ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಹೆಚ್ಚು ಕಪ್ಪು ಶಿಲೀಂಧ್ರ ಪ್ರಕರಣಕ್ಕೆ ಸ್ಟಿರಾಯ್ಡ್‌ ಬಳಕೆ, ಮಧುಮೇಹ ಕಾರಣ; ಅಧ್ಯಯನ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ನವದೆಹಲಿ, ಅಕ್ಟೋಬರ್ 07: ಕೆಲವು ಕೊರೊನಾ ರೋಗಿಗಳಲ್ಲಿ ಕಾಣಿಸಿಕೊಳ್ಳುವ ಮ್ಯೂಕರ್‌ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರದ ಅಧಿಕ ಪ್ರಕರಣವನ್ನು ಭಾರತ ಹೊಂದಿದ್ದು, ಇದಕ್ಕೆ ಐದು ಪ್ರಮುಖ ಸಂಭವನೀಯ ಅಂಶಗಳನ್ನು ಹೊಸ ಅಧ್ಯಯನವೊಂದು ಕಲೆಹಾಕಿದೆ.

ಇಡೀ ವಿಶ್ವದಲ್ಲೇ 71%ನಷ್ಟು ಕಪ್ಪು ಶಿಲೀಂಧ್ರ ಪ್ರಕರಣವನ್ನು ಭಾರತ ಹೊಂದಿದ್ದು, ಈ ಸೋಂಕಿಗೆ ಕಾರಣವಾಗಬಲ್ಲ ಕೆಲವು ಅಂಶಗಳನ್ನು ಅಧ್ಯಯನ ಉಲ್ಲೇಖಿಸಿದೆ.

ಕೊರೊನಾದಿಂದ ಗುಣಮುಖರಾದರೂ 'ಮ್ಯೂಕೋರ್ಮೈಕೋಸಿಸ್' ಬದುಕಲು ಬಿಡುತ್ತಿಲ್ಲ!ಕೊರೊನಾದಿಂದ ಗುಣಮುಖರಾದರೂ 'ಮ್ಯೂಕೋರ್ಮೈಕೋಸಿಸ್' ಬದುಕಲು ಬಿಡುತ್ತಿಲ್ಲ!

ಮೇ 2021ರವರೆಗೂ ಭಾರತದಲ್ಲಿ ಸುಮಾರು 14,872 ಕಪ್ಪು ಶಿಲೀಂಧ್ರ ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ಅತಿ ಹೆಚ್ಚಿನ ಕೊರೊನಾ ರೋಗಿಗಳಲ್ಲಿ ಈ ಸಮಸ್ಯೆ ಕಂಡುಬಂದಿದೆ.

 Steroid And Diabetes Among 5 Reasons Why India Has More Black Fungus Cases Says Study

ಚಂಡೀಗಢದ ಪೋಸ್ಟ್‌ ಗ್ಯಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಅಂಡರ ರಿಸರ್ಚ್, ಜರ್ಮನಿಯ ಲೀಬ್‌ನಿಜ್ ಇನ್‌ಸ್ಟಿಟ್ಯೂಟ್ ಫಾರ್ ಟ್ರೋಪೊಸ್ಪೆರಿಕ್ ರಿಸರ್ಚ್ ತಂಡದ ಸಂಶೋಧಕರ ಪ್ರಕಾರ, ಈಚೆಗೆ ಭಾರತದ ಐಸಿಎಂಆರ್ ಮ್ಯೂಕರ್‌ಮೈಕೋಸಿಸ್‌ ಸಂಬಂಧ ಹೊರಡಿಸಿದ ಮಾರ್ಗಸೂಚಿಗಳಲ್ಲಿ ಕೆಲವು ಅಂಶಗಳು ಬಿಟ್ಟುಹೋಗಿವೆ. ಈ ಅಂಶಗಳು ಕಪ್ಪು ಶಿಲೀಂಧ್ರ ಸೋಂಕಿನಿಂದ ರಕ್ಷಿಸಿಕೊಳ್ಳುವ ಮಾರ್ಗವೂ ಆಗಿರುವುದಾಗಿ ಉಲ್ಲೇಖಿಸಿದೆ.

ಕೊರೊನಾ ಪ್ರೇರಿತ ಮ್ಯೂಕರ್‌ಮೈಕೋಸಿಸ್‌ಗೆ ಈ ಸಂಶೋಧಕರು ಇದೀಗ ಐದು ಪ್ರಮುಖ ಕಾರಣಗಳನ್ನು ಕಲೆ ಹಾಕಿದ್ದಾರೆ. ಅವು ಈ ಕೆಳಗಿನಂತಿವೆ...

