ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್‌ಐಎ, ಇಡಿ ದಾಳಿಯಲ್ಲಿ ರಾಜ್ಯಾವಾರು ಬಂಧಿತರ ವಿವರ ಇಲ್ಲಿದೆ

|
Google Oneindia Kannada News

ನವದೆಹಲಿ, ಸೆ.22: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ ಸಂಬಂಧಿಸಿರುವ ಕಚೇರಿಗಳ ಮೇಲೆ ಗುರುವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಮತ್ತು ರಾಜ್ಯ ಪೊಲೀಸ್ ಪಡೆಗಳ ಜಂಟಿ ತಂಡವು ದೇಶದ ಹಲವು ರಾಜ್ಯಗಳಲ್ಲಿ ದಾಳಿ ನಡೆಸಿದೆ.

ಭಯೋತ್ಪಾದಕ ನಿಧಿಗೆ ಸಂಬಂಧಿಸಿದಂತೆ 10 ರಾಜ್ಯಗಳಲ್ಲಿ ಎನ್‌ಐಎ ದಾಳಿ ನಡೆಸಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ ಇದುವರೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ ಸೇರಿದ 100 ಕ್ಕೂ ಹೆಚ್ಚು ಸದಸ್ಯರನ್ನು ಬಂಧಿಸಿದೆ.

ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು ಸೇರಿ 10 ರಾಜ್ಯಗಳಲ್ಲಿ ಎನ್‌ಐಎ,ಇಡಿ, ಪೊಲೀಸ್ ದಾಳಿಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು ಸೇರಿ 10 ರಾಜ್ಯಗಳಲ್ಲಿ ಎನ್‌ಐಎ,ಇಡಿ, ಪೊಲೀಸ್ ದಾಳಿ

ಎನ್‌ಐಎ ಮತ್ತು ಇಡಿ ಗುರುವಾರ ಮುಂಜಾನೆ ಕರ್ನಾಟಕ ಸೇರಿ ಉತ್ತರ ಪ್ರದೇಶ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ ಮತ್ತು ತಮಿಳುನಾಡು ಸೇರಿದಂತೆ ಹತ್ತು ರಾಜ್ಯಗಳಲ್ಲಿ ದಾಳಿ ನಡೆಸಿದೆ.

ಕೇರಳ ಪಿಎಫ್‌ಐ ರಾಜ್ಯ ಮುಖ್ಯಸ್ಥನ ಬಂಧನ

ಕೇರಳ ಪಿಎಫ್‌ಐ ರಾಜ್ಯ ಮುಖ್ಯಸ್ಥನ ಬಂಧನ

ಕೇರಳದಲ್ಲಿ ಅತಿ ಹೆಚ್ಚು ಜನರನ್ನು ಬಂಧಿಸಲಾಗಿದೆ. 22 ಮಂದಿ ಪಿಎಫ್‌ಐ ಮುಖಂಡರು ಮತ್ತು ಸದಸ್ಯರನ್ನು ವಶಕ್ಕೆ ಪಡೆಯಲಾಗಿದೆ. ಪಿಎಫ್‌ಐ ಅಧ್ಯಕ್ಷ ಒಎಂಎ ಸಲಾಂ, ಕೇರಳ ರಾಜ್ಯ ಮುಖ್ಯಸ್ಥ ಸಿಪಿ ಮೊಹಮ್ಮದ್ ಬಶೀರ್, ರಾಷ್ಟ್ರೀಯ ಕಾರ್ಯದರ್ಶಿ ವಿಪಿ ನಜರುದ್ದೀನ್ ಮತ್ತು ರಾಷ್ಟ್ರೀಯ ಕೌನ್ಸಿಲ್ ಸದಸ್ಯ ಪ್ರೊ ಪಿ ಕೋಯಾ ಅವರನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಪಿಎಫ್‌ಐ ಕಚೇರಿ ಸೀಜ್ ಮಾಡಿದ ಎನ್‌ಐಎ

ಬೆಂಗಳೂರಿನ ಪಿಎಫ್‌ಐ ಕಚೇರಿ ಸೀಜ್ ಮಾಡಿದ ಎನ್‌ಐಎ

ರಾಜ್ಯದ ಮಂಗಳೂರಿನಲ್ಲಿ ಮುಂಜಾನೆ ನಡೆದ ಎನ್‌ಐಎ ದಾಳಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರತಿಭಟನೆ ನಡೆಸುತ್ತಿದ್ದ 20 ಮಂದಿ ಪಿಎಫ್‌ಐ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಬೆಂಗಳೂರಿನ ನಾಲ್ಕು ಪಿಎಫ್‌ಐ ಕಚೇರಿಗಳ ಮೇಲೂ ದಾಳಿ ನಡೆದಿದ್ದು, ಕಚೇರಿಗಳನ್ನು ಸೀಜ್ ಮಾಡಲಾಗಿದೆ.

