ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರ ಸಂಪುಟ: ಅಯೋಧ್ಯೆ ಸೇರಿದಂತೆ ವಿವಿಧೆಡೆ ರಾಮನವಮಿ

ತಮಿಳುನಾಡಿನ ರಾಮೇಶ್ವರಂ ಸೇರಿದಂತೆ, ದೇಶದ ಮೂಲೆಮೂಲೆಯಲ್ಲಿರುವ ರಾಮನ ದೇಗುಲಗಳಲ್ಲಿ ವಿವಿಧ ರೀತಿಯ ಪೂಜೆ, ಪುನಸ್ಕಾರ, ಅಲಂಕಾರಗಳು ಭಕ್ತ ಸಮೂಹಕ್ಕೆ ತೃಪ್ತಿ ನೀಡಿದವು.

|
Google Oneindia Kannada News

ಶ್ರೀರಾಮ ನವಮಿಯನ್ನು ಏಪ್ರಿಲ್ 5ರಂದು ಭಾರತದ ವಿವಿಧೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿಯೂ ಈ ಹಬ್ಬದ ಸಡಗರ ಜೋರಾಗಿತ್ತು.

ತಮಿಳುನಾಡಿನ ರಾಮೇಶ್ವರಂ ಸೇರಿದಂತೆ, ದೇಶದ ಮೂಲೆಮೂಲೆಯಲ್ಲಿರುವ ರಾಮನ ದೇಗುಲಗಳಲ್ಲಿ ವಿವಿಧ ರೀತಿಯ ಪೂಜೆ, ಪುನಸ್ಕಾರ, ಅಲಂಕಾರಗಳು ಭಕ್ತ ಸಮೂಹಕ್ಕೆ ತೃಪ್ತಿ ನೀಡಿದವು.

ರಾಮನ ದೇವಾಲಯಗಳಷ್ಟೇ ಅಲ್ಲ, ವಿಷ್ಣುವಿಗೆ ಸಂಬಂಧಿಸಿದ ಎಲ್ಲಾ ದೇಗುಲಗಳಲ್ಲಿ, ಪುಣ್ಯ ಕ್ಷೇತ್ರಗಳಲ್ಲಿ ರಾಮ ನವಮಿಯನ್ನು ಆಚರಿಸಲಾಯಿತು. ರಾಮಭಕ್ತನಾದ ಹನುಮಂತನ ದೇಗುಲಗಳಲ್ಲಿಯೂ ರಾಮ ನವಮಿಯನ್ನು ಅತ್ಯಂತ ಧಾರ್ಮಿಕವಾಗಿ ಆಚರಿಸಲಾಯಿತು. ಇವುಗಳಲ್ಲಿ ತಿರುಪತಿಯ ವೆಂಕಟೇಶ್ವರ ಸ್ವಾಮಿ, ಮೇಲುಕೋಟೆಯ ಚೆಲುವ ನಾರಾಯಣ ಸ್ವಾಮಿ ದೇಗುಲಗಳು ಪ್ರಮುಖವಾದವು.

ಇಷ್ಟೇ ಅಲ್ಲದೆ, ಕೆಲವಾರು ನದೀ ಸಂಗಮಗಳಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿ ಧನ್ಯತಾ ಭಾವ ಪಡೆದರು.

ಈ ಸಂದರ್ಭದಲ್ಲಿ ಅಯೋಧ್ಯೆ ಹಾಗೂ ಮುಂತಾದೆಡೆ ಏಪ್ರಿಲ್ 5ರ ಮುಂಜಾನೆ ನಡೆದ ರಾಮನವಮಿ ಪೂಜೆಗಳ, ಭಕ್ತ ಸಮೂಹದ ಕೆಲ ಫೋಟೋಗಳು ಇಲ್ಲಿ ನಿಮಗಾಗಿ.

ಬಿಗಿ ಭದ್ರತೆ

ಬಿಗಿ ಭದ್ರತೆ

ಅಯೋಧ್ಯೆಯಲ್ಲಿರುವ ಶ್ರೀ ರಾಮ ದೇಗುಲದಲ್ಲಿ ಅಪಾರ ಭಕ್ತ ಸಮೂಹ ದೇಶದ ನಾನಾ ಭಾಗಗಳಿಂದ ಆಗಮಿಸಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮಂದಿರದಲ್ಲಿ ಭಾರೀ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

ಧನ್ಯತಾ ಭಾವ

ಧನ್ಯತಾ ಭಾವ

ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದಲ್ಲಿರುವ ಮುದ್ದು ಮೊಗದ ಶ್ರೀರಾಮ. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರ ಆಯಾಸವನ್ನು ಕ್ಷಣಮಾತ್ರದಲ್ಲೇ ಮಾಯವಾಗಿಸುವ ಭಾವ ಈ ಮೂರ್ತಿಯದ್ದು.

ಮೆರವಣಿಗೆ

ಮೆರವಣಿಗೆ

ಶ್ರೀರಾಮನವಮಿ ಪ್ರಯುಕ್ತ ತಮಿಳುನಾಡಿನ ರಾಮೇಶ್ವರಂನಲ್ಲಿರುವ ರಾಮ ದೇಗುಲದ ಮುಂದೆ ಆರಂಭಗೊಂಡ ಉತ್ಸವ. ಈ ಉತ್ಸವದಲ್ಲಿ ಪಾಲ್ಗೊಂಡಿದ್ದ ನಾನಾ ಭಕ್ತರು ಶ್ರೀರಾಮ ಭಜನೆಗಳನ್ನು ಹೇಳುತ್ತಾ ಸಾಗಿದ್ದು ಆಕರ್ಷಣೀಯವಾಗಿತ್ತು.

ವಾರಣಾಸಿಗೆ ರಾಮ ಭಕ್ತರು

ವಾರಣಾಸಿಗೆ ರಾಮ ಭಕ್ತರು

ಶ್ರೀರಾಮನವಮಿ ಪ್ರಯುಕ್ತ ವಾರಣಾಸಿಯಲ್ಲಿನ ಗಂಗಾ ನದಿಯಲ್ಲಿ ಭಕ್ತ ಜನರು ಪವಿತ್ರ ಸ್ನಾನ ಮಾಡಿದರು. ಪೂಜೆಯ ನಂತರ ಕ್ಷೇತ್ರದಲ್ಲಿರುವ ಶ್ರೀರಾಮ ಸೇರಿದಂತೆ ನಾನಾ ದೇಗುಲಗಳಿಗೆ ತೆರಳಿ ಪೂಜೆ ಸಲ್ಲಿಸಿದರು.

ಸ್ನಾನ, ಪೂಜೆ

ಸ್ನಾನ, ಪೂಜೆ

ಶ್ರೀರಾಮನವಮಿ ಪ್ರಯುಕ್ತ ವಾರಣಾಸಿಗೆ ಪವಿತ್ರ ಸ್ನಾನಕ್ಕಾಗಿ ಆಗಮಿಸಿದ ಭಕ್ತ ಸಮೂಹ. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಗಂಗೆಯಲ್ಲಿ ಮಿಂದು ಧನ್ಯತಾ ಭಾವ ಪಡೆದರು.

English summary
Sri Ramanavami celebrated on April 5th, 2017. In Ayodhya, Sri Rama's birth place, thousands of people participated in pooja and other celebrations. Not only in Sri Rama temples, the various worshiping places which are related to Sri Rama namely Hanuman, Incarnations of Lord Vishnu also celebrated Sri Ramanavami.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X