ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಸಮಯಕ್ಕೆ ದೇಶದಲ್ಲಿ ಹಕ್ಕಿ ಜ್ವರದ ಸ್ಥಿತಿ ಗತಿ ಹೇಗಿದೆ?

|
Google Oneindia Kannada News

ನವದೆಹಲಿ, ಜನವರಿ 11: ಹಕ್ಕಿ ಜ್ವರ ಸೋಂಕು ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಬಾಧಿತ ರಾಜ್ಯಗಳಿಗೆ ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ. ಈ ವರೆಗೆ ಪಕ್ಷಿ ಜ್ವರದ ಸೋಂಕು ಏಳು ರಾಜ್ಯಗಳಲ್ಲಿ ಖಚಿತಪಟ್ಟಿದೆ. ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್ ಮತ್ತು ಉತ್ತರ ಪ್ರದೇಶ, ಮಿಕ್ಕ ರಾಜ್ಯಗಳಲ್ಲೂ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ.

ಹರಿಯಾಣದ ಪಂಚಕುಲ ಜಿಲ್ಲೆಯ ಎರಡು ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಪ್ರಯೋಗಾಲಯದಲ್ಲಿ ಪಕ್ಷಿ ಜ್ವರ ಮಾದರಿಗಳು ಖಚಿತಪಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೋಂಕು ನಿಯಂತ್ರಣ ಮತ್ತು ತಡೆಗಟ್ಟುವ ಉದ್ದೇಶದಿಂದ 9 ತ್ವರಿತ ಪ್ರತಿಕ್ರಿಯಾ ತಂಡಗಳನ್ನು ನಿಯೋಜಿಸಿದ್ದು, ಈ ಎರಡೂ ಕೇಂದ್ರಗಳಲ್ಲಿ ಸೋಂಕು ನಿಯಂತ್ರಣ ಕ್ರಮಗಳು ಪ್ರಗತಿಯಲ್ಲಿವೆ.

ಹಕ್ಕಿ ಜ್ವರ; ಮೊಟ್ಟೆ, ಮಾಂಸ ಸಂಪೂರ್ಣ ಬೇಯಿಸದೇ ತಿನ್ನಬೇಡಿಹಕ್ಕಿ ಜ್ವರ; ಮೊಟ್ಟೆ, ಮಾಂಸ ಸಂಪೂರ್ಣ ಬೇಯಿಸದೇ ತಿನ್ನಬೇಡಿ

ಗುಜರಾತ್ ನ ಸೂರತ್ ಮತ್ತು ರಾಜಸ್ಥಾನದ ಸಿರೋಹಿ ಜಿಲ್ಲೆಗಳಲ್ಲಿ ಕಾಗೆ, ಕಾಡು ಹಕ್ಕಿಗಳ ಮಾದರಿಗಳಲ್ಲೂ ಸಹ ಪಕ್ಷಿಜ್ವರದ [ಎಚ್-5] ಸೋಂಕು ಪತ್ತೆಯಾಗಿದೆ. ಕಂಗ್ರಾ ಜಿಲ್ಲೆಯಲ್ಲಿ [ಹಿಮಾಚಲ ಪ್ರದೇಶ] 86 ಕಾಗೆಗಳು ಮತ್ತು ಎರಡು ಬಾತು ಕೋಳಿಗಳು ಕೂಡ ಅಸಹಜ ಸಾವಿಗೀಡಾಗಿವೆ.

 ಹಿಮಾಚಲ ಪ್ರದೇಶದಲ್ಲಿ

ಹಿಮಾಚಲ ಪ್ರದೇಶದಲ್ಲಿ

ಹಿಮಾಚಲ ಪ್ರದೇಶದ ನಹಾನ್, ಬಿಲಾಸ್ ಪುರ್ ಮತ್ತು ಮಂಡಿಯಲ್ಲಿ ಕಾಡು ಹಕ್ಕಿಗಳ ಅಸಹಜ ಸಾವು ಸಂಭವಿಸಿರುವ ಮಾಹಿತಿ ಲಭ್ಯವಾಗಿದೆ ಮತ್ತು ಇವುಗಳ ಮಾದರಿಗಳನ್ನು ಪರೀಕ್ಷೆಗಾಗಿ ನಿಯೋಜಿತ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.

ಮಾದರಿಗಳ ಪರೀಕ್ಷಾ ವರದಿಗಳನ್ನು ದೆಹಲಿ ಮತ್ತು ಮಹಾರಾಷ್ಟ್ರದ ನಿಯೋಜಿತ ಪ್ರಯೋಗಾಲಯಗಳಿಗೆ ರವಾನಿಸಿದ್ದು, ವರದಿಯನ್ನು ನಿರೀಕ್ಷಿಸಲಾಗಿದೆ. ಚತ್ತೀಸ್ ಗಡದ ಬಲೋದ್ ಜಿಲ್ಲೆಯಲ್ಲಿ ಕಾಡು ಹಕ್ಕಿಗಳ ಮಾದರಿಯಲ್ಲಿ ಯಾವುದೇ ಸೋಂಕು ದೃಢಪಟ್ಟಿಲ್ಲ.

