ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

28 ಹೊಸ ದೇಶಿಯ ವಿಮಾನಗಳ ಹಾರಾಟ; ಸ್ಪೈಟ್ ಜೆಟ್

|
Google Oneindia Kannada News

ನವದೆಹಲಿ, ಅಕ್ಟೋಬರ್ 25; ಸ್ಪೈಸ್ ಜೆಟ್ 28 ಹೊಸ ದೇಶಿಯ ವಿಮಾನಗಳ ಹಾರಾಟವನ್ನು ಆರಂಭಿಸಲಿದೆ. ಪ್ರವಾಸಿ ತಾಣಗಳನ್ನು ಸಂಪರ್ಕಿಸಲು ತಡೆ ರಹಿತ ವಿಮಾನ ಸೇವೆಗಳನ್ನು ಆರಂಭಿಸಲಾಗುತ್ತದೆ ಎಂದು ಸೋಮವಾರ ಘೋಷಣೆ ಮಾಡಲಾಗಿದೆ.

ಅಕ್ಟೋಬರ್ 31ರಿಂದಲೇ ಸ್ಪೈಸ್ ಜೆಟ್‌ನ 28 ಹೊಸ ದೇಶಿಯ ವಿಮಾನಗಳು ಹಾರಾಟ ಆರಂಭಿಸಲಿವೆ. ರಾಜಸ್ಥಾನದ ಜೈಪುರ, ಜೋಧ್‌ಪುರ್, ಉದಾನ್‌ಪುರ್‌ಗೆ ಹೊಸ ವಿಮಾನಗಳು ಸಂಚಾರ ನಡೆಸಲಿವೆ. ದೇಶದ ವಿವಿಧ ನಗರಳನ್ನು ಸ್ಪೈಸ್ ಜೆಟ್ ವಿಮಾನಗಳು ಈಗಾಗಲೇ ಸಂಪರ್ಕಿಸುತ್ತಿವೆ.

 ಆಗಸದಲ್ಲಿ ಮದುವೆ; ಸ್ಪೈಸ್ ಜೆಟ್ ಸಿಬ್ಬಂದಿ ಅಮಾನತು ಮಾಡಿದ ಡಿಜಿಸಿಎ ಆಗಸದಲ್ಲಿ ಮದುವೆ; ಸ್ಪೈಸ್ ಜೆಟ್ ಸಿಬ್ಬಂದಿ ಅಮಾನತು ಮಾಡಿದ ಡಿಜಿಸಿಎ

ದೇಶದ ವಿವಿಧ ಪ್ರವಾಸಿ ತಾಣಗಳನ್ನು ಸಂಪರ್ಕಿಸಲು ತಡೆ ರಹಿತ ವಿಮಾನಗಳ ಸಂಚಾರವನ್ನು ಆರಂಭಿಸಲಾಗುತ್ತಿದೆ. ಕೋವಿಡ್ ಪ್ರಕರಣಗಳು ಕಡಿಮೆಯಾದ ಹಿನ್ನಲೆಯಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗೆ ಸಂಖ್ಯೆಯೂ ಹೆಚ್ಚಾಗುತ್ತಿದೆ.

ದೇಶದಲ್ಲಿ 24 ಹೊಸ ಮಾರ್ಗದಲ್ಲಿ ಸ್ಪೈಸ್ ಜೆಟ್ ವಿಮಾನ ಸಂಚಾರ ದೇಶದಲ್ಲಿ 24 ಹೊಸ ಮಾರ್ಗದಲ್ಲಿ ಸ್ಪೈಸ್ ಜೆಟ್ ವಿಮಾನ ಸಂಚಾರ

Spicejet

ಸ್ಪೈಟ್ ಜೆಟ್ ಬಾಗ್ಡೋರ-ಅಹಮದಾಬಾದ್, ಕೋಲ್ಕತ್ತಾ-ಶ್ರೀನಗರ ವಿಮಾನಗಳನ್ನು ಆರಂಭಿಸಿದೆ. ಬೆಂಗಳೂರು-ಪುಣೆ ನಡುವೆ ಎರಡು ಹೊಸ ವಿಮಾನಗಳ ಹಾರಾಟ ಆರಂಭಿಸುವುದಾಗಿಯೂ ಸೋಮವಾರ ಪ್ರಕಟಿಸಿದೆ.

 ಸ್ಪೈಸ್ ಜೆಟ್ ಸಂಸ್ಥೆಯಿಂದ 20 ಹೊಸ ದೇಶಿ ವಿಮಾನ ಸ್ಪೈಸ್ ಜೆಟ್ ಸಂಸ್ಥೆಯಿಂದ 20 ಹೊಸ ದೇಶಿ ವಿಮಾನ

ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ದೇಶಿಯ ವಿಮಾನ ಸೇವೆಗೆ ಹೇರಿದ್ದ ನಿರ್ಬಂಧಗಳನ್ನು ಸಡಿಲಗೊಳಸಿತ್ತು. ಅಕ್ಟೋಬರ್ 18ರಿಂದಲೇ ವಿಮಾನಗಳಲ್ಲಿ ಶೇ 100ರಷ್ಟು ಪ್ರಯಾಣಿಕರ ಸಂಚಾರ ನಡೆಸಲು ಅನುಮತಿ ನೀಡಲಾಗಿದೆ.

ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಮಾರ್ಚ್‌ನಲ್ಲಿ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು. ಮೇ 25ರಂದು ದೇಶಿಯ ವಿಮಾನಗಳ ಹಾರಾಟಕ್ಕೆ ಸರ್ಕಾರ ಅವಕಾಶ ನೀಡಿತ್ತು. ಆದರೆ ಕೇವಲ 33ರಷ್ಟು ಪ್ರಯಾಣಿಕರು ಮಾತ್ರ ಸಂಚಾರ ನಡೆಸಬೇಕು ಎಂದು ಹೇಳಿತ್ತು.

