ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳಿಗೆ ಸಿಹಿಸುದ್ದಿ: ಶಾಲೆಯಲ್ಲಿ ಪ್ರತಿದಿನ ಆಟ ಆಡೋದು ಕಡ್ಡಾಯ

By Nayana
|
Google Oneindia Kannada News

Recommended Video

ಶಾಲೆಗಳಲ್ಲಿ ಕ್ರೀಡೆಗಳನ್ನ ಕಡ್ಡಾಯ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ | Oneindia Kannada

ಬೆಂಗಳೂರು, ಆಗಸ್ಟ್ 7: ಮುಂಬರುವ ಶೈಕ್ಷಣಿಕ ವರ್ಷದಿಂದ ಮಕ್ಕಳಿಗೆ ಕ್ರೀಡೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಪಠ್ಯವನ್ನು ಶೇ.50ರಷ್ಟು ಕಡಿತಗೊಳಿಸಲಾಗುತ್ತಿದ್ದು, ಗೇಮ್ಸ್‌ ಅವಧಿ ಕಡ್ಡಾಯವಾಗಲಿದೆ.

ಈ ಕುರಿತು ಕೇಂದ್ರ ಸಚಿವ ರಾಜ್ಯವರ್ಧನ್‌ ಸಿಂಗ್‌ ಈ ವಿಷಯವನ್ನು ತಿಳಿಸಿದ್ದಾರೆ. ಮಕ್ಕಳಿಗೆ ಪ್ರತಿ ದಿನವೂ ಗೇಮ್ಸ್‌ ಪೀರಿಯಡ್‌ ಇರಲಿದೆ. ದೇಶದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚು ಉತ್ತೇಜನ ನೀಡುವ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಲ್ಲಿ ಶೀಘ್ರ ಅಂತಾರಾಷ್ಟ್ರೀಯ ಟೆನ್ನಿಸ್ ಕೋರ್ಟ್: ಪರಮೇಶ್ವರ್ಬೆಂಗಳೂರಲ್ಲಿ ಶೀಘ್ರ ಅಂತಾರಾಷ್ಟ್ರೀಯ ಟೆನ್ನಿಸ್ ಕೋರ್ಟ್: ಪರಮೇಶ್ವರ್

ಪ್ರತಿಯೊಬ್ಬರು ಈಗ ಕ್ರೀಡೆಯುವ ಶಿಕ್ಷಣದ ಭಾಗವಲ್ಲಾ ಎಂದೇ ನಂಬಿದ್ದಾರೆ, ಆದರೆ 2019ರಿಂದ ಶಾಲಾ ಪಠ್ಯದಲ್ಲಿ ಶೇ.50ರಷ್ಟು ಕಡಿತಗೊಳಿಸಲಾಗುತ್ತಿದ್ದು, ಗೇಮ್ಸ್‌ ಪೀರಿಯಡ್‌ ಕಡ್ಡಾಯವಾಗಲಿದೆ.

Sports minister Rathore says games period mandatory in school

ಕ್ರೀಡೆಗಳನ್ನು ದೈನಂದಿನ ಚಟುವಟಿಕೆಯ ಭಾಗವಾಗಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಶೇ.50ಕ್ಕೆ ಕಡಿತಗೊಳಿಸಿ ಅವರನ್ನು ಕ್ರೀಡಾ ಚಟುವಟಿಕೆಗಳ ಉತ್ತೇಜನಕ್ಕೆ ಬಳಸಿಕೊಳ್ಳಲಾಗುತ್ತದೆ. ಕ್ರೀಡಾ ಚಟುವಟಿಕೆಗಳಿಗಾಗಿ ಸಾಕಷ್ಟು ಹಣ ವಿನಿಯೋಗಿಸಲಾಗುವುದು. ದೇಶಾದ್ಯಂತ ಶೀಘ್ರದಲ್ಲೇ 20 ವಿಶೇಷ ಕ್ರೀಡಾ ಶಾಲೆಗಳು ಅಸ್ವಿತ್ವಕ್ಕೆ ಬರಲಿದೆ ಎಂದು ತಿಳಿಸಿದರು.

ರಾಜ್ಯ ಕ್ರೀಡಾ ಒಕ್ಕೂಟಗಳಲ್ಲಿ ಚುನಾವಣೆಗಳನ್ನು ಮುಕ್ತ ಹಾಗೂ ನ್ಯಾಯಸಮ್ಮತಗೊಳಿಸುವ ನಿಟ್ಟಿನಲ್ಲಿ 2011ರ ಕ್ರೀಡಾ ನೀತಿಯನ್ನು ಅನುಷ್ಠಾನಗೊಳಿಸುವಂತೆ ರಾಜ್ಯ ಸರ್ಕಾರಗಳಿಗೆ ರಾಜ್ಯಸಭೆಯಲ್ಲಿ ಆಗ್ರಹಿಸಿದ್ದಾರೆ.

English summary
Union minister for sports and youth empowerment Rajyavardhan Singh Rathore has said that games period in schools and colleges would be mandatory from next academic year. At the same time, text will be cut down up to 50 percent to reduce the burden on students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X