ಯಾಧುನಿಕ ಯುದ್ಧ ವಿಮಾನವನ್ನು ಭಾರತ ವಾಯುಸೇನೆಗೆ ಖರೀದಿಸಿದ್ದು ನಮ್ಮ ಹೆಮ್ಮೆಯ ಕನ್ನಡಿಗ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು. ಅದಕ್ಕೆ ಸಾಕ್ಷಿ ಕೆಳಗಿನ ಫೋಟೋಗಳು. ದಾಖಲೆ ಕಳೆದುಕೊಳ್ಳುವ ಅಸಮರ್ಥ ರಾಜಕಾರಣಿಯಲ್ಲ ನಮ್ಮ ದೇವೇಗೌಡರು ಎಂದು ಮಾಹಿತಿ ಕೊಡುವ ಮೂಲಕ, ಮಾಜಿ ಪ್ರಧಾನಿ ದೇವೇಗೌಡರ ಆಡಳಿತದ ಅವಧಿ, ಸುಖೋಯ್ ಒಪ್ಪಂದದ ದಿನಾಂಕ, ಹಾಗೂ ಒಪ್ಪಂದದ ವೇಳೆಯ ಛಾಯಾಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಇದೇ ರಾಜ್ಯದಲ್ಲಿ ಹುಟ್ಟಿ ನಮ್ಮ ನಾಯಕರ ಸಾಧನೆಗಳು ಗೊತ್ತಿರದೆ, ನಮ್ಮ ಶ್ರೇಷ್ಟತೆಯನ್ನು ಮರೆತು ಅವರನ್ನೇ ತೆಗಳಿ ಪರ ರಾಜ್ಯದ ಭಕ್ತರಾದರೆ ದೊಡ್ಡ ದೇಶಭಕ್ತನೆಂಬ ಪಟ್ಟಕ್ಕಾಗಿ ಸ್ವಂತಿಕೆಯನ್ನು ಮರೆತವರಿಗೆ ಇದು ಅರ್ಪಣೆಯಾಗಲಿ ಎಂದು ಗುರುಪ್ರಸಾದ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಅದಕ್ಕೆ ಕೆಲವಷ್ಟು ಫೋಟೊಗಳನ್ನು ಒದಗಿಸಿದ್ದಾರೆ.

ಸುಖೋಯ್-30 ಒಪ್ಪಂದ

ಸುಖೋಯ್-30 ಒಪ್ಪಂದ

ಎಚ್.ಡಿ. ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ 1996 ನವೆಂಬರ್ 30 ರಂದು ರಷ್ಯಾ ನಿರ್ಮಿತ ಸುಖೋಯ್-30 ಮಾದರಿಯ 50 ಯುದ್ಧ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಟ್ಟು 5 ಹಂತಗಳಲ್ಲಿ Su-30MKI ಯುದ್ಧ ವಿಮಾನಗಳನ್ನು 1,462 ಬಿಲಿಯನ್ ಯುಎಸ್‌ ಡಾಲರ್‌ಗಳಿಗೆ ಖರೀದಿ ಒಪ್ಪಂದವಾಗಿತ್ತು. ಹೀಗೆ 5 ಹಂತಗಳಲ್ಲಿ ಸುಧಾರಿತ 5 ಮಾದರಿಯ ಸುಖೋಯ್-30 ವಿಮಾನಗಳನ್ನು ಖರೀದಿ ಮಾಡಲಾಗಿತ್ತು ಎಂದು ಮಾಜಿ ಪ್ರಧಾನಿ ದೇವೇಗೌಡ ಅವರ ಪತ್ರಿಕಾ ಕಾರ್ಯದರ್ಶಿಗಳು ಮಾಹಿತಿ ಕೊಟ್ಟಿದ್ದಾರೆ.

ಸುಖೋಯ್ ಎಸ್‌ಯು-30 ಎಂಕೆಐ ಭಾರತೀಯ ವಾಯುಪಡೆಯ ಪ್ರಮುಖ ಲೋಹದ ಹಕ್ಕಿಯಾಗಿದ್ದು, ಏರ್‌ ಟು ಏರ್‌ ಮತ್ತು ಏರ್‌ ಟು ಗ್ರೌಂಡ್ ಕ್ಷಮತೆಯಲ್ಲಿ ಹೆಸರು ಮಾಡಿದೆ. ಗಂಟೆಗೆ 2120 ಕಿಲೋಮೀಟರ್‌ ವೇಗದಲ್ಲಿ ಹಾರುವ ಈ ಯುದ್ಧ ವಿಮಾನವು ಒಟ್ಟು 38 ಸಾವಿರ ಕೆಜಿ ಭಾರದೊಂದಿಗೆ ಹಾರಬಲ್ಲದು. ವಿವಿಧ ರೀತಿಯ ರೇಡಾರ್‌ಗಳು, ಕ್ಷಿಪಣಿಗಳು, ಬಾಂಬುಗಳು ಮತ್ತು ರಾಕೆಟ್‌ಗಳನ್ನು ಕೂಡ ಹೊತ್ತು ಹಾರಬಲ್ಲದು ಸುಖೋಯ್ ಭಾರತವು 290 ಸಕ್ರಿಯ 30 ಎಂಕೆಐಗಳನ್ನು ಹೊಂದಿದೆ.

English summary
Indian Air Force includes 5 Rafale combat aircraft. Thoughtful and proud. But there is still something to think about and know. Five Rafale warplanes were escorted by two Sukhoi-30s. This is enough to measure Sukhoi's energy potential. Former PM press secretary reports that Sukhoi-30 fighter planes were purchased when Deve Gowda was Prime Minister
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X