ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಮೊದಲು ಎಂಬ ನೀತಿಯ ಅಳವಡಿಕೆ: ಶ್ರೀಲಂಕಾ ಹೇಳಿಕೆ

|
Google Oneindia Kannada News

ನವದೆಹಲಿ, ಆಗಸ್ಟ್ 26: ಚೀನಾದೊಂದಿಗೆ ಮಾಡಿಕೊಳ್ಳಲಾದ ಬಂದರು ಒಪ್ಪಂದ ಒಂದು ಪ್ರಮಾದ. ನಾವಿನ್ನು ಭಾರತ ಮೊದಲು ಎಂಬ ನೀತಿಯನ್ನು ಅಳವಡಿಸಿಕೊಳ್ಳುತ್ತೇವೆ ಎಂದು ಶ್ರೀಲಂಕಾ ಹೇಳಿದೆ.

ಭಾರತವನ್ನು ಮೊದಲು ಸಂಪರ್ಕಿಸುವ ತನ್ನ ನೂತನ ವಿದೇಶಾಂಗ ನೀತಿಯನ್ನು ಅಳವಡಿಸಿಕೊಳ್ಳಲಿದ್ದು, ಭಾರತದ ಭದ್ರತಾ ಹಿತಾಸಕ್ತಿ ಕಾರ್ಯತಂತ್ರಗಳನ್ನು ರಕ್ಷಿಸಲು ಆದ್ಯತೆ ನೀಡುವುದಾಗಿ ಶ್ರೀಲಂಕಾದ ವಿದೇಶಾಂಗ ಸಚಿವ ಜಯನಾಥ್ ಕೊಲಂಬೊಗೆ ಹೇಳಿದರು.

 ಸೋದರರ ಸರ್ಕಾರ: ಅಣ್ಣ ಮಹೀಂದಾ ಪ್ರಧಾನಿ, ತಮ್ಮ ರಾಷ್ಟ್ರಪತಿ ಸೋದರರ ಸರ್ಕಾರ: ಅಣ್ಣ ಮಹೀಂದಾ ಪ್ರಧಾನಿ, ತಮ್ಮ ರಾಷ್ಟ್ರಪತಿ

ಬುಧವಾರ 'ಡೈಲಿ ಮಿರರ್‌'ನಲ್ಲಿ ಪ್ರಕಟವಾದ ಸಂದರ್ಶನದಲ್ಲಿ ಜಯನಾಥ್, ಶ್ರೀಲಂಕಾದಲ್ಲಿ ಹೆಚ್ಚುತ್ತಿರುವ ಚೀನಾ ಪ್ರಭಾವದ ಆತಂಕವನ್ನು ತಗ್ಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ತನ್ನ ನೂತನ ಪ್ರಾದೇಶಿಕ ವಿದೇಶಾಂಗ ನೀತಿಯ ಕಾರ್ಯಕ್ರಮದಡಿ ಭಾರತ ಮೊದಲು ಎಂಬ ನಿಲುವನ್ನು ಅಳವಡಿಸಿಕೊಳ್ಳಲಿದೆ ಎಂದು ಹೇಳಿದರು.

Sri Lanka Will Adopt India First Approach As New Foreign Policy: Jayanath Colombage

ಇದರ ಅರ್ಥ ಭಾರತದ ಆಯಕಟ್ಟಿನ ಭದ್ರತಾ ಹಿತಾಸಕ್ತಿಗಳಿಗೆ ಹಾನಿಮಾಡುವಂತಹ ಯಾವುದೇ ಚಟುವಟಿಕೆಗಳನ್ನು ಶ್ರೀಲಂಕಾ ಮಾಡುವುದಿಲ್ಲ ಎಂದು ಭರವಸೆ ನೀಡಿದರು.

ಜಯನಾಥ್ ಅವರು 2012-14ರ ಅವಧಿಯಲ್ಲಿ ಶ್ರೀಲಂಕಾ ನೌಕಾಪಡೆಯ ಮುಖ್ಯಸ್ಥರಾಗಿದ್ದರು. ಅಧ್ಯಕ್ಷ ಗೊಟಬೊಯ ರಾಜಪಕ್ಸ ಅವರ ವಿದೇಶಾಂಗ ಸಚಿವಾಲಯದಿಂದ ಆಗಸ್ಟ್ 14ರಂದು ನೇಮಕಗೊಂಡ ಮಿಲಿಟರಿ ಹಿನ್ನೆಲೆಯ ಮೊದಲ ವಿದೇಶಾಂಗ ಕಾರ್ಯದರ್ಶಿಯಾಗಿದ್ದಾರೆ.

ಚೀನಾ ಎರಡನೆಯ ಅತ್ಯಂತ ದೊಡ್ಡ ಆರ್ಥಿಕತೆಯಾಗಿದೆ. ಭಾರತವು ಆರನೇ ದೊಡ್ಡ ಆರ್ಥಿಕತೆ ಎಂದು ಪರಿಗಣಿಸಲ್ಪಟ್ಟಿದೆ. 2018ರಲ್ಲಿ ಭಾರತವು ಜಗತ್ತಿನ ಅತ್ಯಂತ ವೇಗವಾದ ಬೆಳವಣಿಗೆಯ ಆರ್ಥಿಕತೆಯಾಗಿತ್ತು. ಇದರ ಅರ್ಥ ನಾವು ಎರಡು ಬೃಹತ್ ರಾಷ್ಟ್ರಗಳ ನಡುವೆ ಇದ್ದೇವೆ ಎಂದರು.

ಬೇರೆ ಯಾವುದೇ ನಿರ್ದಿಷ್ಟ ದೇಶ, ಮುಖ್ಯವಾಗಿ ಭಾರತಕ್ಕೆ ವಿರುದ್ಧವಾಗಿರುವಂತಹ ಚಟುವಟಿಕೆಗಳಿಗೆ ತನ್ನ ನೆಲೆಯನ್ನು ಬಳಸಿಕೊಳ್ಳಲು ಶ್ರೀಲಂಕಾ ಅವಕಾಶ ನೀಡಲು ಸಾಧ್ಯವಿಲ್ಲ, ನೀಡಬಾರದು ಮತ್ತು ನೀಡುವುದಿಲ್ಲ ಎಂದು ಹೇಳಿದರು.

English summary
Sri Lanka's Foreign Secretary Jayanath Colombage said, the country will adopt India firt approach policy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X