ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದು ಭಯೋತ್ಪಾದನೆಯಲ್ಲ, ಸಂಘಿ ಭಯೋತ್ಪಾದನೆ: ದಿಗ್ವಿಜಯ್

|
Google Oneindia Kannada News

ಭೋಪಾಲ್, ಜೂನ್ 16: "ನಾನೆಂದಿಗೂ ಹಿಂದು ಭಯೋತ್ಪಾದನೆ ಎಂಬ ಪದಪ್ರಯೋಗ ಮಾಡಿಲ್ಲ, ಸಂಘಿ ಭಯೋತ್ಪಾದನೆ ಎಂದಿದ್ದೇನಷ್ಟೆ" ಎಂದು ಸಂಘಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್!

"ದಿಗ್ವಿಜಯ್ ಸಿಂಗ್ ಅವರು ಹಿಂದು ಭಯೋತ್ಪಾದನೆ ಎಂಬ ಪದಪ್ರಯೋಗ ಮಾಡಿದ್ದಾರೆ ಎಂಬ ತಪ್ಪು ಮಾಹಿತಿ ನಿಮ್ಮ ಬಳಿ ಇದೆ. ನಾನು 'ಸಂಘಿ ಭಯೋತ್ಪಾದನೆ' ಎಂಬ ಪದವನ್ನಷ್ಟೇ ಪ್ರಯೋಗ ಮಾಡಿದ್ದೇನೆ" ಎಂದು ಅವರು ಮಧ್ಯಪ್ರದೇಶದ ಭೋಪಾಲ್ ನಲ್ಲಿ ಪತ್ರಕರ್ತರಿಗೆ ಹೇಳಿದರು.

ಮಾನಹಾನಿ ಪ್ರಕರಣ: ರಾಹುಲ್ ಗಾಂಧಿ ವಿರುದ್ಧ ಆರೋಪ ನಿಗದಿಮಾನಹಾನಿ ಪ್ರಕರಣ: ರಾಹುಲ್ ಗಾಂಧಿ ವಿರುದ್ಧ ಆರೋಪ ನಿಗದಿ

"ಹಲವು ಬಾಂಬ್ ಬ್ಲಾಸ್ಟ್ ಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತಗಳ ಪ್ರಭಾವವಿದೆ. ಅದು ಮಾಲೇಗಾಂವ್ ಸ್ಫೋಟವಿರಬಹುದು, ಮೆಕ್ಕಾ ಮಸೀದಿ ಸ್ಫೋಟ ಅಥವಾ ಸಂಜೋತಾ ಘಟನೆ ಇರಬಹುದು" ಎಂದು ಅವರು ಹೇಳಿದ್ದಾರೆ.

Spoke about Sanghi terror, not Hindu terror: Digvijaya Singh

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ ಸಂಸದ ಸಂಜಯ್ ಪಾಠಕ್, "ದಿಗ್ವಿಜಯ್ ಸಿಂಗ್ ಅವರ ಹೇಳಿಕೆ ಕೆಲವರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವಂತಿದೆ. ಯಾವ ಧರ್ಮವೂ ಭಯೋತ್ಪಾದನೆಯನ್ನು, ಹಿಂಸೆಯನ್ನು ಪ್ರಚೋದಿಸುವುದಿಲ್ಲ. ಭಾರತದಲ್ಲಿ ವಾಸಿಸುವ ಜನರನ್ನು ಹಿಂದುಗಳೆಮದೇ ಕರೆಯಬೇಕು. ಜನರು ಬೇರೆ ಬೇರೆ ಮನೋಭಾವ ಹೊಂದಿರಬಹುದು. ಅದೇ ಹಿಂಸೆಗೆ ಪ್ರಚೋದನೆ ನೀಡುತ್ತದೆ ಎನ್ನುವುದದಕ್ಕಾಗುವುದಿಲ್ಲ" ಎಂದಿದ್ದಾರೆ.

English summary
Congress leader Digvijaya Singh on Friday clarified that he has always used the term "Sanghi terrorism" and never "Hindu terrorism."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X