• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೂಪಾಂತರಿ ಸೋಂಕಿನ ಮೇಲೆ ಪರಿಣಾಮ ಬೀರಲಿದೆ ಸ್ಪುಟ್ನಿಕ್ V ಲಸಿಕೆ

|

ನವದೆಹಲಿ, ಏಪ್ರಿಲ್ 13: ಸ್ಪುಟ್ನಿಕ್ V ಲಸಿಕೆಯು ರೂಪಾಂತರಿ ಕೊರೊನಾ ಸೋಂಕಿನ ಮೇಲೆ ಪರಿಣಾಮ ಬೀರಲಿದೆ ಎಂದು ಲಸಿಕೆ ತಯಾರಕರು ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ರಷ್ಯಾದ ಸ್ಪುಟ್ನಿಕ್ V ಲಸಿಕೆಗೆ ಭಾರತದಲ್ಲಿ ಅನುಮೋದನೆ ದೊರೆತಿದೆ. ಈಗಾಗಲೇ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್‌ಗೆ ಅನುಮತಿ ನೀಡಲಾಗಿದ್ದು, ಇದು ಮೂರನೇ ಲಸಿಕೆಯಾಗಿದೆ. ವರ್ಷಕ್ಕೆ ಭಾರತವು 850 ಮಿಲಿಯನ್ ಕೊರೊನಾ ಲಸಿಕೆಯನ್ನು ತಯಾರಿಸಲಿದೆ.

ರಷ್ಯಾದ ನೇರ ಬಂಡವಾಳ ನಿಧಿ (ಆರ್ ಡಿಐಎಫ್) ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತದಲ್ಲಿ 850 ಮಿಲಿಯನ್ ಡೋಸ್ ಲಸಿಕೆಗಳನ್ನು ಭಾರತ ತಯಾರಿಸಲಿದೆ ಎಂದು ಹೇಳಿದೆ.

ಭಾರತದ ಔಷಧ ನಿಯಂತ್ರಕ ಈ ಲಸಿಕೆಯನ್ನು ತುರ್ತು ಬಳಕೆಯ ಅಡಿಯಲ್ಲಿ ಬಳಕೆ ಮಾಡುವುದಕ್ಕೆ ನೋಂದಾಯಿಸಿದೆ. ರಷ್ಯಾದ ಸ್ಪುಟ್ನಿಕ್ ಲಸಿಕೆ ಬಳಕೆಗೆ ಅನುಮತಿ ನೀಡಿರುವ, ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ರಾಷ್ಟ್ರ ಭಾರತವಾಗಿದ್ದು, ಮುಂಚೂಣಿಯಲ್ಲಿರುವ ಉತ್ಪಾದನಾ ಹಬ್ ಆಗಿದೆ ಎಂದು ರಷ್ಯಾ ತಿಳಿಸಿದೆ.

ಈ ಲಸಿಕೆಯು ಬ್ರಿಟಿಷ್ ರೂಪಾಂತರಿ ವಿರುದ್ಧವೂ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಆರ್‌ಡಿಐಎಫ್‌ನ ಸಿಇಒ ಕಿರಿಲ್ ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾ ಸೋಂಕು ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಪಂಜಾಬ್‌ನಲ್ಲಿ ಶೇ.80ರಷ್ಟು ಮಂದಿಗೆ ಯುಕೆ ಕೊರೊನಾ ವೈರಸ್ ತಗುಲಿದೆ.

ದೆಹಲಿ, ಪಂಜಾಬ್ ಹಾಗೂ ಮಹಾರಾಷ್ಟ್ರದಲ್ಲಿ ಸಂಗರ್ಹಿಸಲಾದ ಸ್ಯಾಂಪಲ್‌ಗಳಲ್ಲಿ ಕೂಡ ರೂಪಾಂತರಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ.

ರಷ್ಯಾದ ಆರ್ ಡಿಐಎಫ್ ಭಾರತದ ಗ್ಲಾಂಡ್ ಫಾರ್ಮಾ, ಹೆಟೆರೊ ಬಯೋಫಾರ್ಮಾ, ಪ್ಯಾನೇಸಿಯಾ ಬಯೋಟೆಕ್, ಸ್ಟೆಲಿಸ್ ಬಯೋಫಾರ್ಮಾ ಮತ್ತು ವಿರ್ಚೋ ಬಯೋಟೆಕ್ ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ವಾರ್ಷಿಕ 850 ಮಿಲಿಯನ್ ಡೋಸ್ ಗಳಷ್ಟು ಸ್ಪುಟ್ನಿಕ್ ಲಸಿಕೆಗಳನ್ನು ತಯಾರಿಸಲಿದೆ.

ರಷ್ಯಾದಲ್ಲಿ ನಡೆದಿರುವ ಕ್ಲಿನಿಕಲ್ ಟ್ರಯಲ್ ಗಳು ಹಾಗೂ ಭಾರತದಲ್ಲಿ ಡಾ. ರೆಡ್ಡೀಸ್ ಪ್ರಯೋಗಾಲಯದಲ್ಲಿ ನಡೆದಿರುವ ಮೂರನೇ ಹಂತದ ಹೆಚ್ಚುವರಿ ಸ್ಥಳೀಯ ಕ್ಲಿನಿಕಲ್ ಟ್ರಯಲ್ ಗಳ ದತ್ತಾಂಶಗಳನ್ನು ಪಡೆದು ಔಷಧ ನಿಯಂತ್ರಕ ಈ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದೆ.

English summary
Russia's Sputnik V, the third Covid vaccine to be cleared for use in India, is effective against mutant strains, the Russian Direct Investment Fund (RDIF) has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X