 ಕೇರಳದಲ್ಲಿ ಪಕ್ಷಿ ಜ್ವರ

ಕೇರಳದಲ್ಲಿ ಪಕ್ಷಿ ಜ್ವರ

ಕೇರಳದಲ್ಲಿ ಪಕ್ಷಿ ಜ್ವರ ದೃಢಪಟ್ಟು ಬಾಧಿತವಾಗಿರುವ ಎರಡು ಜಿಲ್ಲೆಗಳಲ್ಲಿ ನಿಯಂತ್ರಣ ಮತ್ತು ತಡೆಗಟ್ಟುವ ಕಾರ್ಯ ಪೂರ್ಣಗೊಂಡಿದೆ ಮತ್ತು ಕೇರಳದಲ್ಲಿ ಕಾರ್ಯಾಚರಣೆಯ ನಂತರದ ಕಣ್ಗಾವಲು ಕಾರ್ಯಕ್ರಮದ ಮಾರ್ಗಸೂಚಿ ಹೊರಡಿಸಲಾಗಿದೆ.

ಕೇರಳದಿಂದ ರಾಜ್ಯಕ್ಕೂ ವಕ್ಕರಿಸಿದ ಹಕ್ಕಿ ಜ್ವರ?ಕೇರಳದಿಂದ ರಾಜ್ಯಕ್ಕೂ ವಕ್ಕರಿಸಿದ ಹಕ್ಕಿ ಜ್ವರ?

ದೇಶದಲ್ಲಿ ಪಕ್ಷಿ ಜ್ವರ ಬಾಧಿತ ಪ್ರದೇಶಗಳಲ್ಲಿ ನಲುಗುತ್ತಿರುವ ಪರಿಸ್ಥಿತಿ ಅವಲೋಕಿಸಲು ಕೇಂದ್ರ ತಂಡಗಳು ಸಮಸ್ಯಾತ್ಮಕ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿವೆ. ಮತ್ತೊಂದೆಡೆ ಕೇಂದ್ರ ತಂಡಗಳು ಜನವರಿ 9, 2021 ರಂದು ಕೇರಳ ತಲುಪಿವೆ.

 ಪಕ್ಷಿ ಜ್ವರದ ಬಗ್ಗೆ ತಪ್ಪು ಮಾಹಿತಿ

ಪಕ್ಷಿ ಜ್ವರದ ಬಗ್ಗೆ ತಪ್ಪು ಮಾಹಿತಿ

ಸಾಂಕ್ರಾಮಿಕ ರೋಗ ಕಂಡು ಬಂದಿರುವ ಪ್ರದೇಶಗಳಲ್ಲಿ ಪರಿಶೀಲಿಸುತ್ತಿದ್ದು, ರೋಗ ಪತ್ತೆ ತನಿಖೆಯಲ್ಲಿ ತೊಡಗಿವೆ. ಇನ್ನೊಂದು ಕೇಂದ್ರ ತಂಡ ಜನವರಿ 10, 2021 ರಂದು ಹಿಮಾಚಲ ಪ್ರದೇಶಕ್ಕೆ ತಲುಪಿದೆ ಮತ್ತು ಸಮಸ್ಯಾತ್ಮಕ ಪ್ರದೇಶಗಳಲ್ಲಿ ಸಮೀಕ್ಷೆಯಲ್ಲಿ ನಿರತವಾಗಿದೆ.

ಪಕ್ಷಿ ಜ್ವರದ ಬಗ್ಗೆ ತಪ್ಪು ಮಾಹಿತಿ ಹರಡದಂತೆ ನೋಡಿಕೊಳ್ಳಬೇಕು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾಋ ಮನವಿ ಮಾಡಿದೆ.

 ಜೈವಿಕ ಸುರಕ್ಷತೆಯನ್ನು ಬಲಗೊಳ್ಳಬೇಕು

ಜೈವಿಕ ಸುರಕ್ಷತೆಯನ್ನು ಬಲಗೊಳ್ಳಬೇಕು

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಲ ಮೂಲಗಳು, ಜೀವಂತ ಹಕ್ಕಿಗಳಿರುವ ಮಾರುಕಟ್ಟೆಗಳು, ಮೃಗಾಲಯ, ಕೋಳಿಸಾಕಾಣಿಕೆ ಕೇಂದ್ರಗಳು, ಮತ್ತಿತರ ಪ್ರದೇಶಗಳ ಆಸು ಪಾಸಿನಲ್ಲಿ ಕಣ್ಗಾವಲು ಹೆಚ್ಚಿಸಬೇಕು. ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಸೂಕ್ತ ರೀತಿಯಲ್ಲಿ ವಿಲೇವಾರಿ ವ್ಯವಸ್ಥೆ ಮಾಡುವ ಜತೆಗೆ ಜೈವಿಕ ಸುರಕ್ಷತೆಯನ್ನು ಬಲಗೊಳಿಸಬೇಕೆಂದು ಸೂಚಿಸಲಾಗಿದೆ.

English summary
Status of Avian Influenza(Bird Flu) in the country as on Jan 10, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X