ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ ನೆಪದಲ್ಲಿ ಸೈಬರ್ ದಾಳಿ: 20 ಲಕ್ಷ ಗ್ರಾಹಕರಿಗೆ ಎಸ್‌ಬಿಐ ಎಚ್ಚರಿಕೆ

|
Google Oneindia Kannada News

ನವದೆಹಲಿ, ಜೂನ್ 23: ಕೊವಿಡ್ 19 ಪರೀಕ್ಷೆ ನೆಪದಲ್ಲಿ ಹ್ಯಾಕರ್‌ಗಳಿಂದ ಇ-ಮೇಲ್ ಬರಬಹುದು ಯಾವುದೇ ಕಾರಣಕ್ಕೂ ಅದರಲ್ಲಿರುವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಎಂದು ತನ್ನ ಗ್ರಾಹಕರಿಗೆ ಎಸ್‌ಬಿಐ ಎಚ್ಚರಿಕೆ ನೀಡಿದೆ.

Recommended Video

ಪೌರಕಾರ್ಮಿಕರು ನೀರು ಕೇಳಿದ್ದಕ್ಕೆ ಅಮಾನವೀಯವಾಗಿ ನಡೆದುಕೊಂಡ‌ ಮಹಿಳೆ | Oneindia Kannada

ಕೊವಿಡ್ 19 ಇ-ಮೇಲ್ ಹೆಸರಿನಲ್ಲಿ ದೇಶಾದ್ಯಂತ ಸೈಬರ್ ವಂಚನೆ ನಡೆಯಬಹುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ಸಂದೇಶ ರವಾನಿಸಿದ ಬೆನ್ನಲ್ಲೇ ಎಸ್‌ಬಿಐ ಕೂಡ ತನ್ನ ಗ್ರಾಹಕರಿಗೆ ಎಚ್ಚರಿಕೆಯಿಂದ ಇರುವಂತೆ ಹೇಳಿದೆ.

ಭಾರತೀಯರ ಸಾಮಾಜಿಕ ಜಾಲತಾಣಗಳ ಖಾತೆ ಹಾಗೂ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಖಾತೆಗಳನ್ನು ಗುರಿಯಾಗಿಸಿಕೊಂಡು ಕೆಲವರು ಈ ರೀತಿಯ ಸೈಬರ್ ವಂಚನೆಯ ಇ-ಮೇಲ್ ಅಥವಾ ಸಂದೇಶಗಳನ್ನು ಕಳುಹಿಸಬಹುದು ಎಂದು ಕೇಂದ್ರ ಸರ್ಕಾರ ಈ ಹಿಂದೆ ತಿಳಿಸಿತ್ತು.

ಲಾಕ್ ಡೌನ್ ಅವಧಿಯಲ್ಲಿ ಬೆಂಗಳೂರಲ್ಲಿ ಸೈಬರ್ ಅಪರಾಧ ಹೆಚ್ಚಳಲಾಕ್ ಡೌನ್ ಅವಧಿಯಲ್ಲಿ ಬೆಂಗಳೂರಲ್ಲಿ ಸೈಬರ್ ಅಪರಾಧ ಹೆಚ್ಚಳ

ಕೊವಿಡ್-19 ಮಹಾಮಾರಿಗೆ ಸಂಬಂಧಿಸಿದ ಸರ್ಕಾರಿ ಸಂದೇಶದ ಸೋಗಿನಲ್ಲಿ ದುಷ್ಕರ್ವಿುಗಳು ವೈಯಕ್ತಿಕ ದತ್ತಾಂಶ ಹಾಗೂ ಹಣಕಾಸಿನ ವಿವರಗಳನ್ನು ಕದಿಯುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ದುರುದ್ದೇಶಪೂರಿತ ಇ-ಮೇಲ್ ಬರುವ ಸಾಧ್ಯತೆಯಿದೆ ಎಂದು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ (ಸಿಇಆರ್​ಟಿ-ಇನ್) ಟ್ವೀಟ್ ಮಾಡಿದೆ.

ದುರುದ್ದೇಶಪೂರಿತ ಇ-ಮೇಲ್

ದುರುದ್ದೇಶಪೂರಿತ ಇ-ಮೇಲ್

ವಂಚಕರು ಸರ್ಕಾರಿ ಪ್ರಾಯೋಜಿತ ಕೊವಿಡ್-19 ಸ್ಥಳೀಯ ನಿರ್ವಹಣಾ ಅಧಿಕಾರಿಗಳ ಹೆಸರಿನಲ್ಲಿ ದುರುದ್ದೇಶಪೂರಿತ ಇ ಮೇಲ್​ಗಳನ್ನು ಕಳಿಸುವ ಸಾಧ್ಯತೆಯಿದೆ.

