ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೈಲಿಹಂಟ್‌ನೊಂದಿಗೆ ಸೂಪರ್ ಸಂಡೆ ಕ್ರೀಡಾ ಹಬ್ಬ ಆಚರಿಸಿ

Google Oneindia Kannada News

ಕ್ರೀಡಾಪ್ರೇಮಿಗಳಿಗೆ ಅಕ್ಟೋಬರ್ 24ರ ಭಾನುವಾರ ಭಾರಿ ಸಂಭ್ರಮದ ದಿನವಾಗಿದ್ದು ಈ ವರ್ಷದ ಶ್ರೇಷ್ಠ ಕ್ರೀಡಾ ದಿನಕ್ಕೆ ಸಾಕ್ಷಿಯಾಗಲಿದ್ದಾರೆ.

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ
ಐಸಿಸಿ ಟಿ 20 ವಿಶ್ವಕಪ್ 2021ರ ಪಂದ್ಯ ನಡೆಯಲಿದ್ದು, ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದ್ದು, ಭಾನುವಾರ ತಡರಾತ್ರಿಯವರೆಗೆ ಕ್ರಿಕೆಟ್ ಪ್ರೇಮಿಗಳನ್ನು ಹಿಡಿದಿಟ್ಟುಕೊಳ್ಳಲಿದೆ.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ಮತ್ತು ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನದ ನಡುವಿನ ಹೈ-ವೋಲ್ಟೇಜ್ ಪಂದ್ಯವು ಅಕ್ಷರಶಃ ಎಲ್ಲರಲ್ಲೂ ಕಿಚ್ಚು ಹಚ್ಚುವ ನಿರೀಕ್ಷೆಯಿದೆ.

Sports lovers watch The Super Sunday Sporting Bonanza with Dailyhunt

ಕೊಹ್ಲಿ ಮತ್ತು ತಂಡ ಉತ್ತಮ ಲಯದಲ್ಲಿದ್ದು ಈ ಬಾರಿ ಟಿ 20 ವಿಶ್ವ ಪ್ರಶಸ್ತಿಯನ್ನು ಗೆಲ್ಲುವ ನೆಚ್ಚಿನ ತಂಡವೆನಿಸಿದೆ. ವಿಶ್ವ ಟಿ20ರ ಉದ್ಘಾಟನಾ ಪಂದ್ಯದಲ್ಲೇ ಪಾಕಿಸ್ತಾನವನ್ನು ಎದುರಿಸುತ್ತಿದ್ದು, ಗೆಲುವಿನೊಂದಿಗೆ ತನ್ನ ಅಭಿಯಾನ ಆರಂಭಿಸಲು ಕೊಹ್ಲಿ ಪಡೆ ಸಜ್ಜಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಆಯೋಜನೆಯ ಚುಟುಕು ಕ್ರಿಕೆಟ್ ಸೇರಿದಂತೆ ಏಕದಿನ ಕ್ರಿಕೆಟ್ ಪಂದ್ಯಾವಳಿಗಳಲ್ಲೂ ಭಾರತ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಇಲ್ಲಿ ತನಕ ಪಾಕಿಸ್ತಾನದ ವಿರುದ್ಧ ಸೋಲು ಕಂಡಿಲ್ಲ.

ಇನ್ನೊಂದೆಡೆ, ಅಜಮ್ ಅವರ ನಾಯಕತ್ವದ ಪಾಕಿಸ್ತಾನ ತಂಡವು ಯುವ ಹಾಗೂ ಅನುಭವಿ ಆಟಗಾರರನ್ನು ಹೊಂದಿದ್ದು, ಭಾರತ ವಿರುದ್ಧದ ಸೋಲಿನ ಸರಪಳಿಯನ್ನು ತುಂಡರಿಸಲು ಅಣಿಯಾಗಿದೆ. ಈ ಪಂದ್ಯವು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವುದು ಪಾಕಿಸ್ತಾನಕ್ಕೆ ಸ್ವಲ್ಪ ಲಾಭದಾಯಕ ಎನ್ನಬಹುದು. ಪಾಕಿಸ್ತಾನದ ಎರಡನೇ ತವರು ಕ್ರಿಕೆಟ್ ನೆಲ ಇದಾಗಿದ್ದು, ಉತ್ತಮ ಪ್ರದರ್ಶನದ ನಿರೀಕ್ಷೆಯನ್ನು ಹುಟ್ಟಿಸಿದೆ.

ಭಾನುವಾರದ ಈ ಬಿಗ್ ಮ್ಯಾಚ್ ಆರಂಭಕ್ಕೂ ಮುನ್ನ ಕ್ರೀಡಾಪ್ರೇಮಿಗಳು ಮಿಸಾನೊದಲ್ಲಿ ನಡೆಯಲಿರುವ ಎಫ್‌ಐಎಂ ಮೋಟೋ ಜಿಪಿ ವಿಶ್ವಕಪ್ ಚಾಂಪಿಯನ್‌ಶಿಪ್ ವೀಕ್ಷಿಸಬಹುದು. ಎಮಿಲಿಯಾ-ರೊಮಗ್ನಾ ಗ್ರ್ಯಾಂಡ್ ಪ್ರೀ ಸಂಜೆ 5.30 ಕ್ಕೆ ಆರಂಭವಾಗುತ್ತದೆ.

