ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಟಾರ್ಟಪ್ ಶ್ರೇಯಾಂಕ: ಕರ್ನಾಟಕ ಟಾಪ್ ಪರ್ಫಾರ್ಮೆನ್ಸ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 11: ಕೇಂದ್ರ ಸರ್ಕಾರವು ತನ್ನ ರಾಜ್ಯವಾರು ಸ್ಟಾರ್ಟ್ ಅಪ್‌ ಶ್ರೇಯಾಂಕದ ಎರಡನೆಯ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಟಾಪ್ ಪರ್ಫಾರ್ಮರ್ಸ್ ಪಟ್ಟಿಯಲ್ಲಿ ಕರ್ನಾಟಕ ಸ್ಥಾನ ಪಡೆದುಕೊಂಡಿದೆ.

ರಾಜ್ಯಗಳಲ್ಲಿನ ಉದ್ಯಮಶೀಲತಾ ಪರಿಸರವನ್ನು ಉತ್ತೇಜಿಸುವ ಸಲುವಾಗಿ ನರೇಂದ್ರ ಮೋದಿ ಸರ್ಕಾರ ಸ್ಟಾರ್ಟ್ಅಪ್ ಶ್ರೇಯಾಂಕ ನೀಡುವ ಪದ್ಧತಿಯನ್ನು ಆರಂಭಿಸಿತ್ತು. ರಾಜ್ಯ ಮಟ್ಟದಲ್ಲಿ ಆವಿಷ್ಕಾರ ಹಾಗೂ ಉದ್ಯಮಶೀಲತೆಯನ್ನು ಬೆಂಬಲಿಸಲು ಸಾಮರ್ಥ್ಯ ವೃದ್ಧಿಯ ಉದ್ದೇಶ ಇದರ ಹಿಂದಿದೆ.

 ಸ್ಟಾರ್ಟ್‌ಅಪ್‌ಗಳ ಉತ್ತೇಜನಕ್ಕೆ ಫ್ಲಿಪ್‌ಕಾರ್ಟ್‌ನಿಂದ ಫ್ಲಿಪ್‌ಕಾರ್ಟ್‌ ಲೀಪ್‌ ಕಾರ್ಯಕ್ರಮ ಸ್ಟಾರ್ಟ್‌ಅಪ್‌ಗಳ ಉತ್ತೇಜನಕ್ಕೆ ಫ್ಲಿಪ್‌ಕಾರ್ಟ್‌ನಿಂದ ಫ್ಲಿಪ್‌ಕಾರ್ಟ್‌ ಲೀಪ್‌ ಕಾರ್ಯಕ್ರಮ

ಕೈಗಾರಿಕೆಗಳ ಅಭಿವೃದ್ಧಿ ಮತ್ತು ಆಂತರಿಕ ವ್ಯಾಪಾರ ಇಲಾಖೆ (ಡಿಪಿಐಐಟಿ) ಶುಕ್ರವಾರ ಈ ಪಟ್ಟಿ ಬಿಡುಗಡೆ ಮಾಡಿದೆ. 22 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳು ಇದರಲ್ಲಿ ಪಾಲ್ಗೊಂಡಿದ್ದವು. ರಾಜ್ಯಗಳು ತಮ್ಮಲ್ಲಿನ ಆವಿಷ್ಕಾರಗಳನ್ನು ಹೇಗೆ ಸುಧಾರಿಸಿಕೊಳ್ಳಬಹುದು ಎಂಬುದಕ್ಕೆ ವರದಿಯೊಂದನ್ನು ಕೂಡ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಮುಂದೆ ಓದಿ.

2019ರ ರಾಜ್ಯವಾರು ಸ್ಟಾರ್ಟ್‌ಅಪ್ ಶ್ರೇಯಾಂಕದ ಪಟ್ಟಿ

2019ರ ರಾಜ್ಯವಾರು ಸ್ಟಾರ್ಟ್‌ಅಪ್ ಶ್ರೇಯಾಂಕದ ಪಟ್ಟಿ

* ಬೆಸ್ಟ್ ಪರ್ಫಾರ್ಮರ್ಸ್: ಗುಜರಾತ್ (ರಾಜ್ಯ), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (ಕೇಂದ್ರಾಡಳಿತ ಪ್ರದೇಶ)

* ಟಾಪ್ ಪರ್ಫಾರ್ಮರ್ಸ್: ಕರ್ನಾಟಕ ಮತ್ತು ಕೇರಳ.

