ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಎಲ್, ಎಲ್ ಎಲ್ ಶುಲ್ಕ 5 ಪಟ್ಟು ಹೆಚ್ಚಳ, ಜನರ ಜೇಬಿಗೆ ಕೇಂದ್ರದ ಇಕ್ಕಳ

|
Google Oneindia Kannada News

ಬೆಂಗಳೂರು, ಜನವರಿ 7: ಡ್ರೈವಿಂಗ್ ಲೈಸನ್ಸ್ ಶುಲ್ಕ, ಡ್ರೈವಿಂಗ್ ಸ್ಕೂಲ್ ಆರಂಭಕ್ಕೆ ಬೇಕಾದ ಅನುಮತಿ, ಅಂತರರಾಷ್ಟ್ರೀಯ ಡ್ರೈವಿಂಗ್ ಲೈಸನ್ಸ್, ವಾಹನ ಮಾಲೀಕತ್ವದ ವರ್ಗಾವಣೆ, ವಿವಿಧ ವಾಹನಗಳ ನೋಂದಣಿ ಮತ್ತು ಅವುಗಳ ನವೀಕರಣ ಶುಲ್ಕದಲ್ಲಿ ಕೇಂದ್ರ ಸರಕಾರ ಭಾರೀ ಹೆಚ್ಚಳ ಮಾಡಿದೆ.

ಡಿಸೆಂಬರ್ 29ರಿಂದಲೇ ಹೊಸ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ಕೇಂದ್ರ ಸರಕಾರ ನಿಗದಿ ಮಾಡಿರುವುದಕ್ಕಿಂತ ಹೆಚ್ಚಿನ ಶುಲ್ಕವನ್ನು ರಾಜ್ಯ ಸರಕಾರ ವಸೂಲಿ ಮಾಡಬಹುದು ಎಂದು ತಿಳಿಸಲಾಗಿದೆ. ಆದರೆ ಕೇಂದ್ರ ನಿಗದಿ ಮಾಡಿದ್ದಕ್ಕಿಂತ ಕಡಿಮೆ ದರ ವಿಧಿಸಬಾರದು ಎಂಬುದಷ್ಟೇ ಸೂಚನೆ.[ವಾಹನ ಚಾಲನಾ ಪರವಾನಗಿ ಶುಲ್ಕದಲ್ಲಿ ಭಾರೀ ಹೆಚ್ಚಳ?]

Steep hike in DL, vehicle registration fees

ಕಲಿಕಾ ಪರವಾನಗಿ ಪತ್ರ (ಎಲ್ ಎಲ್ ಆರ್) ಶುಲ್ಕ 30 ರುಪಾಯಿ ಇದ್ದದ್ದನ್ನು 150ಕ್ಕೆ ಏರಿಸಲಾಗಿದೆ. ಚಾಲನಾ ಪರವಾನಗಿ ಪತ್ರ (ಡ್ರೈವಿಂಗ್ ಲೈಸನ್ಸ್) ಶುಲ್ಕವನ್ನು 40 ರುಪಾಯಿಯಿಂದ 200ಕ್ಕೆ ಹೆಚ್ಚಿಸಲಾಗಿದೆ. ಹೆಚ್ಚುವರಿಯಾಗಿ ಇನ್ನೂ ಎರಡು ವರ್ಗೀಕರಣ ಮಾಡಲಾಗಿದೆ. ಆ ಪ್ರಕಾರ ಅಪಾಯಕಾರಿ ವಸ್ತುಗಳನ್ನು ಸಾಗಿಸುವ ವಾಹನಗಳಿಗೆ ಒಪ್ಪಿಗೆ ಅಥವಾ ನವೀಕರಣಕ್ಕೆ 100 ರುಪಾಯಿ ಶುಲ್ಕ ನಿಗದಿಯಾಗಿದೆ.

ಇನ್ನು ಎಲ್ ಎಲ್ ಆರ್ ಅರ್ಜಿ ಸಲ್ಲಿಸುವವರು ಹಾಗೂ ಮತ್ತೆ ಪರೀಕ್ಷೆ ತೆಗೆದುಕೊಳ್ಳುವವರು 50 ರುಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಸಾರಿಗೆ-ಸಾರಿಗೇತರ ಕಾರಣಗಳಿಗೆ ಆಮದು ಮಾಡಿಕೊಳ್ಳುವ ಬೈಕ್ ಮತ್ತು ಕಾರುಗಳ ನೋಂದಣಿ ಶುಲ್ಕ ಸಹ ಹೆಚ್ಚಿಸಲಾಗಿದೆ. ಮಾಲೀಕತ್ವ ಬದಲಾವಣೆ, ವಿಳಾಸ ಬದಲಾವಣೆ, ಅಡಮಾನ ಒಪ್ಪಂದ ಮತ್ತಿತರ ಶುಲ್ಕಗಳು ಸಹ ಏರಿಕೆಯಾಗಿವೆ.

English summary
The Centre on Friday announced a hike in the fee for issue of driving licences, driving school permission, international driving permits, transfer of vehicle ownership and registration of various categories of vehicles and its renewal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X