ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಡಿಶಾ: ವಿದ್ಯಾರ್ಥಿಗಳ ಬಳಿ ಕೂಲಿ ಕೆಲಸ ಮಾಡಿಸಿಕೊಂಡ ಶಿಕ್ಷಕಿ!

|
Google Oneindia Kannada News

ಮಯೂರ್ ಭಂಜ್, ನವೆಂಬರ್ 25: ಬಾಲಕಾರ್ಮಿಕ ಪದ್ಧತಿ ತಪ್ಪು ಎಂದು ಮಕ್ಕಳಲ್ಲಿ ಅರಿವು ಮೂಡಿಸಬೇಕಿದ್ದ ಶಿಕ್ಷಕಿಯೇ, ಮಕ್ಕಳಿಂದ ತನ್ನ ಹೊಲದಲ್ಲಿಕೂಲಿಕೆಲಸ ಮಾಡಿಸಿದ ಹೀನಾಯ ಘಟನೆ ಒಡಿಶಾದ ಮಯೂರ್ ಭಂಜ್ ಎಂಬಲ್ಲಿ ನಡೆದಿದೆ.

ಹೋಂ ವರ್ಕ್ ಮಾಡಿಲ್ಲವೆಂದು ರಕ್ತಬರುವಂತೆ ಬಾರಿಸಿದ ಶಿಕ್ಷಕಿ!ಹೋಂ ವರ್ಕ್ ಮಾಡಿಲ್ಲವೆಂದು ರಕ್ತಬರುವಂತೆ ಬಾರಿಸಿದ ಶಿಕ್ಷಕಿ!

ವರದಿಯೊಂದರ ಪ್ರಕಾರ ಸಂಗೀತಾ ಸರಿತ್ ಮುಂಡಾ ಎಂಬ ಶಿಕ್ಷಕಿಯೊಬ್ಬರು ತಾನು ಕೆಲಸ ಮಾಡುವ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಮೂವರು ಹೆಣ್ಣು ಮಕ್ಕಳ ಬಳಿ ತನ್ನ ಹೊಲದಲ್ಲಿ ಕೆಲಸ ಮಾಡುವಂತೆ ಹೇಳಿದ್ದಾಳೆ. ಮೂರು ದಿನಗಳ ಕಾಲ ಹೊಲದಲ್ಲಿ ಕೆಲಸ ಮಾಡಿದರೆ ತಲಾ 100 ರೂ ನೀಡುವುದಾಗಿ ಹೇಳಿದ್ದ ಆಕೆ ಹಾಗೆಯೇ ನಡೆದುಕೊಂಡಿದ್ದಾರೆ.

Students of Odisha's Government school made to work in field for Rs. 100

ಈ ಮೂವರು ಹುಡುಗಿಯರು ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಮಕ್ಕಳನ್ನು ಭೇಟಿಯಾಗಲೆಂದು ಶಾಲೆಗೆ ಬಂದಿದ್ದ ಪಾಲಕರಿಗೆ ಮಕ್ಕಳು ಶಾಲೆಯಲ್ಲಿಲ್ಲ ಎಂಬುದು ತಿಳಿದು, ಅವರ ಕುರಿತು ವಿಚಾರಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ಇದರಿಂದ ರೊಚ್ಚಿಗೆದ್ದ ಪಾಲಕರು, ಶಾಲೆಯ ಬಾಗಿಲಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಈ ಕುರಿತು ಶಾಲೆಯ ಉನ್ನತಾಧಿಕಾರಿಗಳು ವಿಚಾರಣೆ ನಡೆಸುವ ಭರವಸೆ ನೀಡಿದ್ದಾರೆ.

English summary
A different condition of a government school came to light in Odisha's Mayurbhanj, where a teacher allegedly made the students work in her fields.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X