ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಪ್ಪಂದ ಆಘಾತದ ಬಳಿಕ ಭಾರತದ ಸಾಲ ವಾಪಸ್ ಕೊಟ್ಟ ಶ್ರೀಲಂಕಾ: ಚೀನಾ ಕೈವಾಡ ಶಂಕೆ

|
Google Oneindia Kannada News

ನವದೆಹಲಿ, ಫೆಬ್ರವರಿ 5: ಕೊಲಂಬೋ ಬಂದರಿನಲ್ಲಿ ಭಾರತ ಮತ್ತು ಚೀನಾ ಸಹಯೋಗದಲ್ಲಿ ನಿರ್ಮಿಸಲು ಯೋಜಿಸಿದ್ದ ಮಹತ್ವಾಕಾಂಕ್ಷಿ ಈಸ್ಟ್ ಕಂಟೇನರ್ ಟರ್ಮಿನಲ್ (ಇಸಿಟಿ) ಪ್ರಾಜೆಕ್ಟ್‌ನಿಂದ ಹಿಂದೆ ಸರಿಯುವ ಮೂಲಕ ಆಘಾತ ನೀಡಿದ್ದ ಶ್ರೀಲಂಕಾ, ಭಾರತದ 400 ಮಿಲಿಯನ್ ಡಾಲರ್ ಸಾಲವನ್ನು ಕೂಡ ಹಿಂದಿರುಗಿಸಿದೆ.

ಕೋವಿಡ್ ಕಾರಣದಿಂದ ಲಾಕ್‌ಡೌನ್ ವಿಧಿಸಬೇಕಿದ್ದರಿಂದ ತಕ್ಷಣದ ವೆಚ್ಚಗಳನ್ನು ಭರಿಸುವ ಸಲುವಾಗಿ 2020ರ ಜುಲೈನಲ್ಲಿ ಶ್ರೀಲಂಕಾ ಈ ಯೋಜನೆಗೆ ತಡೆ ನೀಡಿತ್ತು. ಈ ಬಗ್ಗೆ ಭಾರತ ಮತ್ತು ಜಪಾನ್ ಮೌನವಹಿಸಿದ್ದವು. ಶ್ರೀಲಂಕಾದ ನಡೆಯಿಂದ ಅಸಮಾಧಾನಗೊಂಡಿದ್ದ ಭಾರತ ತನ್ನ ಹಣವನ್ನು ಮರಳಿಸುವಂತೆ ಹೇಳಿತ್ತು ಎಂದು ವರದಿಯಾಗಿತ್ತು.

ಶ್ರೀಲಂಕಾ ಜತೆಗಿನ ಬುದ್ಧಿಸ್ಟ್ ಒಪ್ಪಂದಕ್ಕೆ ಭಾರತದಿಂದ 15 ಮಿಲಿಯನ್ ಡಾಲರ್ ನೆರವುಶ್ರೀಲಂಕಾ ಜತೆಗಿನ ಬುದ್ಧಿಸ್ಟ್ ಒಪ್ಪಂದಕ್ಕೆ ಭಾರತದಿಂದ 15 ಮಿಲಿಯನ್ ಡಾಲರ್ ನೆರವು

ಶ್ರೀಲಂಕಾದ ಕೇಂದ್ರ ಬ್ಯಾಂಕ್ (ಸಿಬಿಎಸ್‌ಎಲ್‌) ಸಾಲ ಮರಳಿ ನೀಡುತ್ತಿರುವುದನ್ನು ಖಚಿತಪಡಿಸಿದೆ. ಆದರೆ ಅವಧಿಗೂ ಮೊದಲೇ ಪಾವತಿ ಮಾಡುವುದರ ಬಗ್ಗೆ ಭಾರತದಿಂದ ಯಾವುದೇ ಒತ್ತಡದ ಅಥವಾ ಮನವಿ ಬಂದಿರಲಿಲ್ಲ ಎಂದು ಟ್ವಿಟ್ಟರ್‌ನಲ್ಲಿ ತಿಳಿಸಿದೆ. ಮುಂದೆ ಓದಿ.

ಶ್ರೀಲಂಕಾ ಬಳಿ ಅಗತ್ಯ ಹಣವಿಲ್ಲ

ಶ್ರೀಲಂಕಾ ಬಳಿ ಅಗತ್ಯ ಹಣವಿಲ್ಲ

ಆದರೆ ಶ್ರೀಲಂಕಾದ ಪ್ರಮುಖ ಅರ್ಥಶಾಸ್ತ್ರಜ್ಞ, ವಿರೋಧಪಕ್ಷದ ಸಂಸದ ಮತ್ತು ಮಾಜಿ ಸಚಿವ ಹರ್ಷ ಡಿ ಸಿಲ್ವ, ಸಿಬಿಎಸ್‌ಎಲ್‌ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದು, ಶ್ರೀಲಂಕಾದ ವಿದೇಶಿ ಮೀಸಲು ತೀವ್ರ ಪ್ರಮಾಣದಲ್ಲಿ ಕುಸಿಯುತ್ತಿದ್ದು, ಹಣ ಮರು ಪಾವತಿಸಲು ಅಗತ್ಯವಾದಷ್ಟು ನಿಧಿ ಇಲ್ಲ ಎಂದು ಹೇಳಿದ್ದಾರೆ.

