• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಂದ್ರಯಾನ ಯೋಜನೆಗಳಲ್ಲಿ ಯಶಸ್ವಿಯಾಗಿರುವುದು ಎಷ್ಟು ಗೊತ್ತೇ?

|
   ಚಂದ್ರಯಾನ 2 ಮುಗಿದಿಲ್ಲ ಎಂದು ಅಚ್ಚರಿ ಮೂಡಿಸಿದ ಇಸ್ರೋ..? | Chandrayaan 2 | Oneindia Kannada

   ಬೆಂಗಳೂರು, ಸೆಪ್ಟೆಂಬರ್ 7: ಭಾರತದ ಬಹು ನಿರೀಕ್ಷಿತ ಚಂದ್ರಯಾನ-2 ನೌಕೆಯು ಉದ್ದೇಶಿತ ರೀತಿಯಲ್ಲಿ ಕಾರ್ಯಾಚರಣೆ ಮಾಡುವಲ್ಲಿ ಹಿನ್ನಡೆ ಅನುಭವಿಸಿದೆ. ಆದರೆ, ಇಸ್ರೋ ಮಾಡಿದ ಸಾಧನೆಯನ್ನು ಇಡೀ ವೈಜ್ಞಾನಿಕ ಜಗತ್ತು ಮೆಚ್ಚುಗೆ ಸೂಚಿಸಿದೆ. ಚಂದ್ರನ ದಕ್ಷಿಣ ಧ್ರುವಕ್ಕೆ ತಲುಪುವ ಪ್ರಯತ್ನ ಕೂಡ ಚಾರಿತ್ರಿಕವಾದದ್ದು.

   ಇದು ವೈಫಲ್ಯವಲ್ಲ, ಹಿನ್ನಡೆಯಷ್ಟೇ; ಚಂದ್ರಯಾನ ಕಳೆದುಕೊಂಡಿದ್ದು ಶೇ 5ರಷ್ಟು ಮಾತ್ರ

   ಇಸ್ರೋ ತನ್ನ ಗುರಿಯನ್ನು ಮುಟ್ಟುವುದು ಸಾಧ್ಯವಾಗದೆ ಇರುವುದು ನಿರಾಶೆ ಮೂಡಿಸಿದೆ. ಆದರೆ ಇದೇನೂ ಹೊಸತಲ್ಲ. ಚಂದ್ರನಿಗೆ ತಲುಪುವ ಯೋಜನೆಗಳಲ್ಲಿ ವೈಫಲ್ಯದ ಉದಾಹರಣೆಗಳು ಸಾಕಷ್ಟಿವೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಸಮಾಧಾನ ಹೇಳಿದೆ.

   ಕಳೆದ ಆರು ದಶಕಗಳಲ್ಲಿ ಚಂದ್ರಯಾನ ಯೋಜನೆಗಳ ಯಶಸ್ಸಿನ ಅನುಪಾತ ಶೇ 60 ಮಾತ್ರ. 1958 ರಿಂದ 2019ರ ಅವಧಿಯಲ್ಲಿ ಇದುವರೆಗೂ 109 ಚಂದ್ರ ಯೋಜನೆಗಳನ್ನು ನಡೆಸಲಾಗಿದೆ. ಅದರಲ್ಲಿ 61 ಯಶಸ್ವಿಯಾದರೆ 48 ವಿಫಲವಾಗಿವೆ.

   ವಿಫಲವಾಗಿದ್ದ ಇಸ್ರೇಲ್ ಪ್ರಯತ್ನ

   ವಿಫಲವಾಗಿದ್ದ ಇಸ್ರೇಲ್ ಪ್ರಯತ್ನ

   2018ರ ಫೆಬ್ರವರಿಯಲ್ಲಿ ಇಸ್ರೇಲ್ ಕೂಡ ಚಂದ್ರಯಾನ ಯೋಜನೆ 'ಬೆರೆಶೀಟ್‌'ಅನ್ನು ನಡೆಸಿತ್ತು. ಆದರೆ ನೌಕೆಯು ಏಪ್ರಿಲ್‌ನಲ್ಲಿ ಚಂದ್ರನಿಗೆ ಅಪ್ಪಳಿಸಿ ನಾಶವಾಗಿತ್ತು.

