ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಪರಿಣಾಮ; ಪ್ರಯಾಣಿಕ ವಿಮಾನದಲ್ಲಿ ಸರಕು ಸಾಗಣೆ!

|
Google Oneindia Kannada News

ನವದೆಹಲಿ, ಏಪ್ರಿಲ್ 08 : ಕೊರೊನಾ ಪರಿಣಾಮದಿಂದ ದೇಶದಲ್ಲಿ ವಿಮಾನ ಸೇವೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಆದರೆ, ಅಗತ್ಯ ವಸ್ತುಗಳ ಸಾಗಣೆಗಾಗಿ ವಿಮಾನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮೊದಲ ಬಾರಿಗೆ ಪ್ರಯಾಣಿಕರ ವಿಮಾನದಲ್ಲಿ ಅಗತ್ಯ ವಸ್ತುಗಳನ್ನು ಸಾಗಣೆ ಮಾಡಲಾಗಿದೆ.

ದೇಶದಲ್ಲಿ ವಿಮಾನ ಸೇವೆ ಒದಗಿಸುವ ಸ್ಪೈಸ್ ಜೆಟ್ ಕಂಪನಿ ದೆಹಲಿ, ಮುಂಬೈ, ಚೆನ್ನೈಗೆ ಅಗತ್ಯ ವಸ್ತುಗಳನ್ನು ಸಾಗಣೆ ಮಾಡಿದೆ. ಪ್ರಯಾಣಿಕರ ವಿಮಾನದಲ್ಲಿ ಸೀಟಿನ ನಡುವೆ ಬಾಕ್ಸ್‌ಗಳನ್ನು ಇಟ್ಟು ಸರಕುಗಳನ್ನು ಸಾಗಣೆ ಮಾಡಲಾಗಿದೆ. ಈ ಕುರಿತ ಫೋಟೋವನ್ನು ಟ್ವಿಟರ್‌ನಲ್ಲಿ ಹಾಕಿದೆ.

ಬೆಂಗಳೂರಿಗೆ ಸರಕು ಸಾಗಣೆ; ನೈಋತ್ಯ ರೈಲ್ವೆ ದಿಟ್ಟ ಹೆಜ್ಜೆ ಬೆಂಗಳೂರಿಗೆ ಸರಕು ಸಾಗಣೆ; ನೈಋತ್ಯ ರೈಲ್ವೆ ದಿಟ್ಟ ಹೆಜ್ಜೆ

ಔಷಧಿ, ತರಕಾರಿ, ಹಣ್ಣುಗಳನ್ನು ಹೊತ್ತ ವಿಮಾನಗಳು ದೆಹಲಿ, ಮುಂಬೈ ಮತ್ತು ಚೆನ್ನೈ ನಡುವೆ ಹಾರಾಟ ನಡೆಸಿವೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಪ್ರಯಾಣಿಕರ ವಿಮಾನದಲ್ಲಿ ಸರಕುಗಳನ್ನು ಸಾಗಣೆ ಮಾಡಲು ವಿಮಾನಯಾನ ಸಚಿವಾಲಯ ಒಪ್ಪಿಗೆ ನೀಡಿದೆ.

ಜೂನ್ ತಿಂಗಳ ಸರಕು ಸೇವಾ ತೆರಿಗೆ (ಜಿಎಸ್ಟಿ) ಗಳಿಕೆ ಕುಸಿತ ಜೂನ್ ತಿಂಗಳ ಸರಕು ಸೇವಾ ತೆರಿಗೆ (ಜಿಎಸ್ಟಿ) ಗಳಿಕೆ ಕುಸಿತ

SpiceJet Flies With Urgent Medical Supplies On Passenger Aircraft

ಮಂಗಳವಾರ ಸಂಜೆ ಮುಂಬೈನಿಂದ ದೆಹಲಿಗೆ ಬಂದಿಳಿದ ವಿಮಾನದಲ್ಲಿ 15 ಟನ್ ಅಗತ್ಯ ವಸ್ತುಗಳನ್ನು ತರಲಾಯಿತು. ಅಲ್ಲಿಂದ ಬೇರೆ-ಬೇರೆ ನಗರಗಳಿಗೆ ಸಾಗಣೆ ಮಾಡಲಾಯಿತು. ಸರಕುಗಳ ವಾಸನೆ ಸೀಟ್‌ನಲ್ಲಿ ಉಳಿಯದಂತೆ ಮಾಡಲು ವಿಶೇಷ ಸೀಟ್‌ ಕವರ್‌ಗಳನ್ನು ಬಳಕೆ ಮಾಡಲಾಗಿದೆ.

ಲಾಕ್ ಡೌನ್ ವಿಸ್ತರಣೆಗೆ ಕೇಂದ್ರ ಸರ್ಕಾರದ ಚಿಂತನೆ? ಲಾಕ್ ಡೌನ್ ವಿಸ್ತರಣೆಗೆ ಕೇಂದ್ರ ಸರ್ಕಾರದ ಚಿಂತನೆ?

ದೆಹಲಿಯಿಂದ ಹೊರಟ ವಿಮಾನ ಚೆನ್ನೈ ತಲುಪಿತು. ಅಲ್ಲಿಂದ ಗುಜರಾತ್‌ನ ಸೂರತ್‌ಗೆ ಹಾರಾಟ ನಡೆಸಿ, ಬಳಿಕ ಚೆನ್ನೈಗೆ ವಾಪಸ್ ಅಯಿತು. ಚೆನ್ನೈನಿಂದ ಹೊರಟ ವಿಮಾನ ಮುಂಬೈಗೆ ತಲುಪಿ, ಅಲ್ಲಿಂದ ದೆಹಲಿಗೆ ತೆರಳಿತು.

"ಲಾಕ್ ಡೌನ್ ಘೋಷಣೆಯಾದ ಬಳಿಕ 1400 ಟನ್ ಅಗತ್ಯ ವಸ್ತುಗಳನ್ನು ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನದ ಮೂಲಕ ಸಾಗಣೆ ಮಾಡಿದ್ದೇವೆ" ಎಂದು ಸ್ಪೈಸ್ ಜೆಟ್ ಅಧ್ಯಕ್ಷ ಮತ್ತು ಎಂಡಿ ಅಜಯ್ ಸಿಂಗ್ ಹೇಳಿದ್ದಾರೆ.

ಸ್ಪೈಸ್ ಜೆಟ್ ವಿವಿಧ ರಾಜ್ಯಗಳಿಗೆ ಔಷಧಿ, ವೈದ್ಯಕೀಯ ಉಪಕರಣಗಳನ್ನು ಸಾಗಣೆ ಮಾಡಲು 5 ವಿಮಾನಗಳನ್ನು ಬಳಕೆ ಮಾಡುತ್ತಿದೆ. ಏಪ್ರಿಲ್ 6ರ ತನಕ ಸ್ಪೈಸ್ ಜೆಟ್ 150 ವಿಮಾನಗಳ ಮೂಲಕ ವಿವಿಧ ರಾಜ್ಯಗಳಿಗೆ ಸರಕುಗಳನ್ನು ಸಾಗಣೆ ಮಾಡಿದೆ.

English summary
SpiceJet operated passenger aircraft for carrying urgent medical supplies, vegetables and fruits. First time permission was granted to use the passenger flight to supplies cargo due to lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X