ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈನ್ಯಕ್ಕೆ ಮತ್ತಷ್ಟು ಶಕ್ತಿ ತುಂಬಲಿರುವ ಬೆಂಗಳೂರ ಕ್ಷಿಪಣಿ

|
Google Oneindia Kannada News

ಬೆಂಗಳೂರು, ಅ. 16: ಬೆಂಗಳೂರಿನಲ್ಲಿಯೇ ಸಂಪೂರ್ಣವಾಗಿ ತಯಾರಾದ ಕ್ಷಿಪಣಿ ಪರೀಕ್ಷಾರ್ಥ ಹಾರಾಟಕ್ಕೆ ಸಿದ್ಧವಾಗಿದೆ. ನಿರ್ಭಯ್ ಹೆಸರಿನ ಕ್ವಿಪಣಿ ಪರೀಕ್ಷೆಗೆ ಸಿದ್ಧವಾಗಿದ್ದು ಭಾರತದ ಸೈನಿಕ ಶಕ್ತಿ ಮತ್ತಷ್ಟು ಹೆಚ್ಚಲಿದೆ. ಒರಿಸ್ಸಾದ ಚಂಡಿಪುರದ ಕೇಂದ್ರದಿಂದ ಪರೀಕ್ಷಾರ್ಥ ಹಾರಾಟ ನಡೆಯಲಿದೆ.

ಅಕ್ಟೋಬರ್ 17 ರಂದು ಕ್ಷಿಪಣಿ ಪರೀಕ್ಷಾರ್ಥ ಹಾರಾಟ ನಡೆಸಲಿದೆ. ಈ ಮೊದಲು ನಿರ್ಭಯ್ ಕ್ಷಿಪಣಿಯನ್ನು ಮಾರ್ಚ್ 12, 2013ರಂದು ತಾಂತ್ರಿಕ ಪರೀಕ್ಷೆ ಮಾಡಲಾಗಿತ್ತು. ಸುಮಾರು ಎಂಟು ನೂರರಿಂದ ಸಾವಿರ ಕಿಮೀ ಸಾಮರ್ಥ್ಯದ ಕ್ಷಿಪಣಿ ಬೆಂಗಳೂರಿನ ಸಿ.ವಿ.ರಾಮನ್ ನಗರದ ರಕ್ಷಣಾ ಇಲಾಖೆ ಘಟಕದಲ್ಲಿ ತಯಾರಾಗಿರುವುದು ವಿಶೇಷ.[ಚಿತ್ರಗಳಲ್ಲಿː ಕಣ್ಮನ ಸೆಳೆದ ಸೈನಿಕರ ತಾಲೀಮು]

nirbhay

ಅಲ್ಲದೇ ಕ್ಷಿಪಣಿ ಹಾರಾಟ ಸಂದರ್ಭ ಚಂಡಿಪುರದಲ್ಲಿ ಮ್ಯಾರಾಥಾನ್ ಓಟವನ್ನು ಆಯೋಜಿಸಲಾಗಿದೆ ಎಂದು ಪ್ಲೈಟ್‌ ಅಥೋರೈಜೇಶನ್ ಬೋರ್ಡ್(ಎಫ್ಎಬಿ) ತಿಳಿಸಿದೆ.

ಕ್ಷಿಪಣಿಯನ್ನು ಬೆಳಗ್ಗೆ ಸರಿಯಾಗಿ 10 ಗಂಟೆಗೆ ಹಾರಿಸಲಾಗುವುದು. ವಾತಾವರಣದ ಪರಿಸ್ಥಿತಿ ನೋಡಿಕೊಂಡು ಸಮಯದಲ್ಲಿ ಕೊಂಚ ಬದಲಾವಣೆಯಾಗಬಹುದು ಎಂದು ಕ್ಷಿಪಣಿ ತಂತ್ರಜ್ಞಾನದ ಹಿರಿಯ ಅಧಿಕಾರಿಯೊಬ್ಬರು ಒನ್ ಇಂಡಿಯಾಗೆ ತಿಳಿಸಿದ್ದಾರೆ.[ವಿಮಾನ ಅಪಘಾತ; ಪೃಥ್ವಿ ಪರೀಕ್ಷೆ ವಿಫಲ]

