ಇದು ದೇಶ ರಕ್ಷಣೆ ಕಾರ್ಯ, ಗಡಿ ಕಾನೂನು ಉಲ್ಲಂಘಿಸಿಲ್ಲ : ಸ್ವಾಮಿ
ನವದೆಹಲಿ, ಫೆಬ್ರವರಿ 26: ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಬಾಲಕೋಟ್ ನಲ್ಲಿ ಅಡಗಿದ್ದ ಉಗ್ರರ ನೆಲೆ ಮೇಲೆ ಭಾರತೀಯ ವಾಯುಪಡೆ ಇಂದು ನಡೆಸಿದ ವೈಮಾನಿಕ ದಾಳಿ ಬಗ್ಗೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಗಡಿ ನಿಯಂತ್ರಣ ರೇಖೆ (ಎಲ್ ಒಸಿ) ದಾಟಿ ಪಾಕಿಸ್ತಾನದ ಗಡಿಯಲ್ಲಿ ಅಡಗಿದ್ದ ಉಗ್ರರನ್ನು ಸದೆಬಡಿಯಲಾಗಿದೆ. ಆದರೆ ಇದದಿಂದ ಅಂತಾರಾಷ್ಟ್ರೀಯ ಗಡಿ ಕಾನೂನು ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪವನ್ನು ಸ್ವಾಮಿ ತಳ್ಳಿಹಾಕಿದ್ದಾರೆ. ದಾಳಿ ನಡೆದಿರುವುದು ಪಾಕ್ ಆಕ್ರಮಿತ ಕಾಶ್ಮೀರ ನಮ್ಮದೇ ಅಲ್ಲಿ ನಾವೇ ದಾಳಿ ನಡೆಸುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ.
ಪುಲ್ವಾಮಾ ಪ್ರತೀಕಾರ LIVE: ನೂರಾರು ಜೈಷ್ ಉಗ್ರರ ಹತ್ಯೆ ಮಾಡಿದ್ದು ಸತ್ಯ
'ಪಾಕ್ಆಕ್ರಮಿತ ಕಾಶ್ಮೀರವು ಮೊದಲು ನಮ್ಮದೇ ಆಗಿತ್ತು. ಈಗ ಅದು ಗಡಿ ನಿಯಂತ್ರಣ ರೇಖೆ ಸಮೀಪದಲ್ಲಿದೆ ಅಷ್ಟೇ ನಮ್ಮದೇ ಜಾಗದಲ್ಲಿ ನಾವು ದಾಳಿ ಮಾಡಿದ್ದೇವೆ. ಇದರಲ್ಲಿ ತಪ್ಪೇನಿಲ್ಲ' ಎಂದು ತಿಳಿಸಿದ್ದಾರೆ.
We are bombing our own territory temporarily called PoK. So no international law broken but it is in self defence
— Subramanian Swamy (@Swamy39) February 26, 2019
ಬಾಲಕೋಟ್ ಎಲ್ಲಿದೆ? ಲಾಡೆನ್ ಅಡಗುತಾಣದಲ್ಲೇ ಜೆಇಎಂ ಉಗ್ರರು?
ಅದು ಅವರ ಜಾಗವಾಗಿದ್ದರೂ, ನಾವೆಲ್ಲಾ ವಿಶ್ವಸಂಸ್ಥೆಯ ಚಾರ್ಟರ್ನ ಸ್ವಯಂ ರಕ್ಷಣೆ ಅಡಿಯಲ್ಲಿದ್ದೇವೆ. ನಮ್ಮ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿರುವ ಅವರು, ಸಾವಿರ ಪೀಸ್ಗಳನ್ನು ಭಾರತಕ್ಕೆ ನೀಡುತ್ತೇವೆ ಎಂದು ಹೇಳಿದ್ದರು. ಹಾಗಾಗಿ ನಮ್ಮ ಸರ್ಕಾರ 1000 ಬಾಂಬ್ಗಳನ್ನು ಹಾಕಿ ಸರಿಯಾದ ಕೆಲಸವನ್ನೇ ಮಾಡಿದೆ ಎಂದಿದ್ದಾರೆ.
Subramanian Swamy: Even if it was their territory, we have under the United Nation charter the right of self-defence. They have been attacking us & they say we want to give a thousand cuts to India, so our government did the right thing by giving them 1000 bombs. https://t.co/t1N22SzLHS
— ANI (@ANI) February 26, 2019
Subramanian Swamy on reported air strikes by IAF in Balakot, Chakothi & Muzaffarabad terror launch pads across LoC: Actually it was mostly on our own territory, which is called PoK- Pakistan Occupied Kashmir. So you can always bomb your own territory, nothing wrong. pic.twitter.com/HScxFITlnx
— ANI (@ANI) February 26, 2019
This is the most opportune time for Namo Govt to withdraw Nehru illegal Petition to UN on Kashmir since it is not in our view a disputed territory
— Subramanian Swamy (@Swamy39) February 26, 2019