ಮೊಟೊಜಿಪಿ ಪ್ರೇಮಿಗಳಿಗೆ ವಾರಾಂತ್ಯ ದೊಡ್ಡ ಮನರಂಜನೆಯನ್ನು ತರುತ್ತಿದೆ. ಮೊದಲನೆಯದಾಗಿ, ಫ್ಯಾಬಿಯೊ ಕ್ವಾರ್ಟಾರಾರೊ (ಮಾನ್ ಸ್ಟರ್ ಎನರ್ಜಿ ಯಮಹಾ ಮೊಟೊಜಿಪಿ) ಕಿರೀಟವನ್ನು ಎತ್ತಲಿರುವ ಮೊದಲ ಫ್ರೆಂಚ್ ಪ್ರೀಮಿಯರ್ ಕ್ಲಾಸ್ ವಿಶ್ವ ಚಾಂಪಿಯನ್ ಆಗಬಹುದು, ಮತ್ತು ಎರಡನೆಯದು, ಇದು ತವರು ನೆಲದಲ್ಲಿಅಂತಿಮ ಚರಣ ಸುತ್ತಿನಲ್ಲಿ ವ್ಯಾಲೆಂಟಿನೋ ರೊಸ್ಸಿ (ಪೆಟ್ರೋನಾಸ್ ಯಮಹಾ ಎಸ್‌ಆರ್‌ಟಿ) ಸ್ಪರ್ಧಿಸುತ್ತಿದ್ದು, ಈ ಋತುವಿನ ಕೊನೆಯಲ್ಲಿ ದಿಗ್ಗಜ ರೇಸರ್ ತನ್ನ ರೇಸಿಂಗ್ ವೃತ್ತಿಯನ್ನು ಸ್ಥಗಿತಗೊಳಿಸುತ್ತಿದ್ದಾರೆ. ಒಟ್ಟಾರೆ, ಇದು ನಮ್ಮ ನೆನಪಿನಲ್ಲಿ ದೀರ್ಘಕಾಲ ಬದುಕುವ ಇನ್ನೊಂದು ವಾರಾಂತ್ಯವಾಗಲಿದೆ.

ಬಹು ನಿರೀಕ್ಷಿತ ಕ್ರಿಕೆಟ್ ಪಂದ್ಯವು ನಡೆಯುವ ಸಮಯದಲ್ಲಿ ಈ ವರ್ಷದ ಅತ್ಯಂತ ನಿರೀಕ್ಷಿತ ಸ್ಪ್ಯಾನಿಷ್ ಲೀಗ್ ಫುಟ್‌ಬಾಲ್‌ನ ಅತಿದೊಡ್ಡ ಪಂದ್ಯ ಕೂಡಾ ನಡೆಯಲಿದೆ. ಸಾಂಪ್ರದಾಯಿಕ ಎದುರಾಳಿಗಳಾದ ರಿಯಲ್ ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾ ನಡುವಿನ ಎಲ್ ಕ್ಲಾಸಿಕೋ ಪ್ರಾರಂಭವಾಗಲಿದ್ದು, ಅಭಿಮಾನಿಗಳನ್ನು ಕುರ್ಚಿಯ ತುದಿಯಲ್ಲಿ ಕೂರಿಸುವ ಎಲ್ಲಾ ಸಾಧ್ಯತೆಗಳಿವೆ.

ರಿಯಲ್‌ನ ತವರು ಮೈದಾನ ಸ್ಯಾಂಟಿಯಾಗೊ ಬೆರ್ನಾಬ್ಯೂನದಲ್ಲಿ ಸಂಜೆ 7.45 ಕ್ಕೆ ಎಲ್ ಕ್ಲಾಸಿಕೋ ಪಂದ್ಯ ಆರಂಭವಾಗುತ್ತದೆ ಮತ್ತು ಲಿಯೊನೆಲ್ ಮೆಸ್ಸಿ-ಕ್ರಿಸ್ಟಿಯಾನೊ ರೊನಾಲ್ಡೊರಂಥ ದಿಗ್ಗಜರಿಲ್ಲದ ಮೊದಲ ಎಲ್ ಕ್ಲಾಸಿಕೊ ಇದಾಗಿದ್ದು, ಉಭಯ ತಂಡಗಳ ಮೇಲೆ ಹೆಚ್ಚಿನ ಒತ್ತಡವಿದೆ.

