ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀದೇವಿಯನ್ನು ಮತ್ತೆ ಮತ್ತೆ ಸಾಯಿಸುತ್ತಿರುವ ಮಾಧ್ಯಮಕ್ಕೆ ಛೀಮಾರಿ!

|
Google Oneindia Kannada News

Recommended Video

ನಟಿ ಶ್ರೀದೇವಿ ನಿಧನದ ಹಿನ್ನೆಲೆ : ಟ್ವಿಟ್ಟರ್ ನಲ್ಲಿ ಮಾಧ್ಯಮಗಳಿಗೆ ಛೀಮಾರಿ | Oneindia Kannada

ಮುಂಬೈ, ಫೆಬ್ರವರಿ 27: ಬಾಲಿವುಡ್ ನಟಿ ಶ್ರೀದೇವಿ ಅವರು ಹೃದಯಾಘಾತದಿಂದ ಸತ್ತಿಲ್ಲ, ಬದಲಾಗಿ ಬಾತ್ ಟಬ್ಬಿನಲ್ಲಿ ಮುಳುಗಿ ಸತ್ತಿದ್ದು ಎಂಬ ಸುದ್ದಿ ಭಾರತೀಯ ಮಾಧ್ಯಮ ಲೋಕಕ್ಕೆ ಔತಣ ಕೂಟ ಏರ್ಪಡಿಸಿದಂತಾಗಿದೆ!

ಶ್ರೀದೇವಿ ಸಾವಿನ ಕುರಿತು ನಿಖರ ಮಾಹಿತಿ ಲಭ್ಯವಾಗದಿದ್ದರೂ, ಪ್ರಕರಣ ತನಿಖೆಯ ಹಂತದಲ್ಲಿದ್ದರೂ ಭಾರತೀಯ ಮಾಧ್ಯಮಗಳು ಅಧಿಕ ಪ್ರಸಂಗ ಮಾಡುತ್ತಿವೆ ಎಂದು ಸೆಲೆಬ್ರಿಟಿಗಳು ದೂರುತ್ತಿದ್ದಾರೆ. ಆಕೆ ಕಳೆದ ನಲವತ್ತೈದು ವರ್ಷಗಳಿಂದ ಐದು ಭಾಷೆಗಳಲ್ಲಿ ನಟಿಸಿದ 245 ಚಿತ್ರಗಳ ಬಗ್ಗೆ ಮಾತನಾಡುವ ಬದಲು ಆಕೆಯ ಸಾವಿನ್ನು ವಿವಾದವನ್ನಾಗಿ ಮಾರ್ಪಡಿಸಲು ಮಾಧ್ಯಮಗಳು ಉತ್ಸುಕತೆ ತೋರುತ್ತಿರುವುದು ಸರಿಯೇ ಎಂದು ಸಾಮಾನ್ಯ ಜನರೂ ಪ್ರಶ್ನಿಸುತ್ತಿದ್ದಾರೆ. ಶ್ರೀದೇವಿಯವರ ಸಾವಿನ ಬಗ್ಗೆ ಚರ್ಚಿಸುತ್ತಾ, ಮಾಧ್ಯಮಗಳು ತಮ್ಮ ಘನತೆ ಕಳೆದುಕೊಂಡಿವೆ. ಅಗಲಿದ ಶ್ರೀದೇವಿಯವರನ್ನು ಈ ಮೂಲಕ ಮಾಧ್ಯಮಗಳು ಮತ್ತೆ ಸಾಯಿಸಿವೆ ಎಂದು ಕೆಲವರು ವಿಷಾದ ವ್ಯಕ್ತಪಡಿಸಿದ್ದಾರೆ.

ಶ್ರೀದೇವಿಯನ್ನು 'ಪಾರ್ಥಿವ ಶರೀರ' ಎಂದಿದ್ದಕ್ಕೆ ಹರಿಹಾಯ್ದ ರಿಷಿ ಕಪೂರ್!ಶ್ರೀದೇವಿಯನ್ನು 'ಪಾರ್ಥಿವ ಶರೀರ' ಎಂದಿದ್ದಕ್ಕೆ ಹರಿಹಾಯ್ದ ರಿಷಿ ಕಪೂರ್!

ಶ್ರೀದೇವಿ ಸಾವಿನ ಕುರಿತು ಕಳೆದ ರಾತ್ರಿಯಿಂದ ತಜ್ಞ ವೈದ್ಯರ ರೀತಿಯಲ್ಲಿ, ನ್ಯಾಯಾಧೀಶರ ರೀತಿಯಲ್ಲಿ ವರ್ತಿಸುತ್ತಿರುವ ಮಾಧ್ಯಮವನ್ನು ಟ್ವಿಟ್ಟರ್ ನಲ್ಲಿ ತರಾಟೆಗೆ ತೆಗೆದುಕೊಳ್ಳಲಾಗಿದೆ.

ಮೊದಲು ಮಾಧ್ಯಮಗಳು ತನಿಖೆಗೊಳಪಡಲಿ!

