ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾರಾಟ ಸ್ಥಗಿತಗೊಳಿಸಿರುವ ಜೆಟ್ ಏರ್‌ವೇಸ್‌ಗೆ ಸ್ಪೈಸ್‌ಜೆಟ್ ಬಣ್ಣ!

|
Google Oneindia Kannada News

ನವದೆಹಲಿ, ಏಪ್ರಿಲ್ 22: ಸಂಪೂರ್ಣ 'ನೆಲಕಚ್ಚಿರುವ' ಜೆಟ್ ಏರ್‌ವೇಸ್ ವಿಮಾನಯಾನ ಸಂಸ್ಥೆ ಸಿಬ್ಬಂದಿಗೆ ಉದ್ಯೋಗ ನೀಡುವ ಮೂಲಕ ಸಹಾಯಹಸ್ತ ಚಾಚಿರುವ ಸ್ಪೈಸ್ ಜೆಟ್, ಈಗ ಹಾರಾಟ ನಿಲ್ಲಿಸಿರುವ ಜೆಟ್ ಏರ್‌ವೇಸ್‌ ವಿಮಾನಗಳ ಮರು ಹಾರಾಟಕ್ಕೆ ಸಿದ್ಧತೆ ನಡೆಸಿದೆ. ಜತೆಗೆ ಜೆಟ್ ಏರ್‌ವೇಸ್‌ಗೆ ತನ್ನ 'ಬಣ್ಣ'ವನ್ನೂ ನೀಡುತ್ತಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಜೆಟ್‌ ಏರ್‌ವೇಸ್ ಬೋಯಿಂಗ್ ಬಿ737 ವಿಮಾನಕ್ಕೆ ಸ್ಪೈಸ್‌ಜೆಟ್ ತನ್ನ ವಿಶಿಷ್ಟ ಕೆಂಪು ಗುರುತಿನ ಲೋಗೋವನ್ನು ಮೂಡಿಸುತ್ತಿದೆ. ಇದರ ಜತೆಗೆ ಜೆಟ್ ಏರ್‌ವೇಸ್‌ನ ಮೂಲ ಬಣ್ಣದ ಗುರುತಾದ ಹಳದಿ ಮತ್ತು ನೀಲಿಪಟ್ಟಿಯೂ ಇರಲಿದೆ. ಜೆಟ್‌ಏರ್‌ವೇಸ್‌ನ ಕೆಲವು ವಿಮಾನಗಳನ್ನು ಸ್ಪೈಸ್ ಜೆಟ್ ತನ್ನ ಸುಪರ್ದಿಯಲ್ಲಿ ಸಂಚಾರಕ್ಕೆ ಬಳಸಿಕೊಳ್ಳಲಿದೆ.

ಜೆಟ್ ಏರ್‌ವೇಸ್ ಉದ್ಯೋಗಿಗಳ ಪಾಲಿಗೆ ಆಶಾಕಿರಣವಾದ ಸ್ಪೈಸ್ ಜೆಟ್ಜೆಟ್ ಏರ್‌ವೇಸ್ ಉದ್ಯೋಗಿಗಳ ಪಾಲಿಗೆ ಆಶಾಕಿರಣವಾದ ಸ್ಪೈಸ್ ಜೆಟ್

ಮೂಲಗಳ ಪ್ರಕಾರ ಜೆಟ್ ಏರ್‌ವೇಸ್‌ನ ಕೆಲವು ವಿಮಾನಗಳು ಮುಂದಿನ ವಾರದಿಂದ ತಮ್ಮ ಹಾರಾಟ ಆರಂಭಿಸಲಿವೆ.

SpiceJet repaint grounded jet airways with its red logo

ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಕೂಡ ಅಂತಾರಾಷ್ಟ್ರೀಯ ಹಾರಾಟಗಳಿಗೆ ದೊಡ್ಡ ವಿಮಾನಗಳನ್ನು ಬಳಸಿಕೊಳ್ಳಲು ಜೆಟ್ ಏರ್‌ವೇಸ್ ಜತೆ ಮಾತುಕತೆ ನಡೆಸುತ್ತಿದೆ.

ವಿಮಾನ ಹಾರಾಟಗಳ ಸ್ಥಗಿತದಿಂದ ಜೆಟ್ ಏರ್‌ವೇಸ್‌ನ ಸಾವಿರಾರು ಉದ್ಯೋಗಿಗಳು ಕೆಲಸ ನಷ್ಟದ ಭೀತಿಯಲ್ಲಿದ್ದಾರೆ. ಹಲವು ತಿಂಗಳಿನಿಂದ ಸಂಬಳವಿಲ್ಲದೆ ಪರದಾಡುತ್ತಿದ್ದಾರೆ. ಅವರಲ್ಲಿ ಅನೇಕರಿಗೆ ಸ್ಪೈಸ್ ಜೆಟ್ ಈಗಾಗಲೇ ಉದ್ಯೋಗ ನೀಡಿದೆ. 100ಕ್ಕೂ ಅಧಿಕ ಪೈಲಟ್‌ಗಳು, 200ಕ್ಕೂ ಹೆಚ್ಚು ಕ್ಯಾಬಿನ್ ಸಿಬ್ಬಂದಿ ಮತ್ತು ಸುಮಾರು 200 ತಾಂತ್ರಿಕ ಹಾಗೂ ವಿಮಾನ ನಿಲ್ದಾಣ ಸಿಬ್ಬಂದಿಯನ್ನು ಈಗಾಗಲೇ ನೇಮಿಸಿಕೊಳ್ಳಲಾಗಿದೆ. ಇನ್ನೂ ಅನೇಕರಿಗೆ ಉದ್ಯೋಗ ನೀಡಲಾಗುವುದು ಎಂದು ಸ್ಪೈಸ್ ಜೆಟ್ ತಿಳಿಸಿತ್ತು.

ಸಂಕಷ್ಟದಲ್ಲಿ ಸಂಸ್ಥೆ: ಹಾರಾಟ ಸ್ಥಗಿತಗೊಳಿಸಲು ನಿರ್ಧರಿಸಿದ ಜೆಟ್ ಏರ್‌ವೇಸ್ ಸಂಕಷ್ಟದಲ್ಲಿ ಸಂಸ್ಥೆ: ಹಾರಾಟ ಸ್ಥಗಿತಗೊಳಿಸಲು ನಿರ್ಧರಿಸಿದ ಜೆಟ್ ಏರ್‌ವೇಸ್

ಜೆಟ್‌ ಏರ್‌ವೇಸ್‌ನಲ್ಲಿ ಸುಮಾರು 1,300 ಪೈಲಟ್‌ಗಳಿದ್ದು ಅವರಲ್ಲಿ 400ಕ್ಕೂ ಹೆಚ್ಚು ಪೈಲಟ್‌ಗಳು ಬೇರೆ ಬೇರೆ ವಿಮಾನಯಾನ ಸಂಸ್ಥೆಗಳನ್ನು ಸೇರಿಕೊಂಡಿದ್ದಾರೆ. ಅಂದಾಜು 40 ಎಂಜಿನಿಯರ್‌ಗಳು ಕೂಡ ಕಂಪೆನಿ ತ್ಯಜಿಸಿದ್ದಾರೆ.

English summary
Private aviation service SpiceJet has started to repaint the grounded Jet Airways with its Logo in Red. Before SpiceJet had said it has recruited many employees of Jet Airways and will do more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X