ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಮರ್ ಅಬ್ದುಲ್ಲಾ, ಗೌತಮ್ ಗಂಭೀರ್ ನಡುವೆ ಟ್ವಿಟರ್ ವಾರ್!

|
Google Oneindia Kannada News

ನವದೆಹಲಿ, ಏಪ್ರಿಲ್ 03 : 'ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನ ಮಂತ್ರಿ ಮಾಡಿಕೊಳ್ಳುತ್ತೇವೆ' ಎಂಬ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಒಮರ್ ಅಬ್ದುಲ್ಲಾ ಹೇಳಿಕೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.

ಈ ಹೇಳಿಕೆ ಬಗ್ಗೆ ಮಾಜಿ ಕ್ರಿಕೆಟರ್, ಬಿಜೆಪಿ ನಾಯಕ ಮತ್ತು ಒಮರ್ ಅಬ್ದುಲ್ಲಾ ನಡುವೆ ಟ್ವೀಟರ್ ವಾರ್ ನಡೆದಿದೆ. 'ನಿಮಗೆ ಗೊತ್ತಿರುವ ವಿಚಾರಗಳಿಗೆ ಮಾತ್ರ ನೀವು ಸೀಮಿತವಾಗಿರಿ. ಐಪಿಎಲ್ ಬಗ್ಗೆ ಟ್ವೀಟ್ ಮಾಡಿ' ಎಂದು ಒಮರ್ ಅಬ್ದುಲ್ಲಾ ಗಂಭೀರ್‌ಗೆ ತಿರುಗೇಟು ಕೊಟ್ಟಿದ್ದಾರೆ.

ಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿ ಮೆಹಬೂಬಾ ಮಫ್ತಿಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿ ಮೆಹಬೂಬಾ ಮಫ್ತಿ

ಪ್ರಧಾನಿ ನರೇಂದ್ರ ಮೋದಿ ಅವರು ಸಹ ಒಮರ್ ಅಬ್ದುಲ್ಲಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದರು. 'ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕ ಪ್ರಧಾನಿ ಇದ್ದ 1953ರ ಕಾಲಕ್ಕೆ ದೇಶದ ಗಡಿಯಾರವನ್ನು ಹಿಮ್ಮುಖವಾಗಿ ತಿರುಗಿಸಲು ಕಾಂಗ್ರೆಸ್‌ನ ಮಿತ್ರ ಪಕ್ಷ ನ್ಯಾಷನಲ್ ಕಾನ್ಫರೆನ್ಸ್ ಯತ್ನಿಸುತ್ತಿದೆ' ಎಂದು ಮೋದಿ ಹೇಳಿದ್ದರು.

14 ಲಕ್ಷ ರುಪಾಯಿ ದಂಡ ಹಾಕಿ, ಗಿಲಾನಿಗೆ 'ಫೆಮಾ' ಕೇಸು ಜಡಿದ ಇಡಿ14 ಲಕ್ಷ ರುಪಾಯಿ ದಂಡ ಹಾಕಿ, ಗಿಲಾನಿಗೆ 'ಫೆಮಾ' ಕೇಸು ಜಡಿದ ಇಡಿ

ಕೆಲವು ದಿನಗಳ ಹಿಂದೆ ಬಂಡಿಪೋರ ಎಂಬಲ್ಲಿ ಪಕ್ಷದ ಸಭೆ ಉದ್ದೇಶಿಸಿ ಮಾತನಾಡಿದ್ದ ಒಮರ್ ಅಬ್ದುಲ್ಲಾ ಅವರು, 'ನಮಗೆ ಪ್ರತ್ಯೇಕ ಪ್ರಧಾನಿ, ರಾಷ್ಟ್ರಪತಿಗಳೂ ಇದ್ದರು. ದೇವರ ಆಶೀರ್ವಾದದೊಂದಿಗೆ ನಾವು ಮರಳಿ ಪ್ರತ್ಯೇಕ ಪ್ರಧಾನಿಯನ್ನು ಹೊಂದಲಿದ್ದೇವೆ' ಎಂದು ಹೇಳಿಕೆ ನೀಡಿದ್ದರು.