   1958ರಿಂದ ಇಲ್ಲಿಯವರೆಗೂ ಭಾರತ, ಅಮೆರಿಕ, ರಷ್ಯಾ, ಜಪಾನ್, ಐರೋಪ್ಯ ಒಕ್ಕೂಟ, ಚೀನಾ ಮತ್ತು ಇಸ್ರೇಲ್‌ಗಳು ವಿವಿಧ ಬಗೆಯ ಚಂದ್ರ ಯೋಜನೆಗಳನ್ನು ನಡೆಸಿವೆ. ಆರ್ಬಿಟರ್, ಲ್ಯಾಂಡರ್, ಫ್ಲೈಬೈ (ಚಂದ್ರನ ಸುತ್ತ ಸುತ್ತುವುದು, ಚಂದ್ರನ ಮೇಲೆ ಇಳಿಯುವುದು ಮತ್ತು ಚಂದ್ರನಿಂದ ಹಾರುವುದು) ಇದರಲ್ಲಿ ಒಳಗೊಂಡಿವೆ.

   ಮೊದಲ ಪ್ರಯತ್ನ ಅಮೆರಿಕದ್ದು, ಗೆದ್ದದ್ದು ಯುಎಸ್‌ಎಸ್‌ಆರ್

   ಮೊದಲ ಪ್ರಯತ್ನ ಅಮೆರಿಕದ್ದು, ಗೆದ್ದದ್ದು ಯುಎಸ್‌ಎಸ್‌ಆರ್

   1958ರ ಆಗಸ್ಟ್ 17ರಂದು ಚಂದ್ರನ ಅಂಗಳಕ್ಕೆ ತೆರಳುವ 'ಪಯೋನೀರ್ 0'ಅನ್ನು ಅಮೆರಿಕ ಮೊದಲ ಬಾರಿಗೆ ಸಿದ್ಧಪಡಿಸಿತ್ತು. ಆದರೆ ಅದರ ಉಡಾವಣೆ ವಿಫಲಗೊಂಡಿತ್ತು. 1959ರ ಜನವರಿ 4ರಂದು ಅಮೆರಿಕದ ಪ್ರತಿಸ್ಪರ್ಧಿ ರಷ್ಯಾ (ಆಗಿನ ಸೋವಿಯತ್ ಒಕ್ಕೂಟ) 'ಲೂನಾ 1'ಅನ್ನು ಉಡಾವಣೆ ಮಾಡಿತ್ತು. ಅದು ಮೊದಲ ಫ್ಲೈಬೈ ಯೋಜನೆಯೂ ಹೌದು. ಆರು ವಿಫಲ ಪ್ರಯತ್ನಗಳ ಬಳಿಕ ಒಂದು ಯೋಜನೆ ಸಫಲತೆ ಕಂಡಿತ್ತು.

