ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ವಿವಿಯಿಂದ ರವಿಶಂಕರ್ ಗುರೂಜಿಗೆ 'ಜಾಗತಿಕ ಪೌರತ್ವ ರಾಯಭಾರಿ' ಗೌರವ

|
Google Oneindia Kannada News

ಬೆಂಗಳೂರು, ಫೆಬ್ರವರಿ 9: ಭಾರತದ ಆಧ್ಯಾತ್ಮಿಕ ಗುರು ರವಿಶಂಕರ್ ಗುರೂಜಿ ಅವರನ್ನು ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದು ಜಾಗತಿಕ ಪೌರತ್ವ ರಾಯಭಾರಿಯನ್ನಾಗಿ ಗುರುತಿಸಿದೆ. ಶಾಂತಿ ಕಾರ್ಯ, ಮಾನವೀಯ ಚಟುವಟಿಕೆಗಳು, ಅಧ್ಯಾತ್ಮ ಶಿಕ್ಷಣ ಹಾಗೂ ಜಾಗತಿಕ ಅಂತರ್ ಧರ್ಮೀಯ ನಾಯಕರಾಗಿ ರವಿಶಂಕರ್ ಅವರ ಕೊಡುಗೆಗೆ ಈ ಗೌರವ ನೀಡಿರುವುದಾಗಿ ಅದು ತಿಳಿಸಿದೆ.

ಆಧ್ಯಾತ್ಮಿಕತೆ, ಮಾತುಕತ ಮತ್ತು ಸೇವೆಗಳ ನಾರ್ತ್‌ಈಸ್ಟರ್ನ್ ಯುನಿವರ್ಸಿಟಿ ಸೆಂಟರ್, ತನ್ನ ಉದ್ಘಾಟನಾ ಜಾಗತಿಕ ಪೌರತ್ವ ರಾಯಭಾರಿಯನ್ನಾಗಿ ರವಿಶಂಕರ್ ಅವರನ್ನು ಕಳೆದ ವಾರ ಗೌರವಿಸಿದೆ ಎಂದು ಸೋಮವಾರ ಪ್ರಕಟಿಸಿರುವ ಹೇಳಿಕೆ ತಿಳಿಸಿದೆ.

ರಾಷ್ಟ್ರೀಯ ತೋಟಗಾರಿಕೆ ಮೇಳ; ಕೋವಿಡ್ ತಡೆದಿದ್ದು ನಮ್ಮ ಅಹಾರ ಪದ್ದತಿ: ರವಿಶಂಕರ್ ಗುರೂಜಿ!ರಾಷ್ಟ್ರೀಯ ತೋಟಗಾರಿಕೆ ಮೇಳ; ಕೋವಿಡ್ ತಡೆದಿದ್ದು ನಮ್ಮ ಅಹಾರ ಪದ್ದತಿ: ರವಿಶಂಕರ್ ಗುರೂಜಿ!

'ಶ್ರೀ ಶ್ರೀ ಅವರಿಗೆ ನಾವು ಕೃತಜ್ಞರಾಗಿದ್ದೇವೆ. ನಮ್ಮಲ್ಲಿನ ಅತ್ಯುತ್ತಮ ಮಾನವೀಯ ಮೌಲ್ಯಗಳನ್ನು ಹೊರತೆಗೆದ ಮಾನವೀಯ ವ್ಯಕ್ತಿಯಿಂದ ಕಲಿಯುವ ಮತ್ತು ಅವರೊಂದಿಗೆ ಸಂವಾದಿಸುವುದಕ್ಕಿಂತಲೂ ನಮ್ಮ ಜಾಗತಿಕ ಪೌರತ್ವ ರಾಯಭಾರಿ ಹೆಗ್ಗುರುತನ್ನು ಆರಂಭಿಸುವುದಕ್ಕೆ ಇದಕ್ಕಿಂತ ಉತ್ತಮ ಮಾರ್ಗ ಬೇರೆ ಇಲ್ಲ ಎಂದು ನಾವು ಭಾವಿಸಿದ್ದೇವೆ' ಎಂದು ವಿಶ್ವವಿದ್ಯಾಲಯದ ಕಾರ್ಯಕಾರಿ ನಿರ್ದೇಶಕ ಮತ್ತು ಮುಖ್ಯ ಆಧ್ಯಾತ್ಮಿಕ ಸಲಹೆಗಾರ ಅಲೆಕ್ಸಾಂಡರ್ ಲೆವೆರಿಂಗ್ ಕೆರ್ನ್ ಹೇಳಿದ್ದಾರೆ.

Sri Sri Ravi Shankar Recognised As Global Citizenship Ambassador By American University

ಪ್ರಯೋಗಾತ್ಮಕ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ವಿಶ್ವವಿದ್ಯಾಲಯವು ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಜಗತ್ತಿನಾದ್ಯಂತ ಶಾಖೆಗಳನ್ನು ಹೊಂದಿದ್ದು, ನೂರಕ್ಕೂ ಅಧಿಕ ದೇಶಗಳ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಅಮೆರಿಕದ ಟಾಪ್ 50 ವಿವಿಗಳಲ್ಲಿ ಒಂದೆನಿಸಿದೆ.

English summary
Sri Sri Ravi Shankar recognised as Global Citizenship Ambassador by American university.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X