ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಶಾಂತ್ ಗೆ ಆಜೀವ ನಿಷೇಧ ಹೇರಿದ ಬಿಸಿಸಿಐ

By Mahesh
|
Google Oneindia Kannada News

ಮುಂಬೈ, ಸೆ.13: ದೇಶಾದ್ಯಂತ ಕೋಲಾಹಲ ಸೃಷ್ಟಿಸಿದ್ದ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಆರೋಪಿಗಳಾಗಿರುವ ಶ್ರೀಶಾಂತ್, ಅಜಿತ್ ಚಂಡಿಲಾ, ಅಂಕಿತ್ ಚೌಹಾಣ್ ಅವರು ತಪ್ಪಿತಸ್ಥರು ಎಂದು ಬಿಸಿಸಿಐ ತನಿಖಾ ವರದಿ ಹೇಳಿರುವ ಹಿನ್ನೆಲೆಯಲ್ಲಿ ಶ್ರೀಶಾಂತ್ ಅವರಿಗೆ ಆಜೀವ ನಿಷೇಧ ಹೇರಲಾಗಿದೆ ಎಂದು ಬಿಸಿಸಿಐ ಪ್ರಕಟಿಸಿದೆ.

'ಬಿಸಿಸಿಐ ನಿರ್ಣಯ ಹೊರ ಬೀಳುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಶ್ರೀಶಾಂತ್ ಇದು ಅತ್ಯಂತ ಆಶ್ಚರ್ಯಕರವಾಗಿದೆ. ಕೋರ್ಟಿನಲ್ಲಿ ಇನ್ನೂ ಕೇಸ್ ಬಾಕಿಯಿದೆ. ಜಾಮೀನು ಸಿಕ್ಕಿದೆ. ಬಿಸಿಸಿಐ ನಡೆ ಅಚ್ಚರಿ ತಂದಿದೆ' ಎಂದಿದ್ದಾರೆ.

ಬಂಧನಕ್ಕೊಳಗಾಗಿದ್ದ ಕ್ರಿಕೆಟರ್ ಅಜಿತ್ ಚಂಡಿಲಾಗೆ ಇತ್ತೀಚೆಗಷ್ಟೇ ಜಾಮೀನು ಸಿಕ್ಕಿತ್ತು. ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಮಿಸ್ಸಿಂಗ್ ಲಿಂಕ್ ಪತ್ತೆಯಾಗಿ ಮತ್ತೊಮ್ಮೆ ತನಿಖೆ ನಡೆಸಿ ಎಂದು ನ್ಯಾಯಾಲಯ ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಇಂಡಿಯನ್ ಎಕ್ಸ್ ಪ್ರೆಸ್ ವರದಿಯಂತೆ ರವಿ ಸವಾನಿ ನೇತೃತ್ವದ ಬಿಸಿಸಿಐ ತನಿಖಾ ತಂಡ ತನ್ನ ಅಂತಿಮ ವರದಿಯನ್ನು ಬಿಸಿಸಿಐಗೆ ಸಲ್ಲಿಸಿದ್ದು ವೇಗಿ ಅಮಿತ್ ಸಿಂಗ್ ಕೂಡಾ ತಪ್ಪಿತಸ್ಥ ಎಂದು ಹೇಳಲಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರು ಕಳ್ಳಾಟದಲ್ಲಿ ಭಾಗಿಯಾಗಿದ್ದು ಸಾಬೀತಾಗಿದೆ.

Sreesanth found guilty of IPL spot-fixing, faces life ban

'ಸ್ಪಾಟ್ ಫಿಕ್ಸಿಂಗ್ ಪ್ರಕರಣದ ರುವಾರಿ ಶ್ರೀಶಾಂತ್ ಎಂಬ ಶಂಕೆ ಮೊದಲಿನಿಂದಲೂ ಇತ್ತು. ಪ್ರಾಥಮಿಕ ವರದಿಯಲ್ಲೂ ಈ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಬುಕ್ಕಿಗಳ ಜತೆ ನಿರಂತರ ಸಂಪರ್ಕ ಹೊಂದಿದ್ದ ಶ್ರೀಶಾಂತ್ ಇತರ ಆಟಗಾರರನ್ನು ನಂತರ ಗ್ಯಾಂಗ್ ಗೆ ಸೇರಿಸಿಕೊಂಡಿದ್ದರು' ಎಂದು ವರದಿಯಲ್ಲಿ ಹೇಳಲಾಗಿದೆ.

