ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಟ್ ಏರ್‌ವೇಸ್ ಉದ್ಯೋಗಿಗಳ ಪಾಲಿಗೆ ಆಶಾಕಿರಣವಾದ ಸ್ಪೈಸ್ ಜೆಟ್

|
Google Oneindia Kannada News

zನವದೆಹಲಿ, ಏಪ್ರಿಲ್ 19: ದೇಶದ ಅತಿ ದೊಡ್ಡ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇಸ್ ಆರ್ಥಿಕ ಸಂಕಷ್ಟದಿಂದ ಸದ್ಯಕ್ಕೆ ತನ್ನ ಸಂಪೂರ್ಣ ಹಾರಾಟ ಸ್ಥಗಿತಗೊಳಿಸಿದೆ. ಬಾಕಿ ಇರುವ ಸಾಲ ಮತ್ತು ಸಿಬ್ಬಂದಿ ವೇತನ ಬಾಕಿ ಉಳಿಸಿಕೊಂಡಿರುವ ಸಂಸ್ಥೆ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿದ್ದರೆ, ಮೂರು ನಾಲ್ಕು ತಿಂಗಳಿನಿಂದ ಸಂಬಳ ವಿಲ್ಲದೆ, ಈಗ ಕೆಲಸ ಕಳೆದುಕೊಳ್ಳುವ ಸ್ಥಿತಿಗೆ ಅದರ ಉದ್ಯೋಗಿಗಳು ತಲುಪಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಹೀಗೆ ಕಂಗಾಲಾಗಿರುವ ಜೆಟ್ ಏರ್‌ವೇಸ್‌ನ ಸಾವಿರಾರು ಉದ್ಯೋಗಿಗಳಲ್ಲಿ ಸಣ್ಣನೆಯ ಆಶಾಕಿರಣ ಮೂಡಿದೆ. ಅದು ಜೆಟ್‌ ಏರ್‌ವೇಸ್‌ನ ಪ್ರತಿಸ್ಪರ್ಧಿ ಸಂಸ್ಥೆ ಸ್ಪೈಸ್‌ ಜೆಟ್‌ನಿಂದ.

ಸಂಕಷ್ಟದಲ್ಲಿ ಸಂಸ್ಥೆ: ಹಾರಾಟ ಸ್ಥಗಿತಗೊಳಿಸಲು ನಿರ್ಧರಿಸಿದ ಜೆಟ್ ಏರ್‌ವೇಸ್

ಒಂದೆಡೆ ಅಧಿಕ ನಿರ್ವಹಣಾ ವೆಚ್ಚದಿಂದ ವಿಮಾನ ಸಂಸ್ಥೆಗಳು ಆರ್ಥಿಕ ನಷ್ಟ ಅನುಭವಿಸುತ್ತಿದ್ದರೆ, ಸ್ಪೈಸ್ ಜೆಟ್ ತನ್ನ ಸಂಸ್ಥೆಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಮುಂದಾಗಿದೆ. ಜತೆಗೆ ಜೆಟ್ ಏರ್‌ವೇಸ್‌ನ ಬಡಪಾಯಿ ಉದ್ಯೋಗಿಗಳೆಡೆಗೆ ತನ್ನ ಸಹಾಯ ಹಸ್ತವನ್ನೂ ಚಾಚಿದೆ.

SpiceJet said it has provided jobs to Jet Airways employees will prefer more

ನಾವು ವಿಸ್ತಾರಗೊಳ್ಳುತ್ತಿದ್ದೇವೆ ಮತ್ತು ಬೆಳೆಯುತ್ತಿದ್ದೇವೆ. ಜೆಟ್ ಏರ್‌ವೇಸ್‌ನ ದುರದೃಷ್ಟಕರ ಸ್ಥಗಿತದಿಂದ ಇತ್ತೀಚೆಗೆ ತಮ್ಮ ಕೆಲಸಗಳನ್ನು ಕಳೆದುಕೊಂಡವರಿಗೆ ನಾವು ಮೊದಲ ಆದ್ಯತೆ ನೀಡುತ್ತಿದ್ದೇವೆ. ಈಗಾಗಲೇ ನಾವು 100ಕ್ಕೂ ಹೆಚ್ಚು ಪೈಲಟ್‌ಗಳು, 200ಕ್ಕೂ ಅಧಿಕ ಕ್ಯಾಬಿನ್ ಸಿಬ್ಬಂದಿ ಮತ್ತು 200ಕ್ಕೂ ಹೆಚ್ಚು ತಾಂತ್ರಿಕ ಮತ್ತು ವಿಮಾನ ನಿಲ್ದಾಣ ಸಿಬ್ಬಂದಿಗೆ ಉದ್ಯೋಗ ನೀಡಿದ್ದೇವೆ ಎಂದು ಸ್ಪೈಸ್ ಜೆಟ್ ಹೇಳಿದೆ.

ಇನ್ನೂ ಅನೇಕ ಮಂದಿಗೆ ಉದ್ಯೋಗ ನೀಡಲಾಗುವುದು. ಶೀಘ್ರದಲ್ಲಿಯೇ ಭಾರಿ ಸಂಖ್ಯೆಯ ವಿಮಾನಗಳ ಹಾರಾಟವನ್ನು ಸೇರ್ಪಡೆ ಮಾಡಲಿದ್ದೇವೆ. ಪ್ರಯಾಣಿಕರ ಅನನುಕೂಲತೆಗಳನ್ನು ಕಡಿಮೆ ಮಾಡಲು ಮತ್ತು ಈ ಒತ್ತಡದ ಅವಧಿಯಲ್ಲಿ ಸೀಟ್‌ ಪಡೆದುಕೊಳ್ಳಲು ಕಷ್ಟಪಡುತ್ತಿರುವ ಭಾರತೀಯ ಗ್ರಾಹಕರಿಗೆ ಸೇವೆ ಒದಗಿಸಲು ಸ್ಪೈಸ್ ಜೆಟ್ ಎಲ್ಲ ಸಾಧ್ಯವಾದ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ತಿಳಿಸಿದೆ.

English summary
Private aviation service SpiceJet has offered jobs to the Jet Airways who lost their jobs recently. We have already recruited many and we will do more, it said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X