ಇದು ಬ್ಲಾಕ್ ಫಂಗಸ್ ಅಲ್ಲ; ಕೊರೊನಾದಿಂದ ಗುಣಮುಖರಾದವರಿಗೆ ಎದುರಾಯ್ತು ಹೊಸ ಸಮಸ್ಯೆ!ಇದು ಬ್ಲಾಕ್ ಫಂಗಸ್ ಅಲ್ಲ; ಕೊರೊನಾದಿಂದ ಗುಣಮುಖರಾದವರಿಗೆ ಎದುರಾಯ್ತು ಹೊಸ ಸಮಸ್ಯೆ!

ಮಧುಮೇಹ: ಭಾರತದಲ್ಲಿ ಮಧುಮೇಹ ಸಮಸ್ಯೆ ಇದ್ದವರು ಸುಲಭವಾಗಿ ಕಪ್ಪು ಶಿಲೀಂಧ್ರ ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ. ಸಂಶೋಧಕರ ಪ್ರಕಾರ, ಭಾರತದಲ್ಲಿ ಕಪ್ಪು ಶಿಲೀಂಧ್ರ ಸೋಂಕಿಗೆ ತುತ್ತಾದವರಲ್ಲಿ 50% ಮಧುಮೇಹಿಗಳಾಗಿದ್ದಾರೆ. 2019ರ ಅಧ್ಯಯನದ ಪ್ರಕಾರ, ಕಪ್ಪು ಶಿಲೀಂಧ್ರ ಸೋಂಕಿಗೆ ತುತ್ತಾಗಿದ್ದ ಕೊರೊನಾ ರೋಗಿಗಳಲ್ಲಿ 57% ಮಂದಿ ಅನಿಯಂತ್ರಿತ ಮಧುಮೇಹ ಸಮಸ್ಯೆ ಹೊಂದಿದ್ದವರಾಗಿದ್ದರು.

 Steroid And Diabetes Among 5 Reasons Why India Has More Black Fungus Cases Says Study

ಔಷಧಗಳ ಅತಿಯಾದ ಬಳಕೆ; ದೇಶದಲ್ಲಿ ಕೊರೊನಾ ಎರಡನೇ ಅಲೆ ಸಂದರ್ಭ ಸ್ಟೆರಾಯ್ಡ್‌ಗಳ ಬಳಕೆ ವ್ಯಾಪಕವಾಗಿತ್ತು. ಕೊರೊನಾ ರೋಗಿಗಳು ಮರಣ ಹೊಂದುವುದನ್ನು ತಪ್ಪಿಸಲು ಈ ಔಷಧಗಳ ಬಳಕೆ ಮಾಡಲಾಗಿತ್ತು. ಆದರೆ ಆಸ್ಪತ್ರೆಗೆ ಸೇರುವ ಅವಶ್ಯಕತೆಯಿಲ್ಲದವರಿಗೂ ಅಧಿಕ ಡೋಸೇಜ್ ಔಷಧಿಗಳನ್ನು ನೀಡಲಾಗಿತ್ತು. ವೈದ್ಯರ ಸಲಹೆಯಿಲ್ಲದೇ ಹಲವರು ಔಷಧಿಗಳನ್ನು ಸೇವಿಸಿದ್ದು ಕಂಡುಬಂದಿತ್ತು. ಸ್ಟೆರಾಯ್ಡ್‌ಗಳ ಅಧಿಕ ಸೇವನೆಯೊಂದಿಗೆ ರೋಗನಿರೋಧಕ ಶಕ್ತಿ ಕುಸಿದಿದ್ದು ಶಿಲೀಂಧ್ರ ಸೋಂಕಿಗೆ ದಾರಿ ಮಾಡಿಕೊಟ್ಟಿತ್ತು.