ಹುಸಿ ವೆಬ್‌ಸೈಟ್‌ಗಳಿಗೆ ಭೇಟಿ

ಹುಸಿ ವೆಬ್‌ಸೈಟ್‌ಗಳಿಗೆ ಭೇಟಿ

ಇ ಮೇಲ್ ಪಡೆದವರು ಹುಸಿ ವೆಬ್​ಸೈಟ್​ಗಳಿಗೆ ಭೇಟಿ ನೀಡುವ ರೀತಿಯಲ್ಲಿ ಅದನ್ನು ರೂಪಿಸಲಾಗಿರುತ್ತದೆ. ಜಾಲತಾಣಗಳಿಗೆ ಭೇಟಿ ಕೊಟ್ಟವರು ಫೈಲ್​ಗಳನ್ನು ಡೌನ್​ಲೋಡ್ ಮಾಡಿಕೊಳ್ಳುವಂತೆ ಅಥವಾ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಗಳನ್ನು ನಮೂದಿಸುವಂತೆ ಅವುಗಳ ವಿನ್ಯಾಸವಿರುತ್ತದೆ ಎಂದು ಸಿಇಆರ್​ಟಿ-ಇನ್ ಹೇಳಿದೆ.

ವಿಶ್ವಾಸಾರ್ಹ ಸಂಸ್ಥೆಗಳ ಸೋಗಿನಲ್ಲಿ ದಾಳಿ

ವಿಶ್ವಾಸಾರ್ಹ ಸಂಸ್ಥೆಗಳ ಸೋಗಿನಲ್ಲಿ ದಾಳಿ

ವಿಶ್ವಾಸಾರ್ಹ ಸಂಸ್ಥೆಗಳ ಸೋಗಿನಲ್ಲಿ ಸೈಬರ್ ದಾಳಿಗಳು ನಡೆಯುತ್ತವೆ. ಇ ಮೇಲ್ ಅಥವಾ ಟೆಕ್ಸ್ಟ್ ಸಂದೇಶಗಳನ್ನು ತೆರೆಯುವಂತೆ ಜನರನ್ನು ವಂಚಿಸುತ್ತವೆ. ಅದನ್ನು ತೆರೆದಾಗ ಮಾಲ್​ವೇರ್, ಸಿಸ್ಟಂ ಫ್ರೀಜ್ ಇನ್ಸಾಟಲ್ ಮಾಡುವ ಅಥವಾ ಸೂಕ್ಷ್ಮ ಮಾಹಿತಿ ಹೊರಗೆಡಹುವಂಥ ಲಿಂಕ್​ಗಳಿಗೆ ಒಯ್ಯುತ್ತದೆ ಎಂದು ವಿವರಿಸಿದೆ. ಸಿಇಆರ್​ಟಿ-ಇನ್ ಸೈಬರ್ ದಾಳಿ ಅಪಾಯಗಳಿಂದ ರಕ್ಷಿಸುವ ಸಂಸ್ಥೆಯಾಗಿದ್ದು, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತದೆ.

20 ಲಕ್ಷ ವಿಳಾಸ

20 ಲಕ್ಷ ವಿಳಾಸ

ಫಿಶಿಂಗ್ ವಂಚಕರ ಬಳಿ 20 ಲಕ್ಷಕ್ಕೂ ಹೆಚ್ಚು ವೈಯಕ್ತಿಕ/ನಾಗರಿಕ ಇ ಮೇಲ್ ಐಡಿಗಳಿವೆ ಎಂದು ಹೇಳಲಾಗಿದೆ. ಉಚಿತವಾಗಿ ಕೋವಿಡ್-19 ಪರೀಕ್ಷೆ ನಡೆಸಲಾಗುವುದೆಂದು ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ ಮತ್ತು ಅಹಮದಾಬಾದ್​ನ ನಿವಾಸಿಗಳಿಗೆ ಇ ಮೇಲ್ ಕಳಿಸಲು ಅವರು ಯೋಜಿಸಿದ್ದಾರೆ ಎಂದು ತಿಳಿದು ಬಂದಿದೆ. ಮೇಲ್ ಸ್ವೀಕರಿಸಿದ ಜನರು ಮಾಹಿತಿ ಒದಗಿಸುವ ಪ್ರೇರಣೆಗೆ ಒಳಗಾಗುವಂತೆ ಸಂದೇಶವಿರುತ್ತದೆ ಎಂದು ಸಿಇಆರ್​ಟಿ-ಇನ್ ವಿವರಿಸಿದೆ. ಅಸಹಜ ಚಟುವಟಿಕೆ ಅಥವಾ ಸೈಬರ್ ದಾಳಿಯ ಯಾವುದೇ ವಿಚಾರವನ್ನು ತಕ್ಷಣವೇ ಇನ್ಸಿಡೆಂಟ್​ಸಿಇಆರ್​ಟಿ-ಇನ್​ಗೆ ವರದಿ ಮಾಡುವಂತೆ ಕೋರಿದೆ.

English summary
State Bank of India has issued a warning to its 20 lakh customers about phishing attacks in major Indian cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X