ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಟ್ನಾ ಗಾಂಧಿ ಮೈದಾನದ ಕಾಲ್ತುಳಿತದ ಚಿತ್ರಗಳು

|
Google Oneindia Kannada News

ಪಾಟ್ನಾ, ಅ.4 : ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳು, ಮುಗಿಲು ಮುಟ್ಟಿದ ಜನರ ಅಳು, ಭೀಕರ ದುರಂತಕ್ಕೆ ಸಾಕ್ಷಿಯಾದ ರಕ್ತದ ಕಲೆಗಳು, ಆಸ್ಪತ್ರೆ ಮುಂದೆ ಜನಸಾಗರ ಇವು ಪಾಟ್ನಾದ ಗಾಂಧಿ ಮೈದಾನದಲ್ಲಿ ಶುಕ್ರವಾರ ನಡೆದ ಭೀಕರ ಕಾಲ್ತುಳಿತದ ನಂತರ ಕಂಡುಬಂದ ದೃಶ್ಯಗಳು. ದಸರಾ ಆಚರಣೆ ವೇಳೆ ಗಾಂಧಿ ಮೈದಾನದಲ್ಲಿ ನಡೆದ ಕಾಲ್ತುಳಿತದಲ್ಲಿ 32 ಜನರು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚು.

ಬಿಹಾರ ರಾಜಧಾನಿ ಪಾಟ್ನಾದ ಗಾಂಧಿ ಮೈದಾನದಲ್ಲಿ ದಸರಾ ಆಚರಣೆಯ ಅಂಗವಾಗಿ ರಾವಣ, ಕುಂಭಕರ್ಣ ಹಾಗೂ ಮೇಘನಾದನ ಪ್ರತಿಕೃತಿ ದಹನ ಮಾಡಿದ ಬಳಿಕ ಶುಕ್ರವಾರ ಸಂಜೆ 6.30ರ ಸುಮಾರಿಗೆ ಜನರು ವಾಪಸ್ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ 32 ಜನರು ಸಾವನ್ನಪ್ಪಿದ್ದಾರೆ. [ಪಾಟ್ನಾದಲ್ಲಿ ಮಹಾದುರಂತ, 32 ಸಾವು]

ಜನರು ವಾಪಸ್ ತೆರಳುತ್ತಿದ್ದ ವೇಳೆ ವಿದ್ಯುತ್ ಕಂಬವೊಂದು ದೊಡ್ಡ ಸದ್ದು ಮಾಡಿ ಉರಿಯತೊಡಗಿದಾಗ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ ಎಂಬ ಸುದ್ದಿ ಹಬ್ಬಿತು. ಇದರಿಂದ ಭಯಭೀತರಾದ ಜನರು ಚೆಲ್ಲಾಪಿಲ್ಲಿಯಾಗಿ ಒಡತೊಡಗಿದರು. ಈ ಸಂದರ್ಭದಲ್ಲಿ ವಿದ್ಯುತ್ ಹೋದ ಕಾರಣ ಕತ್ತಲೆಯೂ ಆವರಿಸಿತ್ತು. ಆದ್ದರಿಂದ ಏನು ಮಾಡಬೇಕೆಂದು ತೋಚದ ಜನರು ದಿಕ್ಕಾಪಾಲಾಗಿ ಓಡತೊಡಗಿದಾಗ ಕಾಲ್ತುಳಿತ ಸಂಭವಿಸಿದೆ. ಕಾಲ್ತುಳಿತದ ಚಿತ್ರಗಳು [ಪಿಟಿಐ ಚಿತ್ರಗಳು]

ಪಾಟ್ನಾದಲ್ಲಿ ಕರಾಳ ವಿಜಯ ದಶಮಿ

ಪಾಟ್ನಾದಲ್ಲಿ ಕರಾಳ ವಿಜಯ ದಶಮಿ

ಪಾಟ್ನಾದ ಗಾಂಧಿ ಮೈದಾನದಲ್ಲಿ ಶುಕ್ರವಾರ ನಡೆದ ಭೀಕರ ಕಾಲ್ತುಳಿತದಲ್ಲಿ 32 ಜನರು ಮೃತಪಟ್ಟಿದ್ದಾರೆ. ದಸರಾ ಆಚರಣೆ ವೇಳೆ ಈ ಕಾಲ್ತುಳಿತದ ಸಂಭವಿಸಿದ್ದು, ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚು.

ಭೀಕರ ದುರಂತಕ್ಕೆ ಸಾಕ್ಷಿಯಾದ ಪಾಟ್ನಾ

ಭೀಕರ ದುರಂತಕ್ಕೆ ಸಾಕ್ಷಿಯಾದ ಪಾಟ್ನಾ

ದಸರಾ ವೇಳೆ ಪಾಟ್ನಾ ಭೀಕರ ದುರಂತಕ್ಕೆ ಸಾಕ್ಷಿಯಾಯಿತು. ಕಾಲ್ತುಳಿತ ಸಂಭವಿಸಿದ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಚಪ್ಪಲಿಗಳು ದುರಂತದ ಭೀಕರ ಕಥೆಯನ್ನು ಹೇಳುತ್ತಿದ್ದವು.

ಮುಗಿಲು ಮುಟ್ಟಿದ ಜನರ ಅಳು

ಮುಗಿಲು ಮುಟ್ಟಿದ ಜನರ ಅಳು

ದಸರಾ ಸಂಭ್ರಮಾಚರಣೆಗೆ ಬಂಧು ಕುಟುಂಬದವರನ್ನು ಕಳೆದುಕೊಂಡ ಜನರ ಅಳು ಮುಗಿಲು ಮುಟ್ಟಿತ್ತು. ಈ ಘಟನೆಯಲ್ಲಿ 32 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಘಟನೆಗೆ ಕಾರಣವೇನು?

ಘಟನೆಗೆ ಕಾರಣವೇನು?

ಜನರು ಗಾಂಧಿ ಮೈದಾನದಿಂದ ವಾಪಸ್ ತೆರಳುತ್ತಿದ್ದ ವೇಳೆ ವಿದ್ಯುತ್ ಕಂಬವೊಂದು ದೊಡ್ಡ ಸದ್ದು ಮಾಡಿ ಉರಿಯತೊಡಗಿದಾಗ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ ಎಂಬ ಸುದ್ದಿ ಹಬ್ಬಿತು. ಇದರಿಂದ ಭಯಭೀತರಾದ ಜನರು ಚೆಲ್ಲಾಪಿಲ್ಲಿಯಾಗಿ ಒಡತೊಡಗಿದರು. ಈ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿದೆ.

ಪೊಲೀಸರಿಂದ ರಕ್ಷಣಾ ಕಾರ್ಯ

ಪೊಲೀಸರಿಂದ ರಕ್ಷಣಾ ಕಾರ್ಯ

ಕಾಲ್ತುಳಿತ ಸಂಭವಿಸಿದ ಸ್ಥಳದಲ್ಲಿ ಪೊಲೀಸರು ಪರಿಹಾರ ಕಾರ್ಯಗಳನ್ನು ಕೈಗೊಂಡು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದರು. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

English summary
At least 32 people, including 20 women and 10 children, were killed and 26 others injured in Gandhi Maidan in Patna during the end of Dasara celebrations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X