ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಬುರ್ಗಿ ಹತ್ಯೆಯಲ್ಲಿ ಆರ್‌ಎಸ್‌ಎಸ್‌ ಕೈವಾಡವಿಲ್ಲ: ಅಮಿತ್ ಶಾ

|
Google Oneindia Kannada News

ಪಟನಾ,ಅಕ್ಟೋಬರ್, 19: ಉತ್ತರ ಪ್ರದೇಶದ ದಾದ್ರಿ ಹತ್ಯೆ ಮತ್ತು ಸಮಶೋಧಕ ಡಾ. ಎಮ್ ಎಮ್ ಕಲಬುರ್ಗಿ ಹತ್ಯೆಯಂಥ ಪ್ರಕರಣಗಳಿಗೆ ಆಯಾ ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಅಲ್ಲದೇ ಇಂಥ ಪ್ರಕರಣಗಳಲ್ಲಿ ಬಿಜೆಪಿ ಅಥವಾ ಆರ್ ಎಸ್ ಎಎಸ್ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಪಟನಾದಲ್ಲಿ ಮಾತನಾಡಿದ ಶಾ, ಈ ಪ್ರಕರಣಗಳು ನಡೆದ ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳು ಅಧಿಕಾರದಲ್ಲಿವೆ. ಹತ್ಯೆಗೆ ಸಂಬಂಧಿಸಿ ಸಾಹಿತಿಗಳು ಮತ್ತು ಬರಹಗಾರರು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿರುವುದರಲ್ಲಿ, ಪ್ರಶಶ್ತಿ ಹಿಂದಕ್ಕೆ ನೀಡುತ್ತಿರುವುದರಲ್ಲಿ ಯಾವ ಅರ್ಥವಿಲ್ಲ ಎಂದು ಹೇಳಿದರು.['ಪ್ರತಿಯೊಂದಕ್ಕೂ ಬಿಜೆಪಿಯನ್ನು ದೂರುವುದನ್ನು ಬಿಡಿ']

amit shah

ದಾದ್ರಿ ಪ್ರಕರಣ ನಡೆದ ರಾಜ್ಯದಲ್ಲಿ ಸಮಾಜವಾದಿ ಪಕ್ಷ ಆಡಳಿತದಲ್ಲಿದೆ. ಅಂತೆಯೇ ಡಾ. ಕಲ್ಬುರ್ಗಿ ಹತ್ಯೆಯಾದಂಥ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತವಿದೆ. ಆಯಾ ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಾಗೂ ಶಾಂತಿ ಪಾಲನೆಯ ಜವಾಬ್ದಾರಿ ಆಯಾ ರಾಜ್ಯಗಳದ್ದಾಗಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ನಿರ್ದೇಶನ ನೀಡಬಹುದೇ ವಿನಃ ಮತ್ತೇನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.[ಸೋಲಿನ ಭಯ, ಚುನಾವಣಾ ಪೋಸ್ಟರ್ ನಿಂದ ಮೋದಿ, ಶಾ ಔಟ್?]

ಇದೇ ವೇಳೆ ಮೀಸಲಾತಿಗೆ ಸಂಬಂಧಿಸಿ ಆರ್ ಎಸ್ ಎಸ್ ಪ್ರಮುಖ ಮೋಹನ್ ಭಾಗವತ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾ ಪ್ರಸ್ತುತ ಇರುವ ಮೀಸಲಾತಿ ವ್ಯವಸ್ಥೆಯನ್ನು ಬಿಜೆಪಿ ಬೆಂಬಲಿಸುತ್ತದೆ ಎಂದಿದ್ದಾರೆ.

English summary
The Bharatiya Janata Party cannot be blamed for incidents taking place in states ruled by others, party chief Amit Shah said while addressing a press conference in Bihar on Monday. Shah appeared to defer responsibility for both the Dadri lynching in Samajwadi Party-ruled Uttar Pradesh, and the murder of rationalist MM Kalburgi, which he suggested was an issue for the Congress to deal with in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X