ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರುಣಾಚಲ ಪ್ರದೇಶದಲ್ಲಿ 6.1ರಷ್ಟು ತೀವ್ರತೆಯ ಭೂಕಂಪ

|
Google Oneindia Kannada News

ನವದೆಹಲಿ, ಏಪ್ರಿಲ್ 24: ಅರುಣಾಚಲ ಪ್ರದೇಶದಲ್ಲಿ ಬುಧವಾರದಂದು ಭೂಕಂಪ ಸಂಭವಿಸಿದೆ. 6.1ರಷ್ಟು ತೀವ್ರತೆ ಇದ್ದ ಪ್ರಬಲ ಭೂಕಂಪ ಸಂಭವಿಸಿರುವುದಾಗಿ ಅಮೆರಿಕದ ಜಿಯಾಲಜಿಕಲ್ ಸರ್ವೇ ತಿಳಿಸಿದೆ. ಭೂಕಂಪದ ಕೇಂದ್ರವು ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಿಂದ ಆಗ್ನೇಯಕ್ಕೆ ನಲವತ್ತು ಕಿ.ಮೀ. ಹಾಗೂ ನೈರುತ್ಯಕ್ಕೆ ನೂರಾ ಎಂಬತ್ತು ಕಿ.ಮೀ.ಗೆ ಭೂಕಂಪನವು ಕೇಂದ್ರೀಕೃತವಾಗಿತ್ತು.

ಬುಧವಾರ ಮಧ್ಯರಾತ್ರಿ 1.45ರ ಹೊತ್ತಿಗೆ ಭೂಕಂಪವಾಗಿದೆ. ಅರುಣಾಚಲ ಪ್ರದೇಶದಲ್ಲಿ ಹನ್ನೆರಡು ಲಕ್ಷಕ್ಕೂ ಹೆಚ್ಚು ಮಂದಿ ಇದ್ದಾರೆ. ಇನ್ನು ಚೀನಾದ ಅಧಿಕೃತ ಸರಕಾರಿ ಸುದ್ದಿ ಸಂಸ್ಥೆಯ ಮಾಹಿತಿ ಪ್ರಕಾರ, ಟಿಬೆಟ್ ನಲ್ಲೂ ಕಂಪನದ ಅನುಭವ ಆಗಿದೆ. ಅರುಣಾಚಲ ಪ್ರದೇಶವು ಮ್ಯಾನ್ಮಾರ್ ಹಾಗೂ ಭೂತಾನ್ ಜತೆಗೆ ಕೂಡ ಗಡಿ ಹಂಚಿಕೊಳ್ಳುತ್ತದೆ.

Strong earthquake hits Arunachal Pradesh

ಇಂಡೋನೇಶ್ಯಾದ ಸುಲಾವೇಶಿಯಲ್ಲಿ 7.0 ತೀವ್ರತೆಯ ಭೂಕಂಪ ಇಂಡೋನೇಶ್ಯಾದ ಸುಲಾವೇಶಿಯಲ್ಲಿ 7.0 ತೀವ್ರತೆಯ ಭೂಕಂಪ

6.1ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದ್ದರೂ ಯಾವುದೇ ಸಾವು-ನೋವು ಸಂಭವಿಸಿದ ಸಾಧ್ಯತೆಗಳು ಇಲ್ಲ ಎಂದು ಅಮೆರಿಕದ ಜಿಯಾಲಜಿಕಲ್ ಸರ್ವೇ ತಿಳಿಸಿದೆ. ಆದರೆ ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಭೂಕಂಪದ ತೀವ್ರತೆಯು 5.8ರಷ್ಟು ಇತ್ತು ಎನ್ನಲಾಗಿದೆ.

English summary
A strong 6.1-magnitude earthquake struck Arunachal Pradesh early Wednesday, the US Geological Survey said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X