ಕಾಶ್ಮೀರಿಗಳನ್ನೇಕೆ ಆವರಿಸಿಕೊಂಡಿದೆ ಸಮೂಹ ಸನ್ನಿ? ಪರಿಹಾರವೇನು?ಕಾಶ್ಮೀರಿಗಳನ್ನೇಕೆ ಆವರಿಸಿಕೊಂಡಿದೆ ಸಮೂಹ ಸನ್ನಿ? ಪರಿಹಾರವೇನು?

ನಾನು ಸಮುದ್ರದ ಮೇಲೆ ನಡೆಯಬೇಕು

ಒಮರ್ ಅಬ್ದುಲ್ಲಾ ಅವರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಕು. ನಾನು ಸಮುದ್ರದ ಮೇಲೆ ನಡೆಯಬೇಕು. ಹಂದಿಗಳು ಹಾರಾಡಬೇಕು ಎಂದು ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದರು.

ಒಮರ್ ಅಬ್ದುಲ್ಲಾ ತಿರುಗೇಟು

ಗೌತಮ್ ಗಂಭೀರ್ ಟ್ವೀಟ್‌ಗೆ ಒಮರ್ ಅಬ್ದುಲ್ಲಾ ತಿರುಗೇಟು ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಇತಿಹಾಸ ಹಾಗೂ ಆ ಇತಿಹಾಸ ನಿರ್ಮಾಣದ ಹಿಂದೆ ನ್ಯಾಷನಲ್ ಕಾನ್ಪರೆನ್ಸ್ ಪಾತ್ರದ ಬಗ್ಗೆ ನಿಮಗೆ ಹೆಚ್ಚು ಗೊತ್ತಿಲ್ಲ. ನಿಮಗೆ ಗೊತ್ತಿರುವ ವಿಚಾರಗಳಿಗೆ ನೀವು ಸೀಮಿತವಾಗಿರಿ ಎಂದು ಹೇಳಿದ್ದಾರೆ.

ಗೌತಮ್ ಗಂಭೀರ್ ಉತ್ತರ

ಗೌತಮ್ ಗಂಭೀರ್ ಉತ್ತರ

'ಕ್ರಿಕೆಟ್ ಬಗ್ಗೆ ಬಿಡಿ. ನಿಸ್ವಾರ್ಥ ಆಡಳಿತದ ಬಗ್ಗೆ ತಿಳಿದುಕೊಂಡಿದ್ದರೆ ಕಾಶ್ಮೀರಿಗಳು ಹಾಗೂ ನಮ್ಮ ದೇಶಕ್ಕೆ ಒಳ್ಳೆಯದಾಗುತ್ತಿತ್ತು' ಎಂದು ಗೌತಮ್ ಗಂಭೀರ್ ತಿರುಗೇಟು ಕೊಟ್ಟಿದ್ದಾರೆ.

ಪ್ರಧಾನಿ ಮೋದಿ ಅಸಮಾಧಾನ

ಪ್ರಧಾನಿ ಮೋದಿ ಅಸಮಾಧಾನ

'ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕ ಪ್ರಧಾನಿ ಇದ್ದ 1953ರ ಕಾಲಕ್ಕೆ ದೇಶದ ಗಡಿಯಾರವನ್ನು ಹಿಮ್ಮುಖವಾಗಿ ತಿರುಗಿಸಲು ಕಾಂಗ್ರೆಸ್‌ನ ಮಿತ್ರ ಪಕ್ಷ ನ್ಯಾಷನಲ್ ಕಾನ್ಫರೆನ್ಸ್ ಯತ್ನಿಸುತ್ತಿದೆ' ಎಂದು ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದರು.

English summary
BJP leader Gautam Gambhir and Omar Abdullah twitter war on the debate separate PM for Jammu and Kashmir. Stick to stuff you know Omar Abdullah tweeted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X