ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ ಬಗ್ಗೆ ಸುಬ್ರಮಣಿಯನ್ ಸ್ವಾಮಿ 'ವಿಚಿತ್ರ' ಪ್ರತಿಕ್ರಿಯೆ

|
Google Oneindia Kannada News

ನವದೆಹಲಿ, ಜುಲೈ 05: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಬಜೆಟ್ ಬಗ್ಗೆ ಆರ್ಥಿಕ ತಜ್ಞರೂ ಆಗಿರುವ ಸಂಸದ ಸುಬ್ರಮಣಿಯನ್ ಸ್ವಾಮಿ ವಿಚಿತ್ರವಾದ ಪ್ರತಿಕ್ರಿಯೆ ನೀಡಿದ್ದಾರೆ.

ಅಷ್ಟಕ್ಕೂ ಸ್ವಾಮಿ ಅವರ ಪ್ರತಿಕ್ರಿಯೆಯನ್ನು ಧನಾತ್ಮಕ ಎಂದು ಪರಿಗಣಿಸಬೇಕೋ, ಋಣಾತ್ಮಕ ಎಂದೋ ಎಂಬುದೇ ಗೊಂದಲದ ವಿಷಯ ಎನ್ನಸಿದೆ!

ಬಜೆಟ್ ಮಂಡನೆ ವೇಳೆ ಬಸವಣ್ಣರ ನೆನೆದ ಸಚಿವೆ ನಿರ್ಮಲಾ ಸೀತಾರಾಮನ್ಬಜೆಟ್ ಮಂಡನೆ ವೇಳೆ ಬಸವಣ್ಣರ ನೆನೆದ ಸಚಿವೆ ನಿರ್ಮಲಾ ಸೀತಾರಾಮನ್

"ಬಜೆಟ್ ಬಗ್ಗೆ ನನ್ನ ಅಭಿಪ್ರಾಯ ಏನು ಎಂಬುದನ್ನು ಹೇಳಬೇಕಾದರೆ ನಾನು ಒಬ್ಬ ಅರ್ಥಶಾಸ್ತ್ರದ ಪ್ರಾಧ್ಯಾಪಕನಾಗಿ ಪ್ರತಿಕ್ರಿಯಿಸಬೇಕೋ, ಅಥವಾ ಬಿಜೆಪಿಯ ಸಂಸದನಾಗಿ ಪ್ರತಿಕ್ರಿಯಿಸಬೇಕೋ ಎಂಬುದನ್ನು ನಿರ್ಧರಿಸಿ ನಂತರ ಪ್ರತಿಕ್ರಿಯೆ ನೀಡಬೇಕಾಗುತ್ತದೆ" ಎಂದು ಸ್ವಾಮಿ ಹೇಳಿದರು.

Subramanian Swamy’s reaction to Nirmala Sitharaman’s budget

ಅಂದರೆ, ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹೇಳುವುದಾದರೆ ಬೇರೆಯದೇ ರೀತಿಯ ಅಭಿಪ್ರಾಯವಿದೆ, ಆದರೆ ಬಿಜೆಪಿ ಸಂಸದನಾಗಿ ಹೇಳುವುದಾದರೆ ಪಕ್ಷದ ವಿರುದ್ಧ ಮಾತನಾಡಬಾರದ ಕಾರಣಕ್ಕೆ ಅಭಿಪ್ರಾಯವನ್ನು ತಿರುಚಿ ಹೇಳಬೇಕಾಗುತ್ತದೆ ಎಂಬರ್ಥದಲ್ಲಿ ಸ್ವಾಮಿ ಹೇಳಿದ್ದಾರೆ.

ಕಾಂಗ್ರೆಸ್ ನ ಭವಿಷ್ಯದ ವಿತ್ತ ಸಚಿವರ ಬಜೆಟ್ ಕಾಪಿ ಐಪ್ಯಾಡ್ ನಲ್ಲಿ: ಚಿದಂಬರಂಕಾಂಗ್ರೆಸ್ ನ ಭವಿಷ್ಯದ ವಿತ್ತ ಸಚಿವರ ಬಜೆಟ್ ಕಾಪಿ ಐಪ್ಯಾಡ್ ನಲ್ಲಿ: ಚಿದಂಬರಂ

ಅಂದರೆ ಬಜೆಟ್ ಬಗ್ಗೆ ಸ್ವಾಮಿ ಅವರಿಗೆ ಸಮಾಧಾನವಿದ್ದಂತಿಲ್ಲ. ಕಳೆದ ಅವಧಿಯಿಂದಲೂ ಕೆಲವು ವಿಷಯಗಳ ಬಗ್ಗೆ ಕೇಂದ್ರ ಎನ್ ಡಿಎ ಸರ್ಕಾರವನ್ನು ಟೀಕಿಸುತ್ತಲೇ ಬಂದಿರುವ ಸ್ವಾಮಿ, ಪರೋಕ್ಷವಾಗಿ ಈ ಬಜೆಟ್ ಅನ್ನೂ ಟೀಕಿಸಿದ್ದಾರೆ.

English summary
BJP MP in the Rajya Sabha, Subramanian Swamy had a couple of things to say in the aftermath of Union Finance Minister, Nirmala Sitharaman presenting her maiden budget in Parliament a few hours back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X