ಚಿತ್ರಗಳು : 70ನೇ ಸ್ವಾತಂತ್ರ್ಯೋತ್ಸವಕ್ಕೆ ಸಿದ್ಧತೆ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 14 : 70ನೇ ಸ್ವಾತಂತ್ರ್ಯೋತ್ಸವಕ್ಕೆ ದೇಶ ಸಜ್ಜಾಗದೆ. ನವದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಸೋಮವಾರ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಸ್ವಾತಂತ್ರ್ಯೋತ್ಸವದ ಹಿನ್ನಲೆಯಲ್ಲಿ ದೇಶದ ವಿವಿಧ ನಗರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ನವದೆಹಲಿಯ ಕೆಂಪುಕೋಟೆ ಮತ್ತು ಅದರ ಸುತ್ತ-ಮುತ್ತಲಿನ ಪ್ರದೇಶಗಳು ಭದ್ರತಾ ಪಡೆಯವಶದಲ್ಲಿವೆ. ವಿವಿಧ ನಗರಗಳ ರೈಲ್ವೆ, ಬಸ್, ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.[ವಿಶೇಷ ಲೇಖನ : ಸ್ವಾತಂತ್ರ್ಯದ ಕನಸು ನನಸಾಗುತ್ತಿದೆಯಾ?]

ಕರ್ನಾಟಕ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಂಟಿಯಾಗಿ, ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಆಯೋಜಿಸುತ್ತವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗ್ಗೆ 9ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ.[ಸ್ವಾತಂತ್ರ್ಯ ದಿನಾಚರಣೆ : ಬೆಂಗಳೂರಲ್ಲಿ ಬಿಗಿ ಭದ್ರತೆ]

ಸ್ವಾತಂತ್ರ್ಯೋತ್ಸವಕ್ಕೆ ಬಿಗಿ ಭದ್ರತೆ

ಸ್ವಾತಂತ್ರ್ಯೋತ್ಸವಕ್ಕೆ ಬಿಗಿ ಭದ್ರತೆ

ಭೋಪಾಲ್‌ನಲ್ಲಿ 70ನೇ ಸ್ವಾತಂತ್ರ್ಯೋತ್ಸವಕ್ಕೆ ಸಿದ್ಧತೆ ಪೂರ್ಣಗೊಂಡಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಭಾನುವಾರ ಭದ್ರತಾ ಸಿಬ್ಬಂದಿ ಕಾರು ತಪಾಸಣೆ ಮಾಡುವಾಗ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.[ಪಿಟಿಐ ಚಿತ್ರಗಳು]

ನಮ್ಮ ಕೌಲಶ್ಯ ನಾಳೆ ನೋಡಿ

ನಮ್ಮ ಕೌಲಶ್ಯ ನಾಳೆ ನೋಡಿ

ರಾಂಚಿಯಲ್ಲಿ 70ನೇ ಸ್ವಾತಂತ್ರ್ಯೋತ್ಸವಕ್ಕೆ ಯೋಧರು ಭಾನುವಾರ ತಾಲೀಮು ನಡೆಸಿದರು. ಸ್ವಾತಂತ್ರ್ಯೋತ್ಸವದ ಕವಾಯಿತಿನಲ್ಲಿ ಯೋಧರು ತಮ್ಮ ಕೌಲಶ್ಯವನ್ನು ಪ್ರದರ್ಶಿಸಲಿದ್ದಾರೆ.

ವಿದ್ಯಾರ್ಥಿಗಳ ತಿರಂಗ ಯಾತ್ರೆ

ವಿದ್ಯಾರ್ಥಿಗಳ ತಿರಂಗ ಯಾತ್ರೆ

70ನೇ ಸ್ವಾತಂತ್ರ್ಯೋತ್ಸವದ ಮೊದಲು ಭಾನುವಾರ ಶಿಮ್ಲಾದಲ್ಲಿ ತಿರಂಗ ಯಾತ್ರೆ ನಡೆಯಿತು. ನೂರಾರು ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡಿದ್ದರು.

ಯೋಧರಿಂದ ಭದ್ರತೆ

ಯೋಧರಿಂದ ಭದ್ರತೆ

ಸ್ವಾತಂತ್ರ್ಯೋತ್ಸವದ ಹಿನ್ನಲೆಯಲ್ಲಿ ಗಲಭೆ ಪೀಡಿತ ಕಾಶ್ಮೀರದಲ್ಲಿ ಯೋಧರು ಬಂದೋಬಸ್ತ್ ಕೈಗೊಂಡಿದ್ದಾರೆ. ಭಾನುವಾರ ಶ್ರೀನಗರದಲ್ಲಿ ಕಂಡುಬಂದ ದೃಶ್ಯವಿದು.

ಕೆಂಪುಕೋಟೆಗೆ ಭದ್ರತೆ

ಕೆಂಪುಕೋಟೆಗೆ ಭದ್ರತೆ

ಸ್ವಾತಂತ್ರ್ಯೋತ್ಸವದ ಹಿನ್ನಲೆಯಲ್ಲಿ ದೆಹಲಿಯ ಕೆಂಪುಕೋಟೆಗೆ ಭದ್ರತೆ ಒದಗಿಸಲಾಗಿದೆ. ಭಾನುವಾರ ಕೆಂಪುಕೋಟೆ ಕಂಡುಬಂದಿದ್ದು ಹೀಗೆ.

ತಿರಂಗ ಬಾವುಟ ಬೇಕೆ?

ತಿರಂಗ ಬಾವುಟ ಬೇಕೆ?

ಸ್ವಾತಂತ್ರ್ಯೋತ್ಸವದ ಹಿನ್ನಲೆಯಲ್ಲಿ ಹಳೆ ದೆಹಲಿಯಲ್ಲಿ ಭಾನುವಾರ ಬಾಲಕಿಯೊಬ್ಬಳು ತ್ರಿವರ್ಣಧ್ವಜ ಮಾರಾಟಮಾಡುವಾಗ ಕಂಡು ಬಂದಿದ್ದು ಹೀಗೆ.

ರಸ್ತೆಗಳಿಗೆ ಅಲಂಕಾರ

ರಸ್ತೆಗಳಿಗೆ ಅಲಂಕಾರ

70ನೇ ಸ್ವಾತಂತ್ರ್ಯೋತ್ಸವಕ್ಕಾಗಿ ಹಳೆ ದೆಹಲಿಯ ರಸ್ತೆಗಳನ್ನು ಸಿಂಗರಿಸಲಾಗಿದೆ.

ಮಕ್ಕಳ ತ್ರಿವರ್ಣ ಧ್ವಜದ ಪರೇಡ್

ಮಕ್ಕಳ ತ್ರಿವರ್ಣ ಧ್ವಜದ ಪರೇಡ್

70ನೇ ಸ್ವಾತಂತ್ರ್ಯೋತ್ಸವದ ಮುನ್ನಾ ದಿನ ಮಹಾರಾಷ್ಟ್ರದಲ್ಲಿ ಮಕ್ಕಳು ರಾಷ್ಟ್ರಧ್ವಜ ಹಿಡಿದು ಸಾಗುವಾಗ ಕಂಡಿದ್ದು ಹೀಗೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The stage is set for the 70th Independence Day celebrations at the Red Fort New Delhi. Here are the pics.
Please Wait while comments are loading...