ಬಳಿಕ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಶೇ 85ರಷ್ಟು ಜನರ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ದೇಶದ ವಿವಿಧ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ, ವಿಮಾನ ಪ್ರಯಾಣಕ್ಕೂ ಬೇಡಿಕೆ ಹೆಚ್ಚಾದ ಹಿನ್ನಲೆಯಲ್ಲಿ ಅಕ್ಟೋಬರ್ 18ರಿಂದ ಶೇ 100ರಷ್ಟು ಪ್ರಯಾಣಿಕರ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಸ್ಪೈಸ್ ಜೆಟ್ ಅಕ್ಟೋಬರ್ 18ರಂದು ಕುಶಿನಗರದಿಂದ ಮುಂಬೈ ಮತ್ತು ಕೋಲ್ಕತ್ತಾಗೆ ಹೊಸ ವಿಮಾನ ಸೇವೆಯನ್ನು ಆರಂಭಿಸಿದೆ. ಬೋಯಿಂಗ್ 737 ಮತ್ತು ಕ್ಯೂ 400 ವಿಮಾನಗಳನ್ನು ಈ ಮಾರ್ಗದಲ್ಲಿ ಓಡಿಸುತ್ತಿದೆ.

ಸಂಸ್ಥೆಯ ಸಿಸಿಒ ಶಿಲ್ಪಾ ಭಾಟಿಯಾ ಹೊಸ ವಿಮಾನಗಳ ಹಾರಾಟದ ಬಗ್ಗೆ ಮಾತನಾಡಿದ್ದಾರೆ, "ಹಬ್ಬಗಳ ಹಿನ್ನಲೆಯಲ್ಲಿ ವಿಮಾನ ಸಂಚಾರಕ್ಕೆ ಬೇಡಿಕೆ ಅಧಿಕವಾಗಿದೆ. ಪ್ರವಾಸಿ ತಾಣಗಳಿಗೆ ಜನರನ್ನು ಕರೆದುಕೊಂಡು ಹೋಗಲು ಹೊಸ ವಿಮಾನಗಳನ್ನು ಪರಿಚಯಿಸಲಾಗುತ್ತಿದೆ" ಎಂದು ಹೇಳಿದ್ದಾರೆ.

ಬೆಳಗಾವಿ ವಿಮಾನ ನಿಲ್ದಾಣ; ಭಾನುವಾರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಹೈದರಾಬಾದ್-ಬೆಳಗಾವಿ ಮಾರ್ಗದ ಸ್ಪೈಸ್ ಜೆಟ್ ವಿಮಾನ ನಿಗದಿತ ರನ್ ವೇ ತುದಿಯ ಬದಲು ಇನ್ನೊಂದು ತುದಿಯಲ್ಲಿ ತಪ್ಪಾಗಿ ಇಳಿದಿತ್ತು. ಇದರಿಂದಾಗಿ ಇಬ್ಬರು ಪೈಲೆಟ್‌ಗಳನ್ನು ಅಮಾನತು ಮಾಡಲಾಗಿದೆ.

ಅಕ್ಟೋಬರ್ 24ರಂದು ಬೆಳಗಾವಿ ವಿಮಾನ ನಿಲ್ದಾಣದ ವಿಮಾನಯಾನ ಸಂಚಾರ ನಿಯಂತ್ರಕ ವಿಭಾಗ ರನ್‌ ವೇ 26ರಲ್ಲಿ ಇಳಿಯಲು ಸೂಚನೆ ನೀಡಿತ್ತು. ಆದರೆ ಪೈಲೆಟ್‌ಗಳು ವಿಮಾನವನ್ನು ರನ್‌ ವೇ 8ರಲ್ಲಿ ಇಳಿಸಿದರು. ವಿಮಾನ ಸುರಕ್ಷಿತವಾಗಿಯೇ ಲ್ಯಾಂಡ್ ಆಗಿತ್ತು.

ವಿಮಾನ ಸುರಕ್ಷಿತವಾಗ ಲ್ಯಾಂಡ್ ಆಗಿದೆ. ಆದರೆ ವಿಮಾನಯಾನ ಸಂಸ್ಥೆ ಈ ಬೆಳವಣಿಗೆ ಕುರಿತು ತಕ್ಷಣ ಕ್ರಮ ಕೈಗೊಂಡಿದ್ದು, ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯಕ್ಕೆ ಸಹ ಈ ಕುರಿತು ಮಾಹಿತಿ ನೀಡಿದೆ.

Recommended Video

ಶಮಿ‌ ಪರ ನಿಂತ ಟೀಂ ಇಂಡಿಯಾ ಕ್ರಿಕೆಟಿಗರು:ಯಾಕೆ ಗೊತ್ತಾ? | Oneindia Kannada

ಡಿಎಎಸ್ಎಚ್‌8 ಕ್ಯೂ 400 ವಿಮಾನವು ಹೈದರಾಬಾದ್‌ನಿಂದ ಬೆಳಗಾವಿಗೆ ಬಂದಿತ್ತು. ನಿಗದಿತ ರನ್‌ ವೇ ಬದಲು ಬೇರೆ ರನ್‌ ವೇಯಲ್ಲಿ ವಿಮಾನ ಇಳಿಸಿದ ಇಬ್ಬರು ಪೈಲೆಟ್ ಅಮಾನತಿನಲ್ಲಿಡಲಾಗಿದೆ.

English summary
Spicejet announced 28 new domestic flights across the India from October 31, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X