ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್‌ 1ರಿಂದ ನವದೆಹಲಿ-ಶಿರಡಿ ನಡುವೆ ನೇರ ವಿಮಾನ ಸೇವೆ

|
Google Oneindia Kannada News

Recommended Video

ಅಕ್ಟೋಬರ್ 1ರಿಂದ ನವದೆಹಲಿ - ಶಿರಡಿ ನಡುವೆ ವಿಮಾನ ಸೇವೆ ಆರಂಭ | Oneindia Kannada

ನವದೆಹಲಿ, ಸೆಪ್ಟೆಂಬರ್ 26 : ನವದೆಹಲಿ ಮತ್ತು ಶಿರಡಿ ನಡುವೆ ಅಕ್ಟೋಬರ್ 1ರಿಂದ ನೇರ ವಿಮಾನ ಹಾರಾಟ ಆರಂಭವಾಗಲಿದೆ. ಅಕ್ಟೋಬರ್‌ನಲ್ಲಿ ಶಿರಡಿ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡು ಒಂದು ವರ್ಷ ಪೂರೈಸುತ್ತಿದೆ.

ಸ್ಪೈಸ್‌ ಜೆಟ್ ನವದೆಹಲಿ ಮತ್ತು ಶಿರಡಿ ನಡುವೆ 4 ವಿಮಾನಗಳ ಹಾರಾಟ ಆರಂಭಿಸುವುದಾಗಿ ಘೋಷಣೆ ಮಾಡಿದೆ. ಸ್ಪೈಸ್‌ ಜೆಟ್ ದೆಹಲಿಯಿಂದ ಶಿರಡಿಗೆ ನೇರ ವಿಮಾನ ಸೇವೆ ನೀಡುತ್ತಿರುವ ಮೊದಲ ಕಂಪನಿಯಾಗಿದೆ.

ಬೆಂಗಳೂರಿನಿಂದ ಹೊಸ ಮಾರ್ಗದಲ್ಲಿ ಹಲವು ವಿಮಾನಗಳ ಸಂಚಾರಬೆಂಗಳೂರಿನಿಂದ ಹೊಸ ಮಾರ್ಗದಲ್ಲಿ ಹಲವು ವಿಮಾನಗಳ ಸಂಚಾರ

ಬೋಯಿಂಗ್ 737 ವಿಮಾನ ಅಕ್ಟೋಬರ್ 1ರಿಂದ ದೆಹಲಿ ಮತ್ತು ಶಿರಡಿ ನಡುವೆ ನೇರವಾಗಿ ಸಂಪರ್ಕ ಕಲ್ಪಿಸಲಿದೆ. ಧಾರ್ಮಿಕ ಕ್ಷೇತ್ರವಾದ ಶಿರಡಿಗೆ ಪ್ರತಿದಿನ ಸುಮಾರು 60 ಸಾವಿರ ಜನರು ಭೇಟಿ ನೀಡುತ್ತಾರೆ.

ಬೆಂಗಳೂರಿನಿಂದ ಶಿರಡಿಗೆ ನಿತ್ಯ ವಿಮಾನ ಸೇವೆಬೆಂಗಳೂರಿನಿಂದ ಶಿರಡಿಗೆ ನಿತ್ಯ ವಿಮಾನ ಸೇವೆ

SpiceJet Shirdi-Delhi-Shirdi from October 1, 2018

ದೆಹಲಿಯಿಂದ ನೇರ ವಿಮಾನ ಸೇವೆ ಆರಂಭವಾದರೆ ಪ್ರತಿದಿನ ಸಾಯಿ ಬಾಬಾ ದರ್ಶನಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆ ಇದೆ. ವಿಮಾನ ಸೇವೆ ಆರಂಭವಾಗುವುದಕ್ಕೂ ಮುನ್ನ ರೈಲು ಮತ್ತು ರಸ್ತೆ ಮಾರ್ಗದಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದರು.

ಕೆಂಪೇಗೌಡ ಏರ್‌ಪೋರ್ಟ್ ಬಳಕೆದಾರರ ಶುಲ್ಕ ಸೆ.16ರಿಂದ ಕಡಿತಕೆಂಪೇಗೌಡ ಏರ್‌ಪೋರ್ಟ್ ಬಳಕೆದಾರರ ಶುಲ್ಕ ಸೆ.16ರಿಂದ ಕಡಿತ

ಅಕ್ಟೋಬರ್ 1, 2017ರಲ್ಲಿ ಶಿರಡಿ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡಿತು. ಏರ್ ಇಂಡಿಯಾದ ಅಲಯನ್ಸ್ ಏರ್‌ನ ಮೂರು ವಿಮಾನಗಳು ಶಿರಡಿಯಿಂದ ಹೈಬರಾಬಾದ್, ಮುಂಬೈಗೆ ಹಾರಾಟ ನಡೆಸುತ್ತಿವೆ.

ಅಂದಹಾಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿರಡಿಗೆ ಸ್ಪೈಸ್‌ ಜೆಟ್ ವಿಮಾನ ಸೇವೆ ಆರಂಭವಾಗಲಿದೆ. ಅಕ್ಟೋಬರ್ 1ರಂದು ಈ ಸೇವೆಗೆ ಚಾಲನೆ ದೊರೆಯಲಿದೆ.

English summary
SpiceJet will start new direct flight service between Shirdi-Delhi-Shirdi from October 1, 2018. Shirdi airport will complete one year on October.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X