   ಭಾರತದ ಚಂದ್ರಯಾನ ಏಕೆ ಇಷ್ಟು ಮಹತ್ವದ್ದು? ಇಲ್ಲಿದೆ ವಿವರ

   ಒಂದೇ ವರ್ಷದಲ್ಲಿ 14 ಯೋಜನೆ

   ಒಂದೇ ವರ್ಷದಲ್ಲಿ 14 ಯೋಜನೆ

   ವಿಶೇಷವೆಂದರೆ ತೀವ್ರ ಪೈಪೋಟಿ ನಡೆಸಿದ್ದ ಅಮೆರಿಕ ಮತ್ತು ಯುಎಸ್‌ಎಸ್‌ಆರ್ 1958ರ ಆಗಸ್ಟ್‌ನಿಂದ 1959ರ ನವೆಂಬರ್‌ವರೆಗಿನ ಅಲ್ಪಾವಧಿಯಲ್ಲಿ 14 ಯೋಜನೆಗಳನ್ನು ಪ್ರಯತ್ನಿಸಿದ್ದವು. ಇವುಗಳಲ್ಲಿ ಯುಎಸ್‌ಎಸ್‌ಆರ್‌ನ ಲೂನಾ-1, ಲೂನಾ-2 ಮತ್ತು ಲೂನಾ-3 ಯೋಜನೆಗಳು ಮಾತ್ರ ಯಶ ಕಂಡಿದ್ದವು.

   1964ರ ಜುಲೈನಲ್ಲಿ ರೇಂಜರ್ 7 ಯೋಜನೆ ಉಡಾವಣೆ ಮಾಡಿದ್ದ ಅಮೆರಿಕ ಚಂದ್ರನ ಸಮೀಪದ ಚಿತ್ರಗಳನ್ನು ತೆಗೆದುಕೊಂಡ ಸಾಧನೆ ಮಾಡಿತ್ತು. 1966ರ ಜನವರಿಯಲ್ಲಿ ಯುಎಸ್‌ಎಸ್‌ಆರ್ ಉಡಾವಣೆ ಮಾಡಿದ 'ಲೂನಾ 9' ಚಂದ್ರನ ಮೇಲೆ ಮೊದಲ ಬಾರಿಗೆ ಸುರಕ್ಷಿತವಾಗಿ ಇಳಿದು ಅದರ ಮೇಲ್ಮೈನ ಚಿತ್ರಗಳನ್ನು ತೆಗೆದಿತ್ತು.

   ಚಂದ್ರನ ಮೇಲೆ ಇಳಿದ ಮನುಷ್ಯರು

   ಚಂದ್ರನ ಮೇಲೆ ಇಳಿದ ಮನುಷ್ಯರು

   ಆರು ತಿಂಗಳ ಬಳಿಕ 1966ರ ಮೇನಲ್ಲಿ ಅಮೆರಿಕ ಇದೇ ರೀತಿಯ 'ಸರ್ವೇಯರ್-1' ರವಾನೆ ಮಾಡಿ ಯಶಸ್ವಿಯಾಯಿತು. ಚಂದ್ರಯಾನ ಯೋಜನೆಗಳಲ್ಲಿ ಮೈಲುಗಲ್ಲು ಸ್ಥಾಪಿಸಿದ್ದು ಅಮೆರಿಕದ 'ಅಪೋಲೋ 11' ಯೋಜನೆ. ಇದರಲ್ಲಿ ಚಂದ್ರನ ಮೇಲೆ ಮೊದಲ ಬಾರಿಗೆ ನೀಲ್ ಆರ್ಮ್‌ಸ್ಟ್ರಾಂಗ್ ನೇತೃತ್ವದಲ್ಲಿ ಮೂವರು ಮಾನವರು ಇಳಿದು ಇತಿಹಾಸ ಸೃಷ್ಟಿಸಿದರು.

   1958-1979ರವರೆಗೂ ಅಮೆರಿಕ ಮತ್ತು ಯುಎಸ್‌ಎಸ್‌ಆರ್‌ ಮಾತ್ರ ಚಂದ್ರಯಾನ ಯೋಜನೆಗಳನ್ನು ಉಡಾವಣೆ ಮಾಡುತ್ತಿದ್ದವು. ಈ ಅವಧಿಯಲ್ಲಿ ಎರಡೂ ದೇಶಗಳು ಸಿದ್ಧಪಡಿಸಿದ ಚಂದ್ರಯಾನ ಯೋಜನೆಗಳ ಸಂಖ್ಯೆ ಬರೋಬ್ಬರಿ 90. 1980-1989ರ ಅವಧಿಯಲ್ಲಿ ಒಂದೂ ಚಂದ್ರಯಾನ ಯೋಜನೆಗಳು ನಡೆದಿರಲಿಲ್ಲ.

