ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿನ ಮೂಲ ವುಹಾನ್ ಲ್ಯಾಬ್ ಅಲ್ಲವೇ ಅಲ್ಲ ಎಂದ ಅಧ್ಯಯನ

|
Google Oneindia Kannada News

ನವದೆಹಲಿ, ಜುಲೈ 06: "ಚೀನಾದ ವುಹಾನ್ ಪ್ರಯೋಗಾಲಯದಿಂದ ಕೊರೊನಾ ಸೋಂಕು ಸೃಷ್ಟಿಯಾಯಿತು ಎಂಬ ವಾದ ಬೆಂಬಲಿಸಲು ಯಾವುದೇ ವೈಜ್ಞಾನಿಕ ಸಾಕ್ಷ್ಯವಿಲ್ಲ. ಈ ಸೋಂಕು ಪ್ರಕೃತಿಯಲ್ಲೇ ಸೃಷ್ಟಿಯಾಗಿದೆ ಎಂಬುದನ್ನು ಹಲವು ಅಧ್ಯಯನಗಳು ತಿಳಿಸಿವೆ" ಎಂದು ಲ್ಯಾನ್ಸೆಟ್ ನಿಯತಕಾಲಿಕೆಯಲ್ಲಿ ವಿಜ್ಞಾನಿಗಳ ತಂಡ ಉಲ್ಲೇಖಿಸಿದೆ.

ಜೀವಶಾಸ್ತ್ರಜ್ಞರು, ಪರಿಸರ ವಿಜ್ಞಾನಿಗಳು, ಸಾಂಕ್ರಾಮಿಕ ರೋಗಶಾಸ್ತ್ರಜ್ಞರು, ವೈದ್ಯರು, ಸಾರ್ವಜನಿಕ ಆರೋಗ್ಯ ತಜ್ಞರು ಹಾಗೂ ಪಶುವೈದ್ಯರ ತಂಡ ಸೋಮವಾರ ಈ ವರದಿ ಪ್ರಕಟಿಸಿದೆ.

ಕೊರೊನಾ ಹುಟ್ಟು: ವಿಶ್ವ ಆರೋಗ್ಯ ಸಂಸ್ಥೆ ತನಿಖೆ ಕುರಿತು ತಜ್ಞರ ಅನುಮಾನಕೊರೊನಾ ಹುಟ್ಟು: ವಿಶ್ವ ಆರೋಗ್ಯ ಸಂಸ್ಥೆ ತನಿಖೆ ಕುರಿತು ತಜ್ಞರ ಅನುಮಾನ

"ಚೀನಾದ ವುಹಾನ್ ಪ್ರಯೋಗಾಲಯದಿಂದ ಕೊರೊನಾ ಸೋಂಕು ಸೃಷ್ಟಿಯಾಗಿದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳು ಇದುವರೆಗೂ ದೊರೆತಿಲ್ಲ. ಆದರೆ ಇದು ನಿಸರ್ಗದಲ್ಲೇ ಜೀವ ತಳೆದಿದೆ ಎಂಬುದನ್ನು ಸಾಕ್ಷೀಕರಿಸುವಂತೆ ಹಲವು ಸಾಕ್ಷ್ಯಗಳು ದೊರೆಯುತ್ತಿವೆ" ಎಂದು ತಂಡ ವಾದಿಸಿದೆ.

Study Claims Coronavirus Not A Result Of Wuhan Lab Leak

ಕಳೆದ ವರ್ಷವೂ ಇದೇ ತಂಡ ಈ ವಾದವನ್ನು ಮಂಡಿಸಿತ್ತು.

"ಚೀನಾದ ವುಹಾನ್ ಲ್ಯಾಬ್‌ನಲ್ಲಿ ಸೋಂಕು ಸೃಷ್ಟಿಯಾಗಿದೆ ಎಂಬುದು ಊಹೆಯಷ್ಟೆ. ಇದು ಸುಳ್ಳು. ವೈರಸ್‌ಗಳು ಎಲ್ಲಿ ಬೇಕಾದರೂ ಸೃಷ್ಟಿಯಾಗಬಹುದು. ವುಹಾನ್‌ನಲ್ಲಿ ಕೊರೊನಾ ಸೃಷ್ಟಿ ವಾದವನ್ನು ನಿಲ್ಲಿಸಿ, ಸೋಂಕಿನ ಕುರಿತು ವೈಜ್ಞಾನಿಕ ವಿಶ್ಲೇಷಣೆಗೆ ಮುಂದಾಗಬೇಕಿದೆ. ಮುಂದಿನ ಅಲೆ ಕುರಿತು ಎಚ್ಚರಿಕೆ ವಹಿಸಬೇಕಿದೆ" ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕೊರೊನಾ ಹುಟ್ಟಿನ ಕುರಿತು ವಿಶ್ವ ಆರೋಗ್ಯ ಸಂಸ್ಥೆ ತನಿಖೆ ಕೈಗೊಂಡಿದ್ದು, ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ.

ನಾರ್ವೇ, ಅಮೆರಿಕ ಮತ್ತು ಬ್ರಿಟನ್ ದೇಶದ ಕೆಲ ವಿಜ್ಞಾನಿಗಳು ಕೊರೊನಾ ವೈರಸ್ ಚೀನಾದ ವುಹಾನ್ ಲ್ಯಾಬ್ ನಿಂದಲೇ ಸೋರಿಕೆಯಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದರು.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೂಡ ಕೋವಿಡ್ ವೈರಸ್ ನ ಮೂಲದ ಬಗ್ಗೆ ತನಿಖೆ ನಡೆಸಿ 90 ದಿನಗಳಲ್ಲಿ ವರದಿ ನೀಡುವಂತೆ ತಮ್ಮ ಗುಪ್ತಚರ ಸಂಸ್ಥೆಗಳಿಗೆ ಸೂಚನೆ ನೀಡಿದ್ದರು. ಕಳೆದ ಒಂದೂವರೆ ವರ್ಷದಿಂದ ತನಿಖೆ ನಡೆಯುತ್ತಿದೆ.

English summary
There is no scientifically validated evidence to support the theory that the coronavirus leaked from a laboratory in China, a group of scientists wrote in The Lancet journal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X