ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'44 ಲಕ್ಷಕ್ಕೂ ಅಧಿಕ ಡೋಸ್‌ ಇನ್ನು 3 ದಿನದಲ್ಲಿ ರಾಜ್ಯಗಳಿಗೆ ಲಭ್ಯ': ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಜು. 02: ''ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 33.63 ಕೋಟಿಗೂ ಅಧಿಕ ಕೋವಿಡ್‌ ಲಸಿಕೆ ಡೋಸ್‌ಗಳನ್ನು ಒದಗಿಸಿದೆ. ಪ್ರಸ್ತುತ 44,90,000 ಡೋಸ್ ಲಸಿಕೆ ಸಾಗಣೆ ಮಾಡಲಾಗುತ್ತಿದ್ದು, ಮುಂದಿನ 3 ದಿನಗಳಲ್ಲಿ ಅವುಗಳು ರಾಜ್ಯಗಳಿಗೆ ಲಭ್ಯವಾಗಲಿದೆ,'' ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಬಗ್ಗೆ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ, ''ದೇಶದಾದ್ಯಂತ ಕೋವಿಡ್ -19 ಲಸಿಕೆಯ ಅಭಿಯಾನ ವಿಸ್ತರಿಸುವ ಮತ್ತು ಅದರ ವೇಗ ಹೆಚ್ಚಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. 2021ರ ಜೂನ್ 21ರಿಂದ ಕೋವಿಡ್ -19 ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಹೊಸ ವೇಗ ಪಡೆದುಕೊಂಡಿದೆ,'' ಎಂದು ಹೇಳಿದೆ.

 'ಜುಲೈ ಬಂದಿದೆ, ಆದರೆ ಲಸಿಕೆ ಬಂದಿಲ್ಲ' ಎಂದ ರಾಹುಲ್‌ ವಿರುದ್ದ ಕೇಂದ್ರ ಸಚಿವರ ತರಾಟೆ 'ಜುಲೈ ಬಂದಿದೆ, ಆದರೆ ಲಸಿಕೆ ಬಂದಿಲ್ಲ' ಎಂದ ರಾಹುಲ್‌ ವಿರುದ್ದ ಕೇಂದ್ರ ಸಚಿವರ ತರಾಟೆ

''ಲಸಿಕೆಯ ಲಭ್ಯತೆಯ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡುವ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕಾ ಅಭಿಯಾನವನ್ನು ಉತ್ತಮವಾಗಿ ಸಕ್ರಿಯಗೊಳಿಸಲು ಸಹಕರಿಸಲಾಗಿದೆ. ಲಸಿಕೆ ಪೂರೈಕೆ ಸರಪಳಿಯನ್ನು ಸುವ್ಯವಸ್ಥಿತಗೊಳಿಸುವ ಮೂಲಕ ಲಸಿಕೆ ಅಭಿಯಾನ ವೇಗವನ್ನು ಹೆಚ್ಚಿಸಲಾಗಿದೆ,'' ಎಂದು ಮಾಹಿತಿ ನೀಡಿದೆ.

States to receive 44.9 lakh Covid vaccine doses in the next three days: Central Gvt

ಇನ್ನು ''ಈಗಾಗಲೇ ದೇಶವ್ಯಾಪಿ ಕೋವಿಡ್‌ ಲಸಿಕಾ ಅಭಿಯಾನದ ಭಾಗವಾಗಿ, ಭಾರತ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ಒದಗಿಸುತ್ತಿದೆ. ಕೋವಿಡ್ -19 ಲಸಿಕೆ ಅಭಿಯಾನದ ಸಾರ್ವತ್ರೀಕರಣದ ನೂತನ ಹಂತದಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿನ ಲಸಿಕೆ ತಯಾರಕರು ಉತ್ಪಾದಿಸುವ ಲಸಿಕೆಯ ಪೈಕಿ ಶೇ.75ರಷ್ಟನ್ನು ಖರೀದಿಸಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಪೂರೈಸುತ್ತಿದೆ,'' ಎಂದು ಪುನರುಚ್ಚರಿಸಿದೆ.

ಕರ್ನಾಟಕದಲ್ಲಿ ಮತ್ತೆ ವ್ಯಾಕ್ಸಿನ್ ಕೊರತೆ; ಗುರಿ ಪರಿಷ್ಕರಣೆ!ಕರ್ನಾಟಕದಲ್ಲಿ ಮತ್ತೆ ವ್ಯಾಕ್ಸಿನ್ ಕೊರತೆ; ಗುರಿ ಪರಿಷ್ಕರಣೆ!

''ಕೇಂದ್ರ ಸರ್ಕಾರವು ಈವರೆಗೆ ರಾಜ್ಯಗಳಿಗೆ 33.63 ಕೋಟಿ (33,63,78,220) ಕೋವಿಡ್‌ ಲಸಿಕೆ ಡೋಸ್‌ಗಳನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ (ಉಚಿತ ಮಾರ್ಗದಲ್ಲಿ) ಮತ್ತು ರಾಜ್ಯಗಳಿಂದಲೇ ನೇರವಾಗಿ ಖರೀದಿಸುವ ಪ್ರವರ್ಗದ ಮೂಲಕ ಪೂರೈಕೆ ಮಾಡಿದೆ. ಇಂದು ಬೆಳಗ್ಗೆ 8 ಗಂಟೆಯವರೆಗೆ ಲಭ್ಯವಾದ ಮಾಹಿತಿಯ ಪ್ರಕಾರ ವ್ಯರ್ಥವಾದ ಲಸಿಕೆ ಸೇರಿದಂತೆ ಒಟ್ಟು 33,73,22,514 ಡೋಸ್‌ ಲಸಿಕೆ ಬಳಕೆಯಾಗಿದೆ. ಪ್ರಸ್ತುತ 44,90,000 ಡೋಸ್ ಲಸಿಕೆ ಸಾಗಣೆ ಮಾಡಲಾಗುತ್ತಿದ್ದು, ಮುಂದಿನ 3 ದಿನಗಳಲ್ಲಿ ಅವುಗಳನ್ನು ರಾಜ್ಯಗಳು ಪಡೆದುಕೊಳ್ಳಲಿವೆ,'' ಎಂದು ಪ್ರಕಟಣೆ ತಿಳಿಸಿದೆ.

(ಒನ್‌ಇಂಡಿಯಾ ಸುದ್ದಿ)

English summary
The Union Health Ministry on Friday said that 44.9 lakh COVID-19 vaccine doses will be received by the states and UTs within the next three days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X