ಆಕೆ ಕಳೆದ ನಲವತ್ತೈದು ವರ್ಷಗಳಿಂದ ಐದು ಭಾಷೆಗಳಲ್ಲಿ ನಟಿಸಿದ 245 ಚಿತ್ರಗಳನ್ನು ನೀವು ಮರೆತಿದ್ದೀರಿ. ಆಕೆಯ ವೈಯಕ್ತಿಕ ಕೊರಗನ್ನು ನೀವು ಮರೆತಿದ್ದೀರಿ. ಆದರೆ ಆಕೆಯ ಸಾವನ್ನು ಲೇವಡಿ ಮಾಡುವ, ವರದಿ ಬರುವ ಮೊದಲೇ ನೀವೇ ಎಲ್ಲವನ್ನೂ ಬಲ್ಲವರಂತೆ ಕೂಗಾಡುತ್ತಿದ್ದೀರಿ. ಸುದ್ದಿಯನ್ನು ಸಾಯಿಸುತ್ತಿರುವ ನಿಮ್ಮ ಬಗ್ಗೆ ಮೊದಲು ತನಿಖೆ ನಡೆಯಬೇಕು ಎಂದು ಕಿಡಿಕಾರಿದ್ದಾರೆ ಮಾಧವನ್ ನಾರಾಯಣ್.

Array

ಕ್ಷಮಿಸಿ ಶ್ರೀದೇವಿ ಜೀ!

ಒಬ್ಬ ಸಾವಿಗೀಡಾದ ಒನಬ್ಬ ಹೆಣ್ಣು, ಒಬ್ಬ ಮಗಳು, ಪತ್ನಿ, ಎಲ್ಲಕ್ಕೀಮತ ಹೆಚ್ಚಾಗಿ ಒಬ್ಬ ತಾಯಿಯ ಬಗ್ಗೆ ಚಾನೆಲ್ ಗಳು ಈ ರೀತಿಯೆಲ್ಲ ವರದಿ ಮಾಡುತ್ತವೆ ಎಂದರೆ ನಿಜಕ್ಕೂ ಬೇಸರವಾಗುತ್ತದೆ. ಆಕೆ ಒಬ್ಬ ನಟಿ. ಜನರಿಗೂ ಆಕೆಯ ಸಾವಿನ ಕುರಿತು ಸತ್ಯ ತಿಳಿಬೇಕು ಎಂಬುದು ಸತ್ಯ. ಆದರೆ ಹೀಗಲ್ಲ! ಕ್ಷಮಿಸಿ ಶ್ರೀದೇವಿ ಜೀ, ನೀವು ಅಗಲಿದ ನಂತರವೂ ನಿಮ್ಮ ಆತ್ಮಕ್ಕೆ ಶಾಂತಿ ನೀಡಲು ಸಾಧ್ಯವಾಗುತ್ತಿಲ್ಲ! ಎಂದು ಭಾವುಕರಾಗಿ ಬರೆದಿದ್ದಾರೆ ರೋಹಿತ್ ರಾಯ್.

ಆತ್ಮವನ್ನು ವಿಭಜಿಸುವ ಕೆಲಸ ನಿಲ್ಲಿಸಿ!

ದಯವಿಟ್ಟು ಮಡಿದವರ ಆತ್ಮವನ್ನು ವಿಭಜಿಸುವ ಇಂಥ ಕೆಲಸ ನಿಲ್ಲಿಸಿ. ದಯವಿಟ್ಟು ಅರ್ಥಮಾಡಿಕೊಳ್ಳಿ, ತಮ್ಮ ತಾಯಿಯನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಅಲ್ಲಿ. ತನ್ನ ಪತ್ನಿಯನ್ನು ಅಕ್ಕರೆಯಿಂದ ಪ್ರೀತಿಸುತ್ತಿದ್ದ ಪತಿ ಇದ್ದಾರೆ, ಮಗಳನ್ನು ಪ್ರೀತಿಸುವ ತಂದೆ-ತಾಯಿ ಇದ್ದಾರೆ. ಶ್ರೀದೇವಿ ಅವರ ಸಾವಿನ ಹಿಂದೆ ಇಷ್ಟೆಲ್ಲ ಜನರ ನೋವಿದೆ. ಆ ಕುಟುಂಬಕ್ಕೆ ನಿಮ್ಮಿಂದ ಮತ್ತಷ್ಟು ನೋವು ನೀಡಬೇಡಿ ಎಂದು ಮನವಿ ಮಾಡಿದ್ದಾರೆ ನಟಿ ಖುಷ್ಭೂ.

Array

ದಯವಿಟ್ಟು ಆ ಮಕ್ಕಳಿಗೆ ನೆಮ್ಮದಿ ನೀಡಿ!

