ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಐಟಿ ಘಟಕದ ವಿರುದ್ಧ ಸಂಸದ ಸುಬ್ರಮಣಿಯನ್ ಸ್ವಾಮಿ ಆರೋಪ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 7: ಭಾರತೀಯ ಜನತಾ ಪಕ್ಷದಲ್ಲಿ ಆಂತರಿಕ ಸಮರ ಶುರುವಾಗಿದೆ. ಪಕ್ಷದ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ತಮ್ಮ ಪಕ್ಷದವರೇ ಆದ ಅಮಿತ್ ಮಾಳವೀಯ ವಿರುದ್ಧ ಹರಿಹಾಯ್ದಿದ್ದಾರೆ.

ಪಕ್ಷದ ಮಾಹಿತಿ ಮತ್ತು ತಂತ್ರಜ್ಞಾನ ಘಟಕದ (ಐಟಿ ಸೆಲ್) ಮುಖ್ಯಸ್ಥ ಅಮಿತ್ ಮಾಳವೀಯ ನಕಲಿ ಟ್ವೀಟ್‌ಗಳನ್ನು ಬಳಸುವ ಮೂಲಕ ತಮ್ಮ ವಿರುದ್ಧ ಆಂದೋಲನ ನಡೆಸುತ್ತಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

NEET, JEE ಪರೀಕ್ಷೆ ಆಯೋಜನೆ ಈಗ ಏಕೆ? ಸ್ವಾಮಿ ಪ್ರಶ್ನೆ NEET, JEE ಪರೀಕ್ಷೆ ಆಯೋಜನೆ ಈಗ ಏಕೆ? ಸ್ವಾಮಿ ಪ್ರಶ್ನೆ

ಬಿಜೆಪಿಯ ಐಟಿ ಸೆಲ್ ಅಪ್ರಾಮಾಣಿಕವಾಗಿದೆ. ಅದರ ಕೆಲವು ಸದಸ್ಯರು ನಕಲಿ ಐಡಿ ಟ್ವೀಟ್‌ಗಳನ್ನು ಸೃಷ್ಟಿಸಿ ನನ್ನ ವಿರುದ್ಧ ದಾಳಿ ನಡೆಸುತ್ತಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ. ಪಕ್ಷದ ಕಿಡಿಗೇಡಿ ಐಟಿ ಸೆಲ್‌ಗೆ ಬಿಜೆಪಿ ಹೊಣೆ ಹೊರಲು ಸಾಧ್ಯವಾಗದೆ ಇರುವಂತೆಯೇ ನನ್ನೆಡೆಗಿನ ವೈಯಕ್ತಿಕ ದಾಳಿಗಳ ವಿರುದ್ಧ ಕುಪಿತಗೊಂಡಿರುವ ನನ್ನ ಅನುಯಾಯಿಗಳು ಪ್ರತಿ ದಾಳಿ ನಡೆಸಿದರೆ ನಾನು ಜವಾಬ್ದಾರನಲ್ಲ ಎಂದು ಹೇಳಿದ್ದಾರೆ. ಮುಂದೆ ಓದಿ.

ಐಟಿ ಸದಸ್ಯರನ್ನು ವಜಾಗೊಳಿಸಿ

ಐಟಿ ಸದಸ್ಯರನ್ನು ವಜಾಗೊಳಿಸಿ

ಈ ದಾಳಿಗಳನ್ನು ನಿರ್ಲಕ್ಷಿಸಿ ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಸಲಹೆ ನೀಡಿದ್ದಾರೆ. ಇದಕ್ಕೆ ಸ್ವಾಮಿ, ಬಿಜೆಪಿಯು ತನ್ನ ಐಟಿ ಘಟಕದ ಸದಸ್ಯರನ್ನು ವಜಾಗೊಳಿಸಬೇಕು ಎಂದು ಹೇಳಿದ್ದಾರೆ. 'ನಾನು ಇವುಗಳನ್ನು ನಿರ್ಲಕ್ಷಿಸುತ್ತಿದ್ದೇನೆ ಆದರೆ ಬಿಜೆಪಿ ಅವರನ್ನು ಕಿತ್ತೊಗೆಯಬೇಕು. ಒಂದು ಮಾಳವೀಯ ಪಾತ್ರಧಾರಿ ಕೊಳಕು ಗಲಭೆ ನಡೆಸುತ್ತಿದೆ. ನಾವು ಮರ್ಯಾದಾ ಪುರುಷೋತ್ತಮನ ಪಕ್ಷದವರೇ ಹೊರತು ರಾವಣ ಅಥವಾ ದುಶ್ಯಾಸನರ ಪಕ್ಷದವರಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಸ್ವಾಮಿ ವಿರುದ್ಧ ಟ್ವೀಟ್‌ಗಳು

ಸ್ವಾಮಿ ವಿರುದ್ಧ ಟ್ವೀಟ್‌ಗಳು

ಸುಬ್ರಮಣಿಯನ್ ಸ್ವಾಮಿ ಅವರು ಮೋದಿ ಸರ್ಕಾರ ಹಾಗೂ ರಾಮಮಂದಿರ ನಿರ್ಮಾಣದ ವಿರುದ್ಧ ಇದ್ದಾರೆ ಎಂದು ಹೇಳುವ ಸರಣಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಇದರ ಬಗ್ಗೆ ಸ್ವಾಮಿ ಈ ರೀತಿ ಹೇಳಿಕೆ ನೀಡಿದ್ದಾರೆ.

