ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನದಲ್ಲಿ ಜನಿಸಿದ್ದ ಮಗುವಿಗೆ ಜನನ ಪ್ರಮಾಣಪತ್ರವೇ ಸಿಗುತ್ತಿಲ್ಲ

|
Google Oneindia Kannada News

ನವದೆಹಲಿ, ಏಪ್ರಿಲ್ 7: ಕಳೆದ ತಿಂಗಳು ಬೆಂಗಳೂರು-ಜೈಪುರ ವಿಮಾನದಲ್ಲಿ ಮಾರ್ಗ ಮಧ್ಯೆಯೇ ಮಗು ಜನಿಸಿದ್ದು ಎಲ್ಲೆಲ್ಲೂ ಸುದ್ದಿಯಾಗಿತ್ತು. ವಿಮಾನ ಯಾನದ ಸಂದರ್ಭ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಇಂಡಿಗೋ ವಿಮಾನ ಸಿಬ್ಬಂದಿ ಸಹಾಯದೊಂದಿಗೆ, ಅದೇ ವಿಮಾನದಲ್ಲಿದ್ದ ಡಾ. ಸುಬಹಾನಾ ನಾಜೀರ್ ಅವರು ಯಶಸ್ವಿ ಹೆರಿಗೆ ಮಾಡಿಸಿದ್ದರು.

ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಆಂಬುಲೆನ್ಸ್‌ನಲ್ಲಿ ತಾಯಿ ಮಗುವನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ತಾಯಿ ಮಗು ಕೂಡ ಆರೋಗ್ಯವಾಗಿದ್ದಾರೆ. ಆದರೆ ಆ ಮಗುವಿಗೆ ಈಗ ಜನನ ಪ್ರಮಾಣ ಪತ್ರ ಸಿಗುವುದೇ ಸಮಸ್ಯೆಯಾಗಿಬಿಟ್ಟಿದೆ.

ವಿಮಾನ ಪ್ರಯಾಣ ವೇಳೆಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆವಿಮಾನ ಪ್ರಯಾಣ ವೇಳೆಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ನಿಯಮದ ಪ್ರಕಾರ ಮಗು ಜನಿಸಿದ 21 ದಿನಗಳಲ್ಲಿ ಜನನ ಪ್ರಮಾಣ ಪತ್ರ ನೀಡಬೇಕು. ಆದರೆ ಮಗು ವಿಮಾನದಲ್ಲಿ ಜನಿಸಿರುವುದು ಕೆಲವು ಗೊಂದಲಗಳಿಗೆ ಎಡೆಮಾಡಿಕೊಟ್ಟಿದೆ.

Struggle To Get Birth Certificate For Baby Born In Mid Air

ಮಾರ್ಚ್ 17ರಂದು ಬೆಂಗಳೂರಿನಿಂದ ಜೈಪುರದೆಡೆಗೆ ಹೊರಟಿದ್ದ ವಿಮಾನದಲ್ಲಿ ಮಗು ಜನಿಸಿತ್ತು. ನಂತರ ಜೈಪುರದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ದುಬಾರಿಯಾಗಿದ್ದ ಕಾರಣ ಅಲ್ಲಿಂದ ಬಿಡುಗಡೆಗೊಳಿಸಿ ಬೀವಾರ್ ಜಿಲ್ಲೆಯಲ್ಲಿನ ಗ್ರಾಮದಲ್ಲಿ ಇಬ್ಬರನ್ನೂ ದಾಖಲಿಸಲಾಗಿತ್ತು. ಆಗಿನಿಂದಲೂ ಮಗುವಿನ ಜನನ ಪ್ರಮಾಣ ಪತ್ರ ಪಡೆಯಲು ಪೋಷಕರು ಓಡಾಡುತ್ತಿದ್ದಾರೆ. ಮಗುವಿಗೆ 20 ದಿನಗಳಾಗಿದ್ದು, ಜನನ ಪ್ರಮಾಣ ಪತ್ರ ದೊರೆತಿಲ್ಲ.

Recommended Video

ಸರ್ಕಾರಿ ಬಸ್‌ ನಿಲ್ದಾಣದಲ್ಲಿ ಖಾಸಗಿ ಬಸ್‌ ಸೇವೆ, ಕರ್ತವ್ಯಕ್ಕೆ ಗೈರಾದ ಸಾರಿಗೆ ನೌಕರರು | Oneindia Kannada

ಗ್ರಾಮದ ಸರಪಂಚ್ ಅವರ ಬಳಿ ವಿಚಾರಿಸಿದ್ದು, ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವರದಿ ಕೇಳಿದ್ದಾರೆ. ಆದರೆ ಅಲ್ಲಿ ಹೆರಿಗೆಯೇ ಆಗದ್ದರಿಂದ ಅಲ್ಲಿಯೂ ಗೊಂದಲ ಉಂಟಾಗಿದೆ.
ಮಗು ವಿಮಾನದಲ್ಲಿ ಜನಿಸಿದ್ದರಿಂದ ಇಂಥ ಗೊಂದಲಗಳು ಉಂಟಾಗಿವೆ ಎಂದು ಮಗುವಿನ ತಂದೆ ತಮ್ಮ ಪರದಾಟ ಹೇಳಿಕೊಂಡಿದ್ದಾರೆ.

English summary
Parents of a baby who was born last month on a Bengaluru-Jaipur flight are now struggling to get a birth certificate for the infant
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X