ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿಗೆ ಬುದ್ದಿಮಾತು ಹೇಳಿದ ಶರದ್ ಪವಾರ್

|
Google Oneindia Kannada News

ನವದೆಹಲಿ, ಜೂನ್ 27: "ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ರಾಜಕೀಯ ಮಾಡಬಾರದು" ಎಂದು ಎನ್ಸಿಪಿ ಮುಖಂಡ, ಮಾಜಿ ರಕ್ಷಣಾ ಸಚಿವ ಶರದ್ ಪವಾರ್ ಹೇಳಿದ್ದಾರೆ.

ಪ್ರಧಾನಿ ಮೋದಿಯನ್ನು ಚೀನಾಗೆ ಒಪ್ಪಿಸಿದ್ದಾರೆ ಎನ್ನುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ಹೇಳಿಕೆಗೆ, ಶರದ್ ಪವಾರ್ ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

ಪವಾರ್ ಮಹಾರಾಷ್ಟ್ರದ ಕೊರೊನಾ ವೈರಸ್; ಬಿಜೆಪಿ ನಾಯಕಪವಾರ್ ಮಹಾರಾಷ್ಟ್ರದ ಕೊರೊನಾ ವೈರಸ್; ಬಿಜೆಪಿ ನಾಯಕ

"1962ರ ಎರಡು ದೇಶಗಳ ನಡುವಿನ ಯುದ್ದದ ನಂತರ ಇಂತಹ ಘಟನೆಯು ನಡೆದಿದೆ. ಐದು ದಶಕಗಳ ನಂತರ ಗಡಿ ಭೂಮಿ ಮೇಲೆ ತನ್ನ ಹಕ್ಕು ಸ್ಥಾಪಿಸಲು ಹೊರಟಿದೆ" ಎಂದು ಶರದ್ ಪವಾರ್ ಹೇಳಿದ್ದಾರೆ.

Stop Politicising National Security, Says Sharad Pawar In Apparent Dig At Rahul Gandhi

"1962ರ ಯುದ್ದದ ನಂತರ ಸುಮಾರು 45,000 ಚದರ ಕಿಲೋಮೀಟರ್ ಜಾಗವನ್ನು ಚೀನಾ ಆಕ್ರಮಿಸಿಕೊಂಡಿತ್ತು. ಯಾರೇ ಆಗಲಿ ಹೇಳಿಕೆ ನೀಡುವ ಮುನ್ನ ಹಿಂದಿನ ಘಟನೆಯನ್ನೊಮ್ಮೆ ಅವಲೋಕಿಸುವುದು ಸೂಕ್ತ"ಎಂದು ಶರದ್ ಪವಾರ್, ರಾಹುಲ್ ಹೆಸರು ಹೇಳದೇ ಬುದ್ದಿ ಮಾತನ್ನು ಹೇಳಿದ್ದಾರೆ.

"ರಾಷ್ಟ್ರೀಯ ಭದ್ರತೆ ರಾಜಕೀಯ ಮಾಡುವ ವಿಚಾರವಲ್ಲ. ನಮ್ಮ ಯೋಧರು ಚೀನಾದ ಯೋಧರು ನಮ್ಮ ಗಡಿ ಪ್ರವೇಶಿಸಿದಾಗ ಅವರನ್ನು ಹಿಮ್ಮೆಟ್ಟಿಸಲು ನೋಡಿದರು. ಇದನ್ನು ರಕ್ಷಣಾ ಇಲಾಖೆ ಅಥವಾ ಸರಕಾರದ ವೈಫಲ್ಯ ಎಂದು ಹೇಳಲು ಸಾಧ್ಯವಿಲ್ಲ"ಎಂದು ಶರದ್ ಪವಾರ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

"ನಮ್ಮ ಯೋಧರು ಸನ್ನದ್ದ ಸ್ಥಿತಿಯಲ್ಲಿ ಇಲ್ಲದೇ ಇದ್ದಿದ್ದರೆ ಚೀನಾದವರು ನಮ್ಮ ಗಡಿಯನ್ನು ಆಕ್ರಮಿಸಿಕೊಂಡರು ಎನ್ನುವುದಕ್ಕೆ ಸಾಕ್ಷಿಯಿರುತ್ತಿರಲಿಲ್ಲ"ಎಂದು ಶರದ್ ಪವಾರ್ ಹೇಳಿದ್ದಾರೆ.

English summary
Stop Politicising National Security, Says Sharad Pawar In Apparent Dig At Rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X