ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Sri Lanka Crisis; ವಿಮಾನ ಸಂಚಾರ ಕಡಿಮೆ ಮಾಡಿದ ಏರ್ ಇಂಡಿಯಾ

|
Google Oneindia Kannada News

ನವದೆಹಲಿ, ಏಪ್ರಿಲ್ 03; ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಶ್ರೀಲಂಕಾಕ್ಕೆ ಪ್ರಯಾಣ ಮಾಡುವ ಜನರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡಿದೆ. ಈ ಹಿನ್ನಲೆಯಲ್ಲಿ ಏರ್ ಇಂಡಿಯಾ ಶ್ರೀಲಂಕಾಕ್ಕೆ ಸಂಚಾರ ನಡೆಸುವ ವಿಮಾನಗಳ ಸಂಖ್ಯೆಯನ್ನು ಕಡಿತಗೊಳಿಸಲಿದೆ.

ಭಾನುವಾರ ಏರ್ ಇಂಡಿಯಾ ಈ ಕುರಿತು ಮಾಹಿತಿ ನೀಡಿದೆ. ಏಪ್ರಿಲ್ 9ರಿಂದ ಜಾರಿಗೆ ಬರುವಂತೆ ವಾರದಲ್ಲಿ 13 ವಿಮಾನಗಳು ಮಾತ್ರ ಶ್ರೀಲಂಕಾಕ್ಕೆ ಸಂಚಾರ ನಡೆಸಲಿವೆ. ಇಷ್ಟು ದಿನ 16 ವಿಮಾನಗಳು ಸಂಚಾರ ನಡೆಸುತ್ತಿದ್ದವು.

 ಶ್ರೀಲಂಕಾ ಆಹಾರ ಬಿಕ್ಕಟ್ಟು: ಹಾಲಿನ ಪುಡಿ, ಅಕ್ಕಿ, ಸಕ್ಕರೆ ಬೆಲೆ ಗಗನಕ್ಕೇರಿದೆ ಶ್ರೀಲಂಕಾ ಆಹಾರ ಬಿಕ್ಕಟ್ಟು: ಹಾಲಿನ ಪುಡಿ, ಅಕ್ಕಿ, ಸಕ್ಕರೆ ಬೆಲೆ ಗಗನಕ್ಕೇರಿದೆ

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾ ಇಂಧನದ ಕೊರತೆ, ಅಗತ್ಯ ವಸ್ತುಗಳ ಕೊರತೆ ಎದುರಿಸುತ್ತಿದೆ. ಈ ಹಿನ್ನಲೆಯಲ್ಲಿ ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡುವವರ ಸಂಖ್ಯೆ ಕುಸಿತಗೊಂಡಿದೆ. ಇದರಿಂದಾಗಿ ಮುಂದಿನ ವಾರದಿಂದ ವಾರಕ್ಕೆ 13 ವಿಮಾನಗಳು ಮಾತ್ರ ಸಂಚಾರ ನಡೆಸಲಿವೆ.

Sri Lanka Crisis; ವಾಟ್ಸಪ್, ಫೇಸ್‌ಬುಕ್ ಬಳಕೆಗೆ ನಿರ್ಬಂಧ Sri Lanka Crisis; ವಾಟ್ಸಪ್, ಫೇಸ್‌ಬುಕ್ ಬಳಕೆಗೆ ನಿರ್ಬಂಧ

Sri Lanka Crisis Air India Reduce Its Flights To Sri Lanka

ಏರ್ ಇಂಡಿಯಾ ವಕ್ತಾರ ಈ ಕುರಿತು ಮಾತನಾಡಿದ್ದು, ಪ್ರಸ್ತುತ ಏರ್ ಇಂಡಿಯಾ ದೆಹಲಿಯಿಂದ ಸಂಚಾರ ನಡೆಸುವ ಪ್ರತಿನಿತ್ಯದ ವಿಮಾನ, ಚೆನ್ನೈನಿಂದ ಸಂಚಾರ ನಡೆಸುವ ವಿಮಾನ ಸೇರಿ 16 ವಿಮಾನಗಳು ಶ್ರೀಲಂಕಾಕ್ಕೆ ಸಂಚಾರ ನಡೆಸುತ್ತಿವೆ. ಹೊಸ ವೇಳಾಪಟ್ಟಿಯಂತೆ 13 ವಿಮಾನ ಮಾತ್ರ ಸಂಚಾರ ನಡೆಸಲಿವೆ ಎಂದರು.

 ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ತಮಿಳುನಾಡಿಗೆ ನಿರಾಶ್ರಿತರ ಆಗಮನ, ಅಕ್ರಮ ಪ್ರವೇಶಿಸಿ ಜೈಲು ಪಾಲು ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ತಮಿಳುನಾಡಿಗೆ ನಿರಾಶ್ರಿತರ ಆಗಮನ, ಅಕ್ರಮ ಪ್ರವೇಶಿಸಿ ಜೈಲು ಪಾಲು

ಚೆನ್ನೈನಿಂದ ಸಂಚಾರ ನಡೆಸುವ ವಿಮಾನಗಳ ಹಾರಾಟ ಹಾಗೆಯೇ ಇರುತ್ತದೆ. ಆದರೆ ದೆಹಲಿಯಿಂದ ವಾರದಲ್ಲಿ 7 ವಿಮಾನದ ಬದಲು 4 ವಿಮಾನಗಳು ಮಾತ್ರ ಸಂಚಾರ ನಡೆಸಲಿವೆ. ಏಪ್ರಿಲ್‌ 9ರಿಂದ ಇದು ಜಾರಿಗೆ ಬರಲಿದೆ.

ಎಐ 283 ಸಂಖ್ಯೆಯ ವಿಮಾನ ದೆಹಲಿ-ಕೊಲೊಂಬೊ ನಡುವೆ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ಮಾತ್ರ ಸಂಚಾರ ನಡೆಸಲಿದೆ. ಏಪ್ರಿಲ್ 8 ರಿಂದ ಮೇ 30ರ ತನಕ ಈ ವೇಳಾಪಟ್ಟಿ ಜಾರಿಯಲ್ಲಿರುತ್ತದೆ.

ಎಐ 284 ಸಂಖ್ಯೆಯ ಕೊಲಂಬೊ-ದೆಹಲಿ ವಿಮಾನ ಸೋಮವಾರ, ಮಂಗಳವಾರ, ಗುರುವಾರ ಮತ್ತು ಶನಿವಾರ ಸಂಚಾರ ನಡೆಸಲಿದೆ. ಏಪ್ರಿಲ್ 9 ರಿಂದ ಮೇ 31ರ ತನಕ ಈ ವೇಳಾಪಟ್ಟಿ ಇರುತ್ತದೆ. ಬಳಿಕ ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

ಶುಕ್ರವಾರ ಕೊಲಂಬೊದಲ್ಲಿರುವ ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ನಿವಾಸದ ಮುಂದೆ ಬೃಹತ್ ಪ್ರತಿಭಟನೆ ನಡೆದಿತ್ತು. ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆಗ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿತ್ತು.

ಭಾನುವಾರ ಶ್ರೀಲಂಕಾದಲ್ಲಿ ವೀಕೆಂಡ್ ಕರ್ಫ್ಯೂ ಜೊತೆಗೆ ಫೇಸ್ ಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಬಂದ್ ಮಾಡಲಾಗಿದೆ. ಜನರು ಪ್ರತಿಭಟನೆ ನಡೆಸುವುದನ್ನು ತಡೆಯಲು ಈ ತೀರ್ಮಾನ ಕೈಗೊಳ್ಳಲಾಗಿದೆ.

English summary
Worsening economic crisis in Sri Lanka Air India said that it will reduce its India-Sri Lanka services from 16 flights per week currently to 13 from April 9.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X