ಚೀನಾ ಕೈವಾಡ ಆರೋಪ

ಚೀನಾ ಕೈವಾಡ ಆರೋಪ

ಇದು ಮಾಮೂಲಿ ಪ್ರಕ್ರಿಯೆಯಾಗಿದ್ದು, ಇಸಿಟಿ ಒಪ್ಪಂದಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದು ಶ್ರೀಲಂಕಾ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಕೇಂದ್ರ ಬ್ಯಾಂಕ್ ಹೇಳಿದ್ದರೂ, ಭಾರತ-ಲಂಕಾ ಸಹಭಾಗಿತ್ವಕ್ಕೆ ಧಕ್ಕೆ ತರುವ ಇತ್ತೀಚಿನ ಬೆಳವಣಿಗೆ ಹಿಂದೆ ಚೀನಾ ಕೈವಾಡ ಇದೆ ಎಂದು ಮಾಧ್ಯಮಗಳು ಮತ್ತು ವಿರೋಧಪಕ್ಷಗಳು ಆರೋಪಿಸಿವೆ.

ಭಾರತದ 16 ನಾವಿಕರಿಗೆ ಬಿಡುಗಡೆ ನೀಡಲು ಕೊನೆಗೂ ಚೀನಾ ಒಪ್ಪಿಗೆಭಾರತದ 16 ನಾವಿಕರಿಗೆ ಬಿಡುಗಡೆ ನೀಡಲು ಕೊನೆಗೂ ಚೀನಾ ಒಪ್ಪಿಗೆ

ಚೀನಾದಿಂದ ಬೆದರಿಕೆ ತಂತ್ರ

ಚೀನಾದಿಂದ ಬೆದರಿಕೆ ತಂತ್ರ

ಭಾರತ ಮತ್ತು ಜಪಾನ್ ಜತೆ ಮಾಡಿಕೊಂಡ ಎಲ್ಲ ಒಪ್ಪಂದಗಳಿಂದ ಹಿಂದೆ ಸರಿಯುವಂತೆ ರಾಜಪಕ್ಸ ಸಹೋದರರ ಮೇಲೆ ಚೀನಾ ಒತ್ತಡ ಹೇರುತ್ತಿದೆ. ಚೀನಾ ರಾಯಭಾರ ಕಚೇರಿಯು ಈ ಒಪ್ಪಂದದ ವಿರುದ್ಧ ಪ್ರತಿಭಟನೆ ಸಹ ನಡೆಸಿದೆ. ಇಸಿಟಿ ಪ್ರಾಜೆಕ್ಟ್‌ನಿಂದ ಭಾರತ ಮತ್ತು ಜಪಾನ್‌ಗಳನ್ನು ಹೊರಗೆ ಇರಿಸದೆ ಇದ್ದರೆ ಸರ್ಕಾರದ ವಿರುದ್ಧ ಕೈಗಾರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಚೀನಾ ಬೆದರಿಸಿದೆ ಎಂಬ ಆರೋಪ ಕೇಳಿಬಂದಿದೆ.

ವಾಸ್ತವ ದಿನಾಂಕ 2022 ನವೆಂಬರ್

ವಾಸ್ತವ ದಿನಾಂಕ 2022 ನವೆಂಬರ್

ಫೆಬ್ರವರಿ 2ರಂದು ಈ ಮೊತ್ತ ಮೆಚುರ್ ಆಗುವುದರಲ್ಲಿತ್ತು. ಹೀಗಾಗಿ ಬಾಕಿ ಉಳಿದ ಮೊತ್ತವನ್ನು ಸಿಬಿಎಸ್‌ಎಲ್‌ ಪಾವತಿಸಿದೆ ಎಂದು ಶ್ರೀಲಂಕಾದ ಹಣಕಾಸು ಕಾರ್ಯದರ್ಶಿ ಎಸ್‌ಆರ್ ಅಟ್ಟಿಗಲ್ಲೆ ಹೇಳಿದ್ದಾರೆ. ಆದರೆ ವಾಸ್ತವವಾಗಿ ಈ ಬಾಕಿ ಹಣವನ್ನು 2022ರ ನವೆಂಬರ್‌ನಲ್ಲಿ ಪಾವತಿಸಬೇಕಿತ್ತು ಎಂದು ಕೆಲವು ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾದಿಂದ ಭಾರತವನ್ನು ಬೆದರಿಸಲು ಯತ್ನ,ಅಮೆರಿಕ ಕಳವಳಚೀನಾದಿಂದ ಭಾರತವನ್ನು ಬೆದರಿಸಲು ಯತ್ನ,ಅಮೆರಿಕ ಕಳವಳ

English summary
Sri Lanka's Central Bank returned the USD 400 million debt money to India after pulling out of ECT project. China hand suspected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X