   ತಡವಾಗಿ ಕಾಲಿಟ್ಟ ದೇಶಗಳು

   ತಡವಾಗಿ ಕಾಲಿಟ್ಟ ದೇಶಗಳು

   ಈ ವೈಜ್ಞಾನಿಕ ಪ್ರಯೋಗಕ್ಕೆ ಜಪಾನ್, ಯುರೋಪಿಯನ್ ಒಕ್ಕೂಟ, ಚೀನಾ, ಭಾರತ ಮತ್ತು ಇಸ್ರೇಲ್ ಕಾಲಿಟ್ಟಿದ್ದು ತೀರಾ ತಡವಾಗಿ.

   ಜಪಾನ್ 1990ರ ಜನವರಿಯಲ್ಲಿ 'ಹಿಟೆನ್' ಎಂಬ ಆರ್ಬಿಟರ್ ಯೋಜನೆ ಉಡಾವಣೆ ಮಾಡಿತು. ಇದರ ಬಳಿಕ 2007ರ ಸೆಪ್ಟೆಂಬರ್‌ನಲ್ಲಿ 'ಸೆಲೆನ್' ಎಂಬ ಮತ್ತೊಂದು ಆರ್ಬಿಟರ್ ಯೋಜನೆ ಹಾರಿಸಿತು.

   2000-2009ರ ಅವಧಿಯಲ್ಲಿ ಆರು ಚಂದ್ರಯಾನ ಯೋಜನೆಗಳು ನಡೆದವು. ಯುರೋಪ್‌ನ 'ಸ್ಮಾರ್ಟ್-1', ಜಪಾನ್‌ನ 'ಸೆಲೆನ್', ಚೀನಾದ 'ಚಾಂಗ್-1', ಭಾರತದ ಚಂದ್ರಯಾನ-1 ಮತ್ತು ಅಮೆರಿಕದ 'ಲೂನಾರ್ ರೆಕೊನೈಸ್ಯಾನ್ಸ್ ಆರ್ಬಿಟರ್ ಆಂಡ್ ಎಲ್‌ಸಿಸಿಆರ್‌ಓಎಸ್‌ಎಸ್'.

   ಒಟ್ಟು 19 ಚಂದ್ರಯಾನ ಯೋಜನೆಗಳು

   ಒಟ್ಟು 19 ಚಂದ್ರಯಾನ ಯೋಜನೆಗಳು

   2009-2019ರ ಅವಧಿಯಲ್ಲಿ ಹತ್ತು ಚಂದ್ರ ಯೋಜನೆಗಳನ್ನು ಉಡಾವಣೆ ಮಾಡಲಾಯಿತು. ಇವುಗಳಲ್ಲಿ ಐದನ್ನು ಚೀನಾದಿಂದ ಕಳುಹಿಸಲಾಗಿದೆ. ಮೂರು ನೌಕೆಗಳನ್ನು ಅಮೆರಿಕ ಕಳುಹಿಸಿದೆ. ಇನ್ನು ಭಾರತ ಮತ್ತು ಇಸ್ರೇಲ್ ತಲಾ ಒಂದು ಯೋಜನೆ ಉಡಾವಣೆ ಮಾಡಿವೆ.

   1990ರಿಂದ ಇದುವರೆಗೆ ಅಮೆರಿಕ, ಜಪಾನ್, ಭಾರತ, ಯುರೋಪಿಯನ್ ಒಕ್ಕೂಟ, ಚೀನಾ ಮತ್ತು ಇಸ್ರೇಲ್ ಒಟ್ಟು 19 ಚಂದ್ರಯಾನ ಯೋಜನೆಗಳನ್ನು ನಡೆಸಿವೆ.

   English summary
   40% of the Lunar missions were failure since 1958. There were 109 lunar missions launched till 2019. Only 61 have successful.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X