ರಾತ್ರಿ 9 ಗಂಟೆಗೆ(ಭಾರತೀಯ ಕಾಲಮಾನ ಪ್ರಕಾರ) ಇಂಗ್ಲೀಷ್ ಪ್ರೀಮಿಯರ್ ಲೀಗ್‌ನಲ್ಲಿ ಓಲ್ಡ್ ಟ್ರಾಫೋರ್ಡ್‌ನಲ್ಲಿ ಮತ್ತೊಂದು ಅತಿದೊಡ್ಡ ಕದನ ನಡೆಯಲಿದೆ. ಮ್ಯಾಂಚೆಸ್ಟರ್ ಯುನೈಟೆಡ್ ಲಿವರ್‌ಪೂಲ್ ಅನ್ನು 'ರೆಡ್ಸ್' ನ ನಡುವಿನ ಘರ್ಷಣೆ ಎಂದೇ ಕರೆಯಲಾಗುತ್ತದೆ.

ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಸಾಮಾನ್ಯವಾಗಿ ಪ್ರೀಮಿಯರ್ ಲೀಗ್ ತೀವ್ರತೆಯನ್ನು ಪಡೆದುಕೊಳ್ಳುವುದರಿಂದ ಕಪ್ ಗೆಲ್ಲುವ ನೆಚ್ಚಿನ ತಂಡಗಳು ತಮ್ಮ ಪ್ರಾಬಲ್ಯವನ್ನು ಪುನಃ ಪ್ರತಿಪಾದಿಸಲು ಸಜ್ಜಾಗಿದ್ದು, ಫುಟ್ಬಾಲ್ ಪ್ರೇಮಿಗಳಿಗೆ ರಸದೌತಣ ಸಿಗಲಿದೆ.

ಇದಲ್ಲದೆ, ಇಟಾಲಿಯನ್ ಸೀರೀ A ಯ ಬಗ್ಗೆಯೂ ಹೇಳಬಹುದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ನಾಪೋಲಿ ಹಾಗೂ ಪ್ರತಿಸ್ಪರ್ಧಿ ಎಎಸ್ ರೋಮಾ ನಡುವೆ 9.30 ಕ್ಕೆ ಭರ್ಜರಿ ಆಟ ಆರಂಭವಾಗಲಿದೆ ಮತ್ತು ಹಾಲಿ ಚಾಂಪಿಯನ್ ಇಂಟರ್ ಮಿಲಾನ್ ಮತ್ತು ಹಿಂದಿನ ಮಾಸ್ಟರ್ಸ್ ಯುವೆಂಟಸ್ ನಡುವೆ 12.30 ಕ್ಕೆ (ಸೋಮವಾರ, ಅಕ್ಟೋಬರ್ 25) ಪಂದ್ಯ ಆರಂಭವಾಗಲಿದೆ .

ಟೆಕ್ಸಾಸ್‌ನ ಆಸ್ಟಿನ್‌ನಲ್ಲಿರುವ ಅಮೆರಿಕದ ರೇಸ ಸರ್ಕ್ಯೂಟ್‌ನಲ್ಲಿ ಯುಎಸ್ ಫಾರ್ಮುಲಾ 1 ರೇಸ್‌ನೊಂದಿಗೆ ದಿನದ ಕ್ರೀಡಾ ಸಂಭ್ರಮ ಮುಕ್ತಾಯವಾಗುತ್ತದೆ, ಇದು ಭಾರತೀಯ ಕಾಲಮಾನ ಮಧ್ಯರಾತ್ರಿ 12.30 ಕ್ಕೆ ಆರಂಭವಾಗುತ್ತದೆ.

ಮ್ಯಾಕ್ಸ್ ವೆರ್ಸ್ಟಾಪೆನ್ ಮತ್ತು ಲೂಯಿಸ್ ಹ್ಯಾಮಿಲ್ಟನ್ ನಡುವೆ ಚಾಂಪಿಯನ್ ಪಟ್ಟಕ್ಕಾಗಿ ರೋಚಕ ಜಟಾಪಟಿ ನಡೆಯುತ್ತಿದೆ ಮತ್ತು ಯುಎಸ್ ಎಫ್1 ರೇಸ್ ನಂತರ ಚಾಂಪಿಯನ್ ಹಾಗೂ ಚಾಂಪಿಯನ್ ರೂಪಿಸಿದ ಸಂಸ್ಥೆ ಬಗ್ಗೆ ತಿಳಿದು ಬರಲಿದೆ.

ನೀವು ಡೈಲಿಹಂಟ್‌ನ ಕ್ರೀಡಾ ವಲಯದೊಂದಿಗೆ ಲೈವ್ ಆಗಿ ವೀಕ್ಷಿಸಬಹುದು ಅಥವಾ ಎಲ್ಲಾ ಅಪ್‌ಡೇಟ್‌ಗಳನ್ನು ಓದಬಹುದು. ನಿರೀಕ್ಷಿಸಿ ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಸ್ಥಳವನ್ನು ನೋಡುತ್ತಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X