ಇನ್ನು, ದಾಳಿ ವೇಳೆ ಮಂಗಳೂರಿನ ಕಚೇರಿಯಲ್ಲಿದ್ದ ಲ್ಯಾಪ್‌ಟಾಪ್, ಕೆಲವೊಂದು ದಾಖಲೆಗಳನ್ನು ಎನ್ಐಎ ವಶಕ್ಕೆ ತೆಗೆದುಕೊಂಡಿದೆ. ಮುಖಂಡರನ್ನು ಯಾವುದೇ ರೀತಿಯಲ್ಲಿ ವಿಚಾರಣೆ ನಡೆಸಿಲ್ಲ. ಯಾವ ಕಾರಣಕ್ಕೆ ಈ ದಾಳಿ ನಡೆಸಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿಲ್ಲ. ನಾವು ರಾಜಕೀಯವಾಗಿ ಬೆಳೆಯುತ್ತಿದ್ದೇವೆ ಎಂದು ಬಿಜೆಪಿ ಈ ದಾಳಿಯನ್ನು ನಡೆಸಿದೆ ಎಂದು ಪಿಎಫ್‌ಐ ಸದಸ್ಯರು ಆರೋಪಿಸಿದ್ದಾರೆ.

ಶೋಧಕಾರ್ಯ ಮುಂದುವರೆಸಿದ NIA, ATS ಮತ್ತು ED

ಶೋಧಕಾರ್ಯ ಮುಂದುವರೆಸಿದ NIA, ATS ಮತ್ತು ED

ಮಹಾರಾಷ್ಟ್ರದ ಔರಂಗಾಬಾದ್, ಪುಣೆ, ಕೊಹ್ಲಾಪುರ್, ಬೀಡ್, ಪರ್ಭಾನಿ, ನಾಂದೇಡ್, ಜಲಗಾಂವ್, ಜಲ್ನಾ, ಮಾಲೆಗಾಂವ್, ನವಿ ಮುಂಬೈ, ಥಾಣೆ ಮತ್ತು ಮುಂಬೈನಲ್ಲಿ ಎನ್‌ಐಎ ದಾಳಿ ನಡೆಸಿದೆ.

ದಾಳಿಯಲ್ಲಿ ಮತ್ತು ಎನ್‌ಐಎ ದಾಳಿ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ 20 ಮಂದಿ PFI ಮುಖಂಡರು ಮತ್ತು ಸದಸ್ಯರನ್ನು ಬಂಧಿಸಲಾಗಿದೆ. ಬಂಧಿತರ ವಿರುದ್ಧ ಐಪಿಸಿ (153 ಎ, 121 ಎ, 109, 120 ಬಿ) ಮತ್ತು ಯುಎಪಿಎ ಸೆಕ್ಷನ್ 13 (1) (ಬಿ) ಯ ವಿವಿಧ ವಿಭಾಗಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ದಾಳಿ ವಿರೋಧಿಸಿ 50 ಕ್ಕೂ ಹೆಚ್ಚು ಸದಸ್ಯರ ಪ್ರತಿಭಟನೆ

ದಾಳಿ ವಿರೋಧಿಸಿ 50 ಕ್ಕೂ ಹೆಚ್ಚು ಸದಸ್ಯರ ಪ್ರತಿಭಟನೆ

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಪಕ್ಷದ ಕಚೇರಿ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. NIA ದಾಳಿಯನ್ನು ವಿರೋಧಿಸಿ PFI ನ 50 ಕ್ಕೂ ಹೆಚ್ಚು ಸದಸ್ಯರು ಪಕ್ಷದ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ತಮಿಳುನಾಡಿನಲ್ಲಿಯೂ 10 ಮಂದಿ ಪಿಎಫ್ಐ ಸದಸ್ಯರನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ಇನ್ನು, ಅಸ್ಸಾಂನಲ್ಲಿ (9), ಉತ್ತರ ಪ್ರದೇಶದಲ್ಲಿ (8), ಆಂಧ್ರಪ್ರದೇಶದಲ್ಲಿ (5), ದೆಹಲಿಯಲ್ಲಿ (3), ಮಧ್ಯಪ್ರದೇಶದಲ್ಲಿ (4), ಪುದುಚೇರಿಯಲ್ಲಿ (3) ಮತ್ತು ರಾಜಸ್ಥಾನದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.

English summary
State-wise details of those arrested in National Investigation Agency and enforcement directorate raids in several states including Karnataka. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X