ಇಬ್ಬರು ಹೆಣ್ಣು ಮಕ್ಕಳು ತಮ್ಮ ತಾಯಿಯನ್ನು ಕಳೆದುಕೊಂದಿದ್ದಾರೆ. ದಯವಿಟ್ಟು ಈ ವಿಷಯವನ್ನು ಸೆನ್ಸೇಶನಲ್ ಮಾದುವುದನ್ನು ಬಿಡಿ. ನಿಮ್ಮ ಟಿಆರ್ ಪಿಗಾಗಿ ಮತ್ತೊಬ್ಬರ ವೈಯಕ್ತಿಕ ಬದುಕನ್ನು ಘಾಸಿಗೊಳಿಸಬೇಡಿ ಎಂದಿದ್ದಾರೆ ಸಾಧ್ವಿ ಖೋಸ್ಲಾ.

ಶ್ರೀದೇವಿ ಸತ್ತಿದ್ದು ಹೇಗೆ? ಇಲ್ಲಿದೆ ಆಘಾತಕಾರಿ ಸುದ್ದಿ!ಶ್ರೀದೇವಿ ಸತ್ತಿದ್ದು ಹೇಗೆ? ಇಲ್ಲಿದೆ ಆಘಾತಕಾರಿ ಸುದ್ದಿ!

ಅವರಿಗೆ ಗೌರವ ಕೊಡಿ

ಶ್ರಿದೇವಿ ಅವರಿಗೆ ಗೌರವ ನೀಡಿ. ಯಾವ ಸಾಕ್ಷ್ಯವೂ ಇಲ್ಲದೆ ನೀವೇ ಒಂದು ಅಂತ್ಯಕ್ಕೆ ಬರಬೇಡಿ. ಈ ನೋವಿನ ಸಮಯವನ್ನು, ಕೊರಗನ್ನು ನಿಮ್ಮ ಉಪಯೋಗಕ್ಕಾಗಿ ಬಳಸಿಕೊಂದು ಸೆನ್ಸೇಶನಲ್ ಮಾಡಬೇಡಿ. ನಿಮಗೆ ಒಂದಷ್ಟು ಹೊಣೆ ಇದೆ, ಬದ್ಧತೆ ಇದೆ. ಅದನ್ನು ಮರೆಯಬೇಡಿ. ಆಕೆಯ ಆತ್ಮ ಶಾಂತಿ ಪಡೆಯಲು ಸಮಯ ನೀಡಿ ಎಂದಿದ್ದಾರೆ ಶ್ರೀದೇವಿ ಶ್ರೀಧರ್.

ಮಾಧ್ಯಮ ಸತ್ತಿದೆ!

ನಮ್ಮ ಮಾಧ್ಯಮ ಯಾವ ಮಟ್ಟಕ್ಕಾದರೂ ಇಳಿಯುತ್ತವೆ ಎಂಬುದಕ್ಕೆ ಇದೇ ಸಾಕ್ಷಿ. ಶ್ರೀದೇವಿ ಸಾವಿನ ಸುದ್ದಿಯನ್ನು ಪ್ರಸಾರ ಮಾಡುತ್ತಿರುವ ಮಾಧ್ಯಮಗಳೇ ಸತ್ತಿವೆ ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ ಮೇಘನಾದ್.

ಶ್ರಿದೇವಿ ಮತ್ತೆ ಸತ್ತಿದ್ದಾರೆ!

ಒಬ್ಬ ವ್ಯಕ್ತಿಯನ್ನು ಎರಡು ಬಾರಿ ಸಾಯಿಸುವುದಕ್ಕೆ ಸಾಧ್ಯವೇ? ಶ್ರೀದೇವಿ ವಿಷಯದಲ್ಲಿ ಭಾರತೀಯ ಮಾಧ್ಯಮಗಳು ಅದನ್ನೇ ಮಾಡುತ್ತಿವೆ! ವರದಿ ಮಾಡಿ ವಿಕೃತ ಆನಂದ ಪಡುವ ಮಾಧ್ಯಮಗಳ ಬಗ್ಗೆ ಅಸಹ್ಯವಾಗುತ್ತಿದೆ ಎಂದಿದ್ದಾರೆ ಹರಿಣಿ ಕಲಾಮೂರ್ ಎಂಬುವವರು.

ಶ್ರೀದೇವಿ ನಿಗೂಢ ಸಾವು: ವಿವಾದ ಹುಟ್ಟಿಸಿದ ತಸ್ಲಿಮಾ ನಸ್ರಿನ್ ಟ್ವೀಟ್ಶ್ರೀದೇವಿ ನಿಗೂಢ ಸಾವು: ವಿವಾದ ಹುಟ್ಟಿಸಿದ ತಸ್ಲಿಮಾ ನಸ್ರಿನ್ ಟ್ವೀಟ್

ಶ್ರೀದೇವಿ ಸತ್ತಿದ್ದು ಹೇಗೆ? ಇಲ್ಲಿದೆ ಆಘಾತಕಾರಿ ಸುದ್ದಿ!ಶ್ರೀದೇವಿ ಸತ್ತಿದ್ದು ಹೇಗೆ? ಇಲ್ಲಿದೆ ಆಘಾತಕಾರಿ ಸುದ್ದಿ!

English summary
Indian media are so curious about Sridevi's death mystery. Many celebrities and common people are blaming journalists for their unhealthy debates over Sridevi's death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X