ಸಾಮಾನ್ಯವಾಗಿ ಭಾರತದ ಕ್ಷಿಪಣಿಗಳು ಹೈದ್ರಾಬಾದ್ ನ ಡಿಆರ್ ಡಿಒ ಘಟಕದಲ್ಲಿ ತಯಾರಾಗುತ್ತಿದ್ದವು. ಆದರೆ 'ನಿರ್ಭಯ್‌' ನನ್ನು ಬೆಂಗಳೂರಿನಲ್ಲಿ ತಯಾರು ಮಾಡಲಾಗಿದೆ.ರಕ್ಷಣಾ ಇಲಾಖೆ ಇದೆ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕ್ಷಿಪಣಿ ತಯಾರಿಕೆಗೆ ಅವಕಾಶ ನೀಡಲಾಗಿದೆ. ಇದು ಭಾರತದ ಸೈನ್ಯಕ್ಕೆ ಮತ್ತಷ್ಟು ಶಕ್ತಿ ತುಂಬಲಿದೆ. ಮೂನ್ನೂರು ಕಿಮೀ ಹಾರಾಟ ನಡೆಸಿ ಮತ್ತೆ ಕೇಂದ್ರಕ್ಕೆ ಹಿಂದಿರುಗಲಿದೆ ಎಂದು ಡಿಆರ್‌ಡಿಒ ನಿರ್ದೇಶಕ ಡಾ.ಕೆ. ತಮಿಳ್ ಮಣಿ ತಿಳಿಸಿದ್ದಾರೆ.

ಉಳಿದ ಕ್ಷಿಪಣಿಗಳಿಗೆ ಹೋಲಿಸಿದರೆ ಇದು ಅತ್ಯಂತ ಹಗುರವಾಗಿದೆ. ಅತ್ಯಂತ ನಾಜೂಕಾಗಿ ಸಿದ್ಧಮಾಡಲಾಗಿದ್ದು ಹಾರಾಟದ ನಂತರ ದೇಶಕ್ಕೆ ಇದರ ಶಕ್ತಿಯ ಪರಿಚಯವಾಗಲಿದೆ. ಯಾವ ಕಡೆ ಬೇಕಾದರೂ ಸುಲಭವಾಗಿ ತಿರುಗುವ, ಆಕಾಶದಲ್ಲಿ ಎಂಥ ಕಸರತ್ತಿಗೂ ಒಳಗಾಗುವ ಶಕ್ತಿ ಹೊಂದಿದೆ ಎಂದು ತಿಳಿಸಿದ್ದಾರೆ.

missile

ನಿರ್ಭಯ್‌ ಕಿರು ಪರಿಚಯ
ಹೆಸರು: ನಿರ್ಭಯ್
ಶಕ್ತಿ: 800 ರಿಂದ 1000 ಕಿಮೀ ಹಾರಾಟ
ಅಗಲ: 6 ಮೀಟರ್‌
ತೂಕ: 1,500 ಕೆಜಿ
ವೇಗ: 0.7 ಮ್ಯಾಕ್‌
ವೆಚ್ಚ: ಒಂದು ಕ್ಷಿಪಣಿಗೆ 10 ಕೋಟಿ
ತಯಾರಿಕೆ: ಎಡಿಇ ಕೇಂದ್ರ ಬೆಂಗಳೂರು

English summary
Nirbhay, India's first home-grown subsonic cruise missile, is all set for its launch from Interim Test Range (ITR) in Chandipur (Near Balasore in Orissa) on Friday, Oct 17. This is Nirbhay's second launch, the first being terminated mid-way on 12 March 2013 owing to a technical snag. Nirbhay, with an expected strike range of 800-1000 km, is the first missile being made completely in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X