ಅಶುದ್ಧತೆ; ಕೊರೊನಾ ಎರಡನೇ ಅಲೆ ಸಂದರ್ಭ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯಿಂದಾಗಿ ಮನೆಯಲ್ಲಿಯೇ ಹಲವು ಮಂದಿ ಆಮ್ಲಜನಕ ಸಾಂದ್ರಕಗಳನ್ನು ಬಳಸಿದರು. ಅಶುದ್ಧ ಆಮ್ಲಜನಕ ಸಾಂದ್ರಕಗಳ ಬಳಕೆ ಸಾಧ್ಯತೆ ಹಾಗೂ ಅವುಗಳ ಬಳಕೆ ಬಗ್ಗೆ ಅರಿವಿಲ್ಲದಿರುವುದು, ಅದರಲ್ಲಿ ಬ್ಯಾಕ್ಟೀರಿಯಾ ಸೃಷ್ಟಿಗೆ ಕಾರಣವಾಗಿ ಶಿಲೀಂಧ್ರ ಸೋಂಕು ಉಂಟಾಗಲು ಎಡೆಮಾಡಿಕೊಟ್ಟಿತ್ತು.

ಅಧಿಕ ಕಬ್ಬಿಣಾಂಶ: ತೀವ್ರವಾದ ಕೊರೊನಾ ರೋಗಿಗಳಲ್ಲಿ ಅಧಿಕ ಮಟ್ಟದಲ್ಲಿ ಕಬ್ಬಿಣಾಂಶ ಸೇರಿದ್ದು ಕೂಡ ಸಮಸ್ಯೆಗೆ ಕಾರಣವಾಗಿತ್ತು. ಜೀವಕೋಶದಲ್ಲಿ ಹೆಚ್ಚು ಶೇಖರಣೆಯಾದ ಕಬ್ಬಿಣಾಂಶ ಪ್ರತಿಕ್ರಿಯಾತ್ಮಕ ಆಮ್ಲಜನಕ ಪ್ರಭೇದಗಳ ಉತ್ಪಾದನೆಗೆ ಕಾರಣವಾಗಿತ್ತು. ಈ ರಾಸಾಯನಿಕದಿಂದ ಅಂಗಾಂಶಗಳಿಗೆ ಹಾನಿಯಾಗಿ ಶಿಲೀಂಧ್ರ ಸೋಂಕನ್ನು ಉಂಟುಮಾಡಿದ್ದು ಕಂಡುಬಂದಿದೆ.

ಸೂಕ್ತ ಗಾಳಿ ಬೆಳಕು ಇಲ್ಲದಿರುವುದು; ಕೋಣೆಯಲ್ಲಿ ಸೂಕ್ತ ಗಾಳಿ ಬೆಳಕಿನ ಕೊರತೆಯೊಂದಿಗೆ ಗಾಳಿಯಲ್ಲಿ ಅಥವಾ ಸುತ್ತಮುತ್ತಲಿನ ಪರಿಸರದಲ್ಲಿ ಶಿಲೀಂಧ್ರಗಳು ಹರಡಲು ಕಾರಣವಾಗಿದ್ದು, ಸೋಂಕಿನ ಅಪಾಯವನ್ನು ಹೆಚ್ಚಿಸಿದ್ದು ಕಂಡುಬಂದಿದೆ.

ಕೊರೊನಾ ಸೋಂಕಿತರ ಸಾವಿಗೆ ಕೇವಲ ಕಪ್ಪು ಪಂಗಸ್ ಅಷ್ಟೇ ಕಾರಣವಲ್ಲ, ಅವರ ದೇಹದಲ್ಲಿರುವ ರಕ್ತದೊತ್ತಡ, ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಳ, ಸ್ಟೀರಾಯ್ಡ್ ಚಿಕಿತ್ಸೆಯಿಂದಲೂ ಕಪ್ಪು ಫಂಗಸ್ ಹೆಚ್ಚಳವಾಗುತ್ತಿದೆ ಎಂದು ಹಿಂದಿನ ಅಧ್ಯಯನಗಳು ತಿಳಿಸಿದ್ದವು. ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಅಥವಾ ವೆರಿಕೋಜೋನಲ್ ಥೆರಿಪಿಗೆ ಒಳಗಾಗಿರುವ, ಅನಿಯತ್ರಿತ ಮಧುಮೇಹ, ಸ್ಟೆರಾಯಿಡ್ ಗಳ ಅತಿಯಾದ ಬಳಕೆಯಿಂದ ರೋಗನಿರೋಧಕ ಶಕ್ತಿ ಕಳೆದುಕೊಂಡವರು ಅಥವಾ ಅಧಿಕ ಕಾಲ ICUನಲ್ಲಿ ಚಿಕಿತ್ಸೆ ಪಡೆದವರು ಈ ಸೋಂಕಿಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದರು.

English summary
A new study points out the five most probable factors that led to the rise in mucormycosis infections in India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X