ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸಿನಿಮಾ ಹಾಲಿನಲ್ಲಿ ರಾಷ್ಟ್ರಗೀತೆಗೆ ಗೌರವ ಕೇಂದ್ರದ ತೀರ್ಮಾನ'

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಅಕ್ಟೋಬರ್ 23: ಸಿನಿಮಾ ಹಾಲ್ ನಲ್ಲಿ ರಾಷ್ಟ್ರಗೀತೆಗೆ ಎದ್ದು ನಿಲ್ಲಬೇಕಾ ಬೇಡ್ವಾ ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರ ಸರಕಾರಕ್ಕೆ ಸುಪ್ರಿಂ ಕೋರ್ಟ್ ಹೇಳಿದೆ.

ರಾಷ್ಟ್ರಗೀತೆಗೆ ಅಗೌರವ 3 ವಿದ್ಯಾರ್ಥಿಗಳ ಬಂಧನರಾಷ್ಟ್ರಗೀತೆಗೆ ಅಗೌರವ 3 ವಿದ್ಯಾರ್ಥಿಗಳ ಬಂಧನ

"ನಮ್ಮ ಹೆಗಲ ಮೇಲಿಂದ ಗುಂಡು ಹಾರಿಸುವುದು ಬೇಡ. ನಿರ್ಧಾರವನ್ನು ನೀವೇ ತೆಗೆದುಕೊಳ್ಳಿ," ಎಂದು ಕೇಂದ್ರ ಸರಕಾರಕ್ಕೆ ಸುಪ್ರಿಂ ಕೋರ್ಟ್ ಸೂಚನೆ ನೀಡಿದೆ.

Standing for : Don’t shoot from our shoulders SC to Centre

ವಿಚಾರಣೆ ವೇಳೆ ನ್ಯಾ. ಡಿ.ವೈ ಚಂದ್ರಚೂಡ್, "ನಿಮ್ಮ ರಾಷ್ಟ್ರೀಯತೆಯನ್ನು ಪ್ರದರ್ಶಿಸಲು ಸಿನಿಮಾ ಹಾಲ್ ನಲ್ಲಿ ರಾಷ್ಟ್ರಗೀತೆಗೆ ಎದ್ದು ನಿಲ್ಲಬೇಕಾಗಿಲ್ಲ," ಎಂದು ಮೌಖಿಕವಾಗಿ ಹೇಳಿದ್ದಾರೆ.

ಮುಂದುವರಿದು ಹೇಳಿದ ಅವರು"ಮುಂದೆ ನೀವು ಟೀಶರ್ಟ್ ಮತ್ತು ಶಾರ್ಟ್ ಗಳನ್ನು ಸಿನಿಮಾ ಹಾಲ್ ನಲ್ಲಿ ಧರಿಸಬೇಡಿ. ಇದು ರಾಷ್ಟ್ರಗೀತೆಗೆ ಮಾಡುವ ಅವಮಾನ ಎನ್ನುತ್ತೀರಿ. ನೈತಿಕ ಪೊಲೀಸ್ ಗಿರಿ ಮಾಡುವವರು ನಿಮ್ಮನ್ನು ತಡೆಯುತ್ತಾರೆ," ಎಂದು ಹೇಳಿದ್ದಾರೆ.

ರಾಷ್ಟ್ರಗೀತೆಗೆ ಎದ್ದು ನಿಲ್ಲುವ ಆದೇಶವನ್ನು ಕೇಂದ್ರ ಸರಕಾರ ಬೆಂಬಲಿಸಿದ್ದಕ್ಕೆ ಅಸಮಧಾನ ವ್ಯಕ್ತಪಡಿಸಿರುವ ಅವರು ಜನರು ಮನರಂಜನೆಗಾಗಿ ಸಿನಿಮಾ ಮಂದಿರಕ್ಕೆ ಬರುತ್ತಾರೆ ಎಂದು ಉಲ್ಲೇಖಿಸಿದ್ದಾರೆ.

ಈ ಸಂಬಂಧ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಕೇಂದ್ರ ಸರಕಾರಕ್ಕೆ 2018ರ ಜನವರಿವರೆಗೆ ಸುಪ್ರಿಂ ಕೋರ್ಟ್ ಸಮಯ ನೀಡಿದೆ.

English summary
The Supreme Court has directed the Union Government to take a call on whether the people should stand up for the National Anthem at cinema halls. The court said that it would not let the government shoot from its shoulders and hence it is the centre which must take the call.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X