ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NEET, JEE ಪರೀಕ್ಷೆ ಆಯೋಜನೆ ಈಗ ಏಕೆ? ಸ್ವಾಮಿ ಪ್ರಶ್ನೆ

|
Google Oneindia Kannada News

ನವದೆಹಲಿ, ಆ. 26: ವಿವಿಧ ಪರೀಕ್ಷೆಗಳನ್ನು ಆಯೋಜಿಸಲು ಎನ್ಟಿಎಗೆ ಅನುಮತಿ ಸಿಗುತ್ತಿದ್ದಂತೆ ಪರಿಷ್ಕೃತ ಪರೀಕ್ಷೆ ದಿನಾಂಕಗಳನ್ನು ಯುಜಿಸಿ ಪ್ರಕಟಿಸಿದೆ. ಆದರೆ, ಹಲವು ರಾಜ್ಯಗಳ ಪ್ರತಿರೋಧದ ನಡುವೆ NEET, JEE ನಡೆಸಲು ಮುಂದಾಗಿರುವುದೇಕೆ ಎಂದು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

Recommended Video

ಕೊನೆಗೂ Africa , Polioದಿಂದ ಮುಕ್ತ | Oneindia Kannada

ಹಲವು ರಾಜ್ಯದಲ್ಲಿ ಕೊರೊನಾ ವೈರಸ್ ಉಲ್ಬಣವಾಗುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ನಿರ್ಧಾರದಿಂದ ಸರ್ಕಾರ ಹಿಂದಕ್ಕೆ ಸರಿಯಬೇಕು. ಲಾಕ್‌ಡೌನ್‌ನಿಂದಾಗಿ ಅವರಿಗೆ ಸರಿಯಾಗಿ ಕ್ಲಾಸ್‌ಗಳು ನಡೆದಿಲ್ಲ. ಜೊತೆಗೆ ಅರ್ಧದಷ್ಟು ಪಠ್ಯಕ್ರಮವನ್ನೂ ಈವರೆಗೆ ಮುಗಿಸಿಲ್ಲ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ತೀರ್ಮಾನ ಮಾಡಿರುವುದು ಸರಿಯಲ್ಲ. ಯುಜಿಸಿ ಕೂಡ ಸ್ಥಳೀಯ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಪರೀಕ್ಷೆಯ ನಿರ್ಧಾರ ಕೈಗೊಳ್ಳುವಂತೆ ದಕ್ಷಿಣ ಭಾರತ ರಾಜ್ಯಗಳು ಸೇರಿದಂತೆ ಹಲವು ರಾಜ್ಯಗಳು ಮನವಿ ಮಾಡಿವೆ.

Subramanian Swamy Asks Why Govt not postponing NEET, JEE Main 2020

JEE ಅಡ್ಮಿಟ್ ಕಾರ್ಡ್ ಪ್ರಕಟ, ಡೌನ್ಲೋಡ್ ಮಾಡ್ಕೊಳಿ JEE ಅಡ್ಮಿಟ್ ಕಾರ್ಡ್ ಪ್ರಕಟ, ಡೌನ್ಲೋಡ್ ಮಾಡ್ಕೊಳಿ

ಯುಜಿಸಿ- ಎನ್ ಇಟಿ, ಇಗ್ನೋ, ಓಪನ್ ಮ್ಯಾಟ್, ದೆಹಲಿ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ, ಪಿಎಚ್ ಡಿ, ಐಸಿಎಆರ್, ಎಐಇಇಎ ಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆಗಳ ಪರಿಷ್ಕೃತ ದಿನಾಂಕವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA)ಪ್ರಕಟಿಸಿದೆ.

 ಯುಜಿಸಿ ಪರೀಕ್ಷೆಗಳ ಪರಿಷ್ಕೃತ ದಿನಾಂಕ ಪ್ರಕಟಿಸಿದ NTA ಯುಜಿಸಿ ಪರೀಕ್ಷೆಗಳ ಪರಿಷ್ಕೃತ ದಿನಾಂಕ ಪ್ರಕಟಿಸಿದ NTA

"ಈಗಿನ ಪರಿಸ್ಥಿತಿಯನ್ನು ಪರೀಕ್ಷೆ ನಡೆಸುವ ಮೂಲಕ ಪ್ರಮುಖ ನಗರಗಳ ಶ್ರೀಮಂತ ಕುಟುಂಬದಿಂದ ಬಂದ ವಿದ್ಯಾರ್ಥಿಗಳಿಗೆ ಮಾತ್ರ ಅನುಕೂಲವಾಗಬಲ್ಲುದು ಎಂಬುದು ಸರ್ಕಾರ ಮನವರಿಕೆಯಾಗಿಲ್ಲವೇ? ಕಳೆದ ಐದು ತಿಂಗಳಿನಿಂದ ಬಡ ಹಾಗೂ ಕೆಳ ಮಧ್ಯಮ ವರ್ಗದ ಕುಟುಂಬದ ವಿದ್ಯಾರ್ಥಿಗಳು ಇಂಟರ್ನೆಟ್, ಗ್ರಂಥಾಲಯದ ನೆರವಿಲ್ಲದೆ ಸರಿಯಾಗಿ ವ್ಯಾಸಂಗ, ಅಭ್ಯಾಸ, ತಯಾರಿ ಮಾಡಿಕೊಂಡಿಲ್ಲ. ಪ್ರಧಾನಿಗಳು ಈ ಬಗ್ಗೆ ಗಮನ ಹರಿಸಬೇಕು'' ಎಂಬರ್ಥದಲ್ಲಿ ಸ್ವಾಮಿ ಟ್ವೀಟ್ ಮಾಡಿದ್ದಾರೆ.

English summary
Rajya Sabha MP Subramanian Swamy on Tuesday asked why the Centre is not considering Postpone of NEET, JEE Main 2020 Exams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X