ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪೈಸ್ ಜೆಟ್ ನಲ್ಲಿನ ಬ್ಯಾಗೇಜ್ ಸಾಗಾಣಿಕೆ ಶುಲ್ಕ ಗಣನೀಯ ಏರಿಕೆ

ಸ್ಪೈಸ್ ಜೆಟ್ ಕಂಪನಿಯಿಂದ ಬ್ಯಾಗೇಜ್ ಶುಲ್ಕ ಏರಿಕೆ. 5 ಕೆಜಿಗಿಂತ ಹೆಚ್ಚಿನ ಬ್ಯಾಗೇಜ್ ಗೆ ಸ್ಪೈಸ್ ಜೆಟ್ ಏರ್ ಲೈನ್ಸ್ ಸಂಸ್ಥೆಯ ನಿರ್ಧಾರದಿಂದ ಎಲ್ಲಾ ಪ್ರಯಾಣಿಕರಲ್ಲಿ ಆತಂಕ.

|
Google Oneindia Kannada News

ಬೆಂಗಳೂರು, ಆಗಸ್ಟ್ 19: ಬಜೆಟ್ ವಿಮಾನವೆಂದೇ ಖ್ಯಾತಿ ಗಳಿಸಿರುವ ಸ್ಪೈಸ್ ಜೆಟ್ ವಿಮಾನ ಸೇವಾ ಸಂಸ್ಥೆಯು, ತಾನು ಒದಗಿಸುವ ಪ್ರಯಾಣಿಕರ ಬ್ಯಾಗೇಜ್ ಸಾಗಾಣಿಕೆ ಶುಲ್ಕವನ್ನು ಗಣನೀಯವಾಗಿ ಹೆಚ್ಚಿಸಿದೆ.

ಈ ಮೊದಲು ಇದ್ದಂತೆ, ಶುಲ್ಕ ರಹಿತ ಬ್ಯಾಗ್ ನ ಭಾರದ ಮಿತಿಯನ್ನು 15ರಿಂದ 5ಕ್ಕೆ ಇಳಿಸಲಾಗಿದ್ದು, 5 ಕೆಜಿಗಿಂತ ಹೆಚ್ಚಿನ ಭಾರವಿರುವ ಪ್ರತಿ ಬ್ಯಾಗೇಜ್ ಗೆ ಇನ್ನು 1,425 ರು. ಶುಲ್ಕ ನಿಗದಿಪಡಿಸಲಾಗಿದೆ. ಈ ಮೊದಲು 15 ಕೆಜಿ ಮೇಲ್ಪಟ್ಟ ಭಾರದ ಲಗೇಜಿಗೆ 500 ರು. ತೆರಬೇಕಿತ್ತು. ಈಗ, ಭಾರದ ಮಿತಿ ಹಾಗೂ ಶುಲ್ಕ ಪದ್ಧತಿ - ಈ ಎರಡರಲ್ಲೂ ಬದಲಾವಣೆ ತರಲಾಗಿದೆ.

SpiceJet hikes excess baggage fee, other airlines might follow suit

ಆದರೆ, ವಿಮಾನ ಪ್ರಯಾಣಿಕರಿಗೆ ಆತಂಕವಾಗುವ ವಿಚಾರ ಇದಲ್ಲ. ಈಗ ಸ್ಪೈಸ್ ಜೆಟ್ ಕೈಗೊಂಡಿರುವ ಕ್ರಮವನ್ನು ಇತರ ವಿಮಾನ ಯಾನ ಸಂಸ್ಥೆಗಳೂ ಅನುಕರಿಸಬಹುದು ಎಂಬ ಆತಂಕ ಎದುರಾಗಿದೆ.

ಕೆಲವು ದಿನಗಳ ಹಿಂದಷ್ಟೇ, ನಾಗರಿಕ ವಿಮಾನ ಯಾನ ಸೇವಾ ಸಂಸ್ಥೆಗಳ ಮಹಾ ನಿರ್ದೇಶಕರ ಕಚೇರಿಯು, ಎಲ್ಲಾ ಖಾಸಗಿ ವಿಮಾನ ನಿಲ್ದಾಣಗಳಲ್ಲಿ 15ರಿಂದ 20 ಕೆಜಿ ವರೆಗಿನ ಬ್ಯಾಗೇಜ್ ಗಳ ಮೇಲೆ ಪ್ರತಿ ಕೆಜಿಗೆ 100 ರು. ಶುಲ್ಕ ವಿಧಿಸುವ ಆದೇಶಕ್ಕೆ ಅಂಕಿತ ಹಾಕಿತ್ತು.

ಆದರೆ, ಈ ಆದೇಶವನ್ನು ಭಾರತೀಯ ಖಾಸಗಿ ವಿಮಾನ ಸೇವಾ ಸಂಸ್ಥೆಗಳ ಒಕ್ಕೂಟ (ಫಿಯಾ) ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಇದರ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್, ಆದೇಶವನ್ನು ರದ್ದುಗೊಳಿಸಿ, ಪ್ರಯಾಣಿಕರಿಗೆ ಆಗಬೇಕಿದ್ದ ಹೆಚ್ಚಿನ ಶುಲ್ಕದ ಭಾರವನ್ನು ಇಳಿಸಿತು.

ಹಾಗೆ ಶುಲ್ಕ ಏರಿಕೆ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದ 'ಫಿಯಾ' ಸದಸ್ಯ ಸಂಸ್ಥೆಯಾದ ಸ್ಪೈಸ್ ಜೆಟ್ ಕಂಪನಿಯೇ ಲಗೇಜ್ ನ ಶುಲ್ಕವನ್ನು ಏರಿಸಿರುವುದು ಪ್ರಯಾಣಿಕರಲ್ಲಿ ದಿಗಿಲು ಹುಟ್ಟಿಸಲು ಕಾರಣವಾಗಿದೆ.

English summary
Budget passenger carrier SpiceJet on Friday hiked its excess baggage charges. According to the airlines website, the fee on excess checked-in baggage above the free 15 kg limit for 5 kg has been hiked from Rs 500 earlier to Rs 1,425.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X