ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆಜಾನ್, ವಾಲ್‌ಮಾರ್ಟ್‌ ನಿಷೇಧಿಸಿ: ಸುಬ್ರಹ್ಮಣ್ಯ ಸ್ವಾಮಿ ಒತ್ತಾಯ

|
Google Oneindia Kannada News

ನವದೆಹಲಿ, ಅಕ್ಟೋಬರ್ 21: ಭಾರತದಲ್ಲಿ ಅಮೆಜಾನ್ ಮತ್ತು ವಾಲ್‌ಮಾರ್ಟ್‌ ಅನ್ನು ನಿಷೇಧಿಸಬೇಕೆಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯ ಸ್ವಾಮಿ ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸುಬ್ರಹ್ಮಣಿಯನ್ ಸ್ವಾಮಿ, 'ವಿದೇಶಿ ವ್ಯಾಪಾರ ಕಂಪೆನಿಗಳಾದ ಅಮೆಜಾನ್, ವಾಲ್‌ಮಾರ್ಟ್‌ ಸಂಸ್ಥೆಗಳ ಅವಶ್ಯಕತೆ ಏನಿದೆ?' ಎಂದು ಅವರು ಪ್ರಶ್ನಿಸಿದ್ದಾರೆ.

Recommended Video

ಅಮೆಜಾನ್ ‍ಪ್ರೈಮ್ ಡೇ ಸೇಲ್ ಬಗ್ಗೆ ನೀವು ತಿಳಿಯಲೇ ಬೇಕಾದ ವಿಷಯಗಳು | Oneindia Kannada

ನೆಟ್ ಫ್ಲಿಕ್ಸ್, ಅಮೆಜಾನ್ ವಿಡಿಯೋ ನಿಯಂತ್ರಣಕ್ಕೆ ನಿಯಮ ರೂಪಿಸಲು ಚಿಂತನೆನೆಟ್ ಫ್ಲಿಕ್ಸ್, ಅಮೆಜಾನ್ ವಿಡಿಯೋ ನಿಯಂತ್ರಣಕ್ಕೆ ನಿಯಮ ರೂಪಿಸಲು ಚಿಂತನೆ

'ಕ್ರೆಡಿಟ್ ಕಾರ್ಡ್‌ಗಳು, ಇನ್ನಿತರೆ ಕಾರ್ಡ್‌ಗಳನ್ನು ಬಳಸಿ ನಾವು ಅಮೆರಿಕದ ಅಮೆಜಾನ್ ಮೂಲಕವೇ ವಸ್ತು ಕೊಳ್ಳಲು ಸಾಧ್ಯವಿರುವಾಗ ಅಮೆಜಾನ್ ಇಂಡಿಯಾದ ಅವಶ್ಯಕತೆ ಏನಿದೆ?' ಎಂದು ಸುಬ್ರಹ್ಮಣಿಯನ್ ಸ್ವಾಮಿ ಪ್ರಶ್ನೆ ಮಾಡಿದ್ದಾರೆ.

Subrahmanian Swamy Demand To Ban Amazon, Walmart In India

'ವ್ಯಾಪಾರಸ್ಥರು ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗ, ಆದರೆ ಈ ಅಮೆಜಾನ್ ನಮ್ಮ ಸ್ಥಳೀಯ ವ್ಯಾಪಾರಿಗಳನ್ನು ಹಾಳುಮಾಡುತ್ತದೆ, ಅಮೆಜಾನ್ ರೀತಿಯಲ್ಲಿಯೇ ವಾಲ್‌ಮಾರ್ಟ್‌ ಸಹ ಸ್ಥಳೀಯ ವ್ಯಾಪಾರಿಗಳನ್ನು ಹಾಳು ಮಾಡುತ್ತದೆ' ಎಂದು ಹೇಳಿದ್ದಾರೆ.

ಫ್ಲಿಪ್‌ಕಾರ್ಟ್‌ ಬಗ್ಗೆ ಸುಬ್ರಹ್ಮಣಿಯನ್ ಸ್ವಾಮಿ ಅವರು ಯಾವುದೇ ಕಮೆಂಟ್ ಮಾಡಿಲ್ಲ. ಫ್ಲಿಪ್‌ಕಾರ್ಟ್‌ ಭಾರತದ ಸಂಸ್ಥೆಯಾಗಿದ್ದು, ಬೆಂಗಳೂರಿನದ್ದೇ ಆಗಿದೆ.

ತಿನ್ನುವ ಮೂಲಕವೇ ಕೋಟಿಗಟ್ಟಲೆ ಹಣ ಸಂಪಾದಿಸಿದ ಮಹಿಳೆತಿನ್ನುವ ಮೂಲಕವೇ ಕೋಟಿಗಟ್ಟಲೆ ಹಣ ಸಂಪಾದಿಸಿದ ಮಹಿಳೆ

ಸುಬ್ರಹ್ಮಣಿಯನ್ ಸ್ವಾಮಿ ಅವರು ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹೊಸ ಮನವಿ ಮಾಡಿದ್ದು, ಪ್ರಕರಣವನ್ನು ಪ್ರತಿದಿನ ವಿಚಾರಣೆ ನಡೆಸುವಂತೆ ಕೋರಿದ್ದಾರೆ. ಸುಬ್ರಹ್ಮಣಿಯನ್ ಸ್ವಾಮಿ ಅವರ ಮನವಿಯನ್ನು 2020 ಕ್ಕೆ ಪರಿಗಣಿಸುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಆರೋಪಿಗಳಾಗಿದ್ದಾರೆ.

English summary
MP Subrahmanian Swamy demand ban Amazon and Walmart in India. He tweeted that 'we can access amazon America from here only then why we need Amazon India'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X