ನಟಿ ಜಿಯಾ ಖಾನ್ ಸಾವಿನ ತನಿಖೆ ಬಗ್ಗೆ ಸ್ವಾಮಿ ಟ್ವೀಟ್ನಟಿ ಜಿಯಾ ಖಾನ್ ಸಾವಿನ ತನಿಖೆ ಬಗ್ಗೆ ಸ್ವಾಮಿ ಟ್ವೀಟ್

ಮೋದಿ ಅನುಯಾಯಿ ಮಾಡಿದ್ದ ಟ್ವೀಟ್

ಮೋದಿ ಅನುಯಾಯಿ ಮಾಡಿದ್ದ ಟ್ವೀಟ್

ತಮಗೆ ಬಿಜೆಪಿ ಯಾವುದೇ ಹುದ್ದೆ ನೀಡದೆ ಹೋದರೆ ಮೋದಿ ಸರ್ಕಾರ ಉರುಳುತ್ತದೆ ಎಂದು ಸ್ವಾಮಿ ಸ್ಪಷ್ಟವಾಗಿ ಹೇಳಿದ್ದರು. ಓವೈಸಿ ಹೇಳಿದ್ದು ಸರಿಯಾಗಿತ್ತು. ನಮಗಿಂತಲೂ ಚೆನ್ನಾಗಿ ಅವರು ಸ್ವಾಮಿಯನ್ನು ಬಲ್ಲರು. ಮಿ. ಸ್ವಾಮಿ, ಇದು ಅಟಲ್‌ಜಿ ಸರ್ಕಾರವಲ್ಲ. ಈಗ ನಮ್ಮ ಬಳಿ ಮೋದಿ ಇದ್ದಾರೆ ಎಂದು ಅಕ್ಷಯ್ ಸಿಂಗ್ ಎಂಬಾತ ಬರೆದಿದ್ದ ಪೋಸ್ಟ್ ಹಂಚಿಕೊಂಡಿರುವ ಸ್ವಾಮಿ, ಈ ವ್ಯಕ್ತಿ ಒಬ್ಬ ಸುಳ್ಳುಗಾರ. ಟ್ವಿಟ್ಟರ್‌ ಇದನ್ನು ಗಮನಿಸಬೇಕು ಎಂದು ಹೇಳಿದ್ದರು.

ನೀಟ್, ಜೆಇಇ ಪರೀಕ್ಷೆಗೆ ಆಕ್ಷೇಪ

ನೀಟ್, ಜೆಇಇ ಪರೀಕ್ಷೆಗೆ ಆಕ್ಷೇಪ

ಕೆಲವು ದಿನಗಳ ಹಿಂದಷ್ಟೇ ನೀಟ್ ಮತ್ತು ಜೆಇಇ ಪರೀಕ್ಷೆ ನಡೆಸಲು ಪಟ್ಟು ಹಿಡಿದಿದ್ದ ಕೇಂದ್ರ ಸರ್ಕಾರದ ವಿರುದ್ಧ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗಿನ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸುವ ಮೂಲಕ ಪ್ರಮುಖ ನಗರಗಳ ಶ್ರೀಮಂತ ಕುಟುಂಬದಿಂದ ಬಂದ ವಿದ್ಯಾರ್ಥಿಗಳಿಗೆ ಮಾತ್ರ ಅನುಕೂಲವಾಗಬಲ್ಲುದು ಎಂಬುದು ಸರ್ಕಾರ ಮನವರಿಕೆಯಾಗಿಲ್ಲವೇ? ಕಳೆದ ಐದು ತಿಂಗಳಿನಿಂದ ಬಡ ಹಾಗೂ ಕೆಳ ಮಧ್ಯಮ ವರ್ಗದ ಕುಟುಂಬದ ವಿದ್ಯಾರ್ಥಿಗಳು ಇಂಟರ್ನೆಟ್, ಗ್ರಂಥಾಲಯದ ನೆರವಿಲ್ಲದೆ ಸರಿಯಾಗಿ ವ್ಯಾಸಂಗ, ಅಭ್ಯಾಸ, ತಯಾರಿ ಮಾಡಿಕೊಂಡಿಲ್ಲ. ಪ್ರಧಾನಿಗಳು ಈ ಬಗ್ಗೆ ಗಮನ ಹರಿಸಬೇಕು'' ಎಂದು ಸ್ವಾಮಿ ಟ್ವೀಟ್ ಮಾಡಿದ್ದರು.

English summary
BJP senior leader Subramanian Swamy accused the party's IT Cell head Amit Malviya of running a campaign against him using fake tweets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X