* ಲೀಡರ್ಸ್: ಬಿಹಾರ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ಚಂಡೀಗಡ.

* ಮಹತ್ವಾಕಾಂಕ್ಷಿ ಲೀಡರ್ಸ್: ಹರಿಯಾಣ, ಜಾರ್ಖಂಡ್, ಪಂಜಾಬ್, ತೆಲಂಗಾಣ, ಉತ್ತರಾಖಂಡ.

* ಉದಯೋನ್ಮುಖ ಸ್ಟಾರ್ಟಪ್ ಪರಿಸರ ವ್ಯವಸ್ಥೆ: ಆಂಧ್ರಪ್ರದೇಶ, ಅಸ್ಸಾಂ, ಛತ್ತೀಸಗಡ, ದೆಹಲಿ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಸಿಕ್ಕಿಂ, ತಮಿಳುನಾಡು, ಉತ್ತರ ಪ್ರದೇಶ.

ಸುಧಾರಣಾ ವಲಯದ ನಾಯಕರು

ಸುಧಾರಣಾ ವಲಯದ ನಾಯಕರು

ವಿವಿಧ ಸುಧಾರಣಾ ವಲಯಗಳಲ್ಲಿನ ನಾಯಕರ ಪಟ್ಟಿಯಲ್ಲಿ ಕರ್ನಾಟಕ, ಕೇರಳ ಹಾಗೂ ಒಡಿಶಾ ರಾಜ್ಯಗಳು ಸಾಂಸ್ಥಿಕ ನಾಯಕರಾಗಿ ಹೊರಹೊಮ್ಮಿವೆ. ಹಾಗೆಯೇ ರೆಗ್ಯುಲೇಟರಿ ಚೇಂಜ್ ಚಾಂಪಿಯನ್ಸ್‌ನಲ್ಲಿಯೂ ಕರ್ನಾಟಕ ಸ್ಥಾನ ಪಡೆದಿದ್ದು, ಕೇರಳ, ಒಡಿಶಾ, ಉತ್ತರಾಖಂಡ ಈ ಗೌರವ ಪಡೆದಿವೆ.

ಗಳಿಕೆ ನಾಯಕರು

ಗಳಿಕೆ ನಾಯಕರು

ಕರ್ನಾಟಕ

ಕೇರಳ

ತೆಲಂಗಾಣ

* ಹೊರಹೊಮ್ಮುತ್ತಿರುವ ಕೇಂದ್ರಗಳು

ಗುಜರಾತ್

ಕರ್ನಾಟಕ

ಕೇರಳ

ಜಾಗೃತಿ ಮತ್ತು ವಿಸ್ತರಣೆಯ ಚಾಂಪಿಯನ್‌ಗಳು

ಜಾಗೃತಿ ಮತ್ತು ವಿಸ್ತರಣೆಯ ಚಾಂಪಿಯನ್‌ಗಳು

ಗುಜರಾತ್

ಮಹಾರಾಷ್ಟ್ರ

ರಾಜಸ್ಥಾನ


*ಆವಿಷ್ಕಾರ ಬಿತ್ತನೆಯ ನಾಯಕರು

ಬಿಹಾರ

ಕೇರಳ

ಮಹಾರಾಷ್ಟ್ರ


* ಆವಿಷ್ಕಾರ ಪ್ರಮಾಣದ ನಾಯಕರು

ಗುಜರಾತ್

ಕೇರಳ

ಮಹಾರಾಷ್ಟ್ರ

ರಾಜಸ್ಥಾನ

English summary
States' startup ecosystem ranking 2019 released by the DPIIT and Karnataka has been named the top performer along with Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X