ಪ್ರಕರಣ ಕೋರ್ಟಿನಲ್ಲಿದೆ: ಬುಕ್ಕಿಗಳಾದ ಜಿತೇಂದ್ರ ಕುಮಾರ್ ಜೈನ್, ರಮೇಶ್ ವ್ಯಾಸ್, ಅಶ್ವನಿ ಅಗರವಾಲ್, ಸುನಿಲ್ ಭಾಟಿಯಾ ಹಾಗೂ ಫಿರೋಜ್ ಫಾರಿದ್ ಅನ್ಸಾರಿ ಜಾಮೀನು ಅರ್ಜಿ ತಿರಸ್ಕಾರಗೊಂಡಿದೆ.

ಅಜಿತ್ ಚಂಡಿಲಾ, ಶ್ರೀಶಾಂತ್ ಜತೆ ಸಂಪರ್ಕ ಹೊಂದಿದ್ದ ಬುಕ್ಕಿಗಳ ಹೇಳಿಕೆಗಳಲ್ಲಿ ಗೊಂದಲ ಕಂಡು ಬಂದಿದ್ದು, ಈ ಕೇಸ್ ನಲ್ಲಿ ಮಿಸ್ಸಿಂಗ್ ಲಿಂಕ್ ಇದೆ. ವಿಶೇಷ ಸೆಲ್ ಆರಂಭಿಸಿ ದೆಹಲಿ ಪೊಲೀಸರು ಮತ್ತೊಮ್ಮೆ ತನಿಖೆ ನಡೆಸುವಂತೆ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಜಡ್ಜ್ ಧರ್ಮೇಶ್ ಅವರು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವವರ ಮೇಲೆ ಮಹಾರಾಷ್ಟ್ರ ಅಪರಾಧ ನಿಯಂತ್ರಣ ಕಾಯ್ದೆ (ಮೊಕಾ) ಪ್ರಕಾರ ದೂರು ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 420, 409 ಹಾಗೂ 120 (ಬಿ) ಹಾಗೂ ಮೋಕಾ ಸೆಕ್ಷನ್ 6 ಮತ್ತು 8 ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ.

ಶ್ರೀಶಾಂತ್ ಗೆಳೆಯ ಅಭಿಷೇಕ್ ಶುಕ್ಲಾ ಅವರನ್ನು ಮೋಕಾ ಅಡಿಯಲ್ಲಿ ಆರೋಪಿಯನ್ನಾಗಿಸಿಲ್ಲ. ಪಾಕಿಸ್ತಾನ, ದುಬೈ ಹಾಗೂ ಇಂಗ್ಲೆಂಡ್ ನಿಂದ ದಾವೂದ್ ಇಬ್ರಾಹಿಂ ಹಾಗೂ ಛೋಟಾ ಶಕೀಲ್ ಸ್ಪಾಟ್ ಫಿಕ್ಸಿಂಗ್ ನಿಯಂತ್ರಿಸುತ್ತಿದ್ದರು. ಪಾಕಿಸ್ತಾನ ಬುಕ್ಕಿ ಸಲ್ಮಾನ್, ದುಬೈ ಬುಕ್ಕಿ ಜಾವೇದ್ aka ಡಾಕ್ಟರ್ aka ಜಾವೇದ್ ಛೂಟನಿ ಅವರು ಭಾರತದ ಬುಕ್ಕಿಗಳಾದ ರಮೇಶ್ ವ್ಯಾಸ್ ಹಾಗೂ ಟಿಂಕು ಮಂಡಿ ಮೂಲಕ ಫಿಕ್ಸಿಂಗ್ ಮಾಡುತ್ತಿದ್ದರು ಎಂದು ಅರೋಪಪಟ್ಟಿಯಲ್ಲಿ ಹೇಳಲಾಗಿತ್ತು.

English summary
Paceman S Sreesanth was banned for life by the Board of Control for Cricket in Indian (BCCI) on Friday for his role in IPL spot-fixing. Sreesanth was found guilty of spot-fixing in the Indian Premier League (IPL) by BCCI's probe by Ravi Sawani.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X