ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ: ಟಿಟಿಡಿ ಆಸ್ಪತ್ರೆಯಲ್ಲಿ ಬಡವರಿಗೂ ಚಿಕಿತ್ಸೆ

By Srinath
|
Google Oneindia Kannada News

ರುಪತಿ, ಫೆ. 24- ಶ್ರೀ ವೆಂಕಟೇಶ್ವರ ವೈದ್ಯಕೀಯ ವಿಜ್ಞಾನಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ - ಇದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಸಂಸ್ಥೆಯ ವತಿಯಿಂದ ನಡೆಸುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ. ಈ ಅತ್ಯಾಧುನಿಕ ಆಸ್ಪತ್ರೆಯಲ್ಲಿ ಅಗತ್ಯಬಿದ್ದರೆ ಬಡ ರೋಗಿಗಳಿಗೂ ಉಚಿತ ಚಿಕಿತ್ಸೆ ನೀಡುವ ನಿರ್ಧಾರವನ್ನು ಕಳೆದ ಶನಿವಾರ ಕೈಗೊಳ್ಳಲಾಗಿದೆ.

TTD ಪೋಷಿತ ಈ ಆಸ್ಪತ್ರೆಯಲ್ಲಿ Sri Balaji Arogyavaraprasadini Scheme ಅನುಸಾರ ಬಿಳಿ ಪಡಿತರ ಚೀಟಿ (ಬಿಪಿಎಲ್) ಹೊಂದಿದ ಆಂಧ್ರಪ್ರದೇಶ ರಾಜ್ಯದ ರೋಗಿಗಳಿಗೆ ಎಂಥದ್ದೇ ಕಾಯಿಲೆಗೂ ಉಚಿತವಾಗಿ ಚಿಕಿತ್ಸೆ ಒದಗಿಸಲು 2014-15ರ ವಾರ್ಷಿಕ ಬಜೆಟ್‌ ನಲ್ಲಿ ಹಸಿರು ನಿಶಾನೆ ತೋರಿಸಲಾಗಿದೆ. ಈ ಉಚಿತ ಚಿಕಿತ್ಸೆಗಳಿಂದಾಗಿ SVIMSಗೆ ತಗಲುಇವ ವೆಚ್ಚವನ್ನು ತಿರುಮಲ ತಿರುಪತಿ ದೇವಸ್ಥಾನಂ ಸಮಿತಿ ಭರಿಸಲಿದೆ ಎಂದು TTD ಅಧ್ಯಕ್ಷ ಕೆ ಬಾಪಿರಾಜು ಹೇಳಿದ್ದಾರೆ.

TTD- Sri Venkateswara Institute of Medical Sciences health services to poor and needy
ಕಳೆದ ಶನಿವಾರ ಟಿಟಿಡಿಯ ವಾರ್ಷಿಕ ಬಜೆಟ್‌ ಗೆ ಅನುಮೋದನೆ ನೀಡಲಾಗಿದೆ. ತಿರುಪತಿ ದೇವಸ್ಥಾನದ 2014-15ನೇ ಸಾಲಿನ ಆಯವ್ಯಯ ಪತ್ರವನ್ನು ಮಂಡಿಸಿದ ಸಮಿತಿಯು ಇಂತಹ ಹಲವು ಜನಪರ ಯೋಜನೆಗಳಿಗಾಗಿ ವಾರ್ಷಿಕ ವೆಚ್ಚವನ್ನು 2400ಕೋಟಿ ರೂ. ಬಜೆಟ್ ನಿಗದಿಪಡಿಸಿದೆ.

ಆದಾಯದ ಮೂಲಗಳು ಹೀಗಿವೆ: ತಿಮ್ಮಪ್ಪನ ಹುಂಡಿಯಿಂದ 900 ಕೋಟಿ ರೂ. ವಿವಿಧ ಬ್ಯಾಂಕುಗಳಲ್ಲಿನ ಠೇವಣಿಗಳ ಮೇಲಿನ ಬಡ್ಡಿ 655 ಕೋಟಿ, ಭಕ್ತರು ಕೇಶ ಮುಂಡನ ಮಾಡಿಸಿಕೊಂಡ ಕೂದಲು ಮಾರಾಟದಿಂದ 190 ಕೋಟಿ, ಪ್ರಸಾದ ಮಾರಾಟದಿಂದ 190 ಕೋಟಿ, ದೇವಸ್ಥಾನದ ಅಂಗಡಿ, ಮಳಿಗೆಗಳ ಬಾಡಿಗೆ 108 ಕೋಟಿ ರೂ. ಆದಾಯ ಬರಲಿದೆ. ಇದಲ್ಲದೆ ಇತರ ಮೂಲಗಳಿಂದಲೂ ಹೆಚ್ಚಿನ ಆದಾಯವನ್ನು ನಿರೀಕ್ಷಿಸಲಾಗಿದೆ.

ಈ ಆದಾಯವನ್ನು ಶಿಕ್ಷಣಕ್ಕೆ 88 ಕೋಟಿ, ಇಂಜಿನಿಯರಿಂಗ್ ವಿಭಾಗಕ್ಕೆ 150 ಕೋಟಿ, ಆರೋಗ್ಯ ಸ್ವಚ್ಚತೆಗೆ 92 ಕೋಟಿ, ಧರ್ಮ ಪ್ರಚಾರಕ್ಕಾಗಿ 109 ಕೋಟಿ ರೂ. ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಸಾಕಷ್ಟು ವೆಚ್ಚ ಮಾಡಲಾಗಿದೆ. ಒಟ್ಟಾರೆ ದೇಶದ ಶ್ರೀಮಂತ ದೇವರು ತಿಮ್ಮಪ್ಪನ ದೇವಸ್ಥಾನದ ವಾರ್ಷಿಕ ವೆಚ್ಚ ಸುಮಾರು 2,500 ಕೋಟಿ ರೂ. ಗೆ ತಲುಪಲಿದೆ.

ಪದ್ಮಾವತಿ ದೇವಿ ದೇವಸ್ಥಾನದಲ್ಲಿನ ಬ್ರಹ್ಮೋತ್ಸವಕ್ಕೆ ಬಳಸುವ 6 ತೇರುಗಳಿಗೆ ಬಂಗಾರದ ಕವಚ ಹೊದಿಸಲು ಸುಮಾರು 9 ಕೋಟಿ ರೂ. ನೀಡಲಾಗಿದೆ. ದೇವಸ್ಥಾನಗಳ ಭದ್ರತಾ ವೆಚ್ಚವನ್ನು 52 ಕೋಟಿ ರೂ. ಗಳಿಗೆ ಹೆಚ್ಚಿಸಲಾಗಿದೆ.

English summary
Sri Venkateswara Institute of Medical Sciences health services to poor and needy. The Tirumala Tirupati Devasthanams (TTD) has decided to give free medical treatment to poor patients even without the white card in case of chronic diseases. For this, the SVIMS is likely to incur an expenditure of 5-6 crore every year and the trust board has assured it to allot the amount every year. It told the SVIMS authorities